Asianet Suvarna News Asianet Suvarna News

ಚಾಮರಾಜನಗರ: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಾಧಿಕಾರದ ಸಿಬ್ಬಂದಿ ಮಹಾದೇವಸ್ವಾಮಿ ಎಂಬುವರ ವಿರುದ್ಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Accused Arrested for Sexual Harassment of Women Staff in Chamarajanagara grg
Author
First Published Jan 4, 2024, 11:00 PM IST

ಹನೂರು(ಜ.04):  ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಾಧಿಕಾರದ ಸಿಬ್ಬಂದಿ ಮಹಾದೇವಸ್ವಾಮಿ ಎಂಬುವರ ವಿರುದ್ಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಮಲೆಮಹದೇಶ್ವರ ಬೆಟ್ಟದ ನಿವಾಸಿ ಮಹದೇವಸ್ವಾಮಿ ಬಂಧಿತ ಆರೋಪಿ.

ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಐದು ವರ್ಷಗಳಿಂದ ದ್ವಿತೀಯ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನನಗೆ ಡಾರ್ಮೆಟ್ರಿಯಲ್ಲಿ ಸ್ವಾಗತಕಾರರಾಗಿರುವ ಮಹದೇವಸ್ವಾಮಿ ಆಲಿಯಾಸ್ ಚಿಕ್ಕಿನಉಂಡೆ ಮಹದೇವಸ್ವಾಮಿ ಎಂಬುವವರು ಬಹಳ ಅಸಭ್ಯವಾಗಿ ವರ್ತಿಸುತ್ತಾರೆ. ಕಳೆದ ಡಿ. 28 ರಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ನಾನು ಪ್ರಾಧಿಕಾರದ ಕಚೇರಿಗೆ ಸಹಿ ಮಾಡಲು ಮೆಟ್ಟಿಲು ಹತ್ತಿಕೊಂಡು ಹೋಗುವಾಗ ಮಹದೇವಸ್ವಾಮಿ ನನ್ನನ್ನು ಕೆಲಸ ಆಗುವವರೆಗೆ ಗಂಡ ಆದ ಮೇಲೆ ಮಿಂಡ ಎಂದು ಕೆಟ್ಟ ಪದ ಬಳಕೆ ಮಾಡಿ ನನ್ನ ಮೇಲೆ ಲೈಂಗಿಕ ವರ್ತನೆ ತೋರಿರುತ್ತಾರೆ. ನನ್ನ ಮೈ ಮುಟ್ಟಿ ಮಾತನಾಡುತ್ತಾರೆ. ಈ ಬಗ್ಗೆ ನಾನು ಮೇಲಾಧಿಕಾರಿಗಳಿಗೆ ದೂರು ನೀಡಿದ್ದೇನೆ.
ಈ ದಿನ ನಮ್ಮ ಮೇಲಾಧಿಕಾರಿಗಳ ಕಚೇರಿಗೆ ದೇವಸ್ಥಾನದ ಸೆಕ್ಯೂರಿಟಿಗಳಾದ ರಾಣಿ, ಅಂಬಿಕಾ, ಮಾದೇವಿ, ಮಹೇಶ್ವರಿ, ಕವಿತಾ ರೊಂದಿಗೆ ಕಚೇರಿಗೆ ಹೋಗುತ್ತಿದ್ದಾಗ ನಮ್ಮ ಅನುಮತಿ ಇಲ್ಲದೆ ನಮ್ಮ ಭಾವಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವುದು ಮಾಡಿರುತ್ತಾರೆ. ಕಚೇರಿ ಆವರಣದಲ್ಲಿ ನಿಂತುಕೊಂಡು ನನ್ನ ಕುರಿತು ಅಶ್ಲೀಲ ಪದಗಳಿಂದ ಬೈಯುತ್ತಿದ್ದರು. ಇವರಿಂದ ನಮಗೆ ಜೀವ ಬೆದರಿಕೆ ಇದ್ದು ನಮಗೆ ಹಾಗೂ ನಮ್ಮ ಮಹಿಳಾ ನೌಕರರಿಗೆ ಕರ್ತವ್ಯ ಮಾಡಲು ತೊಂದರೆ ಕೊಡುತ್ತಿರುವ ಮಹಾದೇವಸ್ವಾಮಿ ರವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಪ್ರಾಧಿಕಾರದ ಮಹಿಳಾ ಸಿಬ್ಬಂದಿ ಸುಮಿತ್ರ ಬಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಕರಸೇವಕ ಶ್ರೀಕಾಂತ್ ಪೂಜಾರಿ ಬಂಧಿಸಿದ್ದ ಇನ್ಸ್‌ಪೆಕ್ಟರ್‌ ಮಹಮದ್ ರಫೀಕ್‌ಗೆ ಕಡ್ಡಾಯ ರಜೆ ಶಿಕ್ಷೆ!

ದೂರಿನ ಅನ್ವಯ ಮಹದೇವಸ್ವಾಮಿ ಮೇಲೆ ಐಪಿಸಿ 354 ಎ ಸಿ 504 506 509 ಕಾನೂನಿನಡಿ ಪ್ರಕರಣ ದಾಖಲು ಮಾಡಲಾಗಿದೆ. ಈಗಾಗಲೇ ಆರೋಪಿ ಮಹದೇವಸ್ವಾಮಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Follow Us:
Download App:
  • android
  • ios