ಜೂನ್ ಒಂದರಂದು ಫ್ರೀ Rapido ರೈಡ್; ಹೇಗೆ ಇದರ ಲಾಭ ಪಡೆಯೋದು?

ಜೂನ್ 1ರಂದು ಉಚಿತವಾಗಿ ರಾಪಿಡೋ ಬೈಕ್ ಪ್ರಯಾಣ ಮಾಡಬಹುದಾಗಿದೆ. ಈ ಉಚಿತ ಪ್ರಯಾಣದ ಸೌಲಭ್ಯ ಪಡೆದುಕೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ.

free rapido bike ride on june 1 know details mrq

ಕೋಲ್ಕತ್ತಾ: ಮಹಾನಗರಗಳಲ್ಲಿ ಎಲ್ಲಿಯೇ ಹೋಗಬೇಕಾದರೂ ಜನರು ಓಲಾ, ರಾಪಿಡೋ, ಊಬರ್ ಆಪ್‌ನಲ್ಲಿ ವಾಹನಗಳನ್ನು ಬುಕ್ ಮಾಡುತ್ತಾರೆ. ಜೂನ್ ಒಂದರಂದು ರಾಪಿಡೋದಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಜೂನ್ 1 ರಂದು Rapidoದಲ್ಲಿ ಉಚಿತ ರೈಡ್ ನಿಮ್ಮದಾಗಲಿದೆ. ಈ ಸೌಲಭ್ಯ ಯಾರಿಗೆ ಮತ್ತು ಹೇಗೆ ಪಡೆದುಕೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ. 

ಸದ್ಯ ದೇಶದಲ್ಲಿ ಲೋಕಸಭಾ ಚುನಾವಣ ನಡೆಯುತ್ತಿದ್ದು, ಮತದಾನ ಹೆಚ್ಚಳಕ್ಕೆ ಎಲೆಕ್ಷನ್ ಕಮಿಷನ್ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ನಾಲ್ಕ ಹಂತದ ಚುನಾವಣೆ ಮುಕ್ತಾಯವಾಗಿದೆ. 2019ಕ್ಕಿಂತ ಈ ಬಾರಿ ಮತದಾನ ಪ್ರಮಾಣ ಸಹ ಏರಿಕೆಯಾಗುತ್ತಿದೆ. 

ಮತದಾನ ಹೆಚ್ಚಳಕ್ಕೆ ನಿರಂತರ ಪ್ರಯತ್ನ

ಖಾಸಗಿ ಕಂಪನಿ, ಹೋಟೆಲ್‌ಗಳು ಸಹ ಮತದಾನ ಹೆಚ್ಚಿಸಲು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ. ಬೆಂಗಳೂರಿನ ನಿಸರ್ಗ ಹೋಟೆಲ್ ಮತದಾನ ಮಾಡಿದ ಜನರಿಗೆ ಉಚಿತ ತಿಂಡಿ, ಕಾಫಿ ನೀಡಿತ್ತು. ಹುಬ್ಬಳ್ಳಿಯ ಹೋಟೆಲ್ ಐದು ರೂಪಾಯಿಗೆ ಒಂದು ಇಡ್ಲಿಯನ್ನು ಮಾರಾಟ ಮಾಡಿತ್ತು. 

ಮತ್ತೊಂದೆಡೆ ಚುನಾವಣೆ ಆಯೋಗಯ ಮತದಾನಕ್ಕೆ ತೆರಳುವ ಜನರಿಗಾಗಿ ವಾಹನಗಳ  ವ್ಯವಸ್ಥೆಯನ್ನು ಕಲ್ಪಿಸುತ್ತಿದೆ. ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಹಿರಿಯರಿಗಾಗಿ ವೀಲ್ ಚೇರ್ ಸಹ ನೀಡಲಾಗುತ್ತಿದೆ.

ಜೂನ್ 1ರಂದು ಫ್ರೀ ರೈಡ್

ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿರತ್ ಕಪಿಲ್ ಅಶೋಕ್ ಜೂನ್ 1 ರಂದು ರಾಪಿಡೋನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಜೂನ್ 1 ರಂದು ಪಾಟ್ನಾ ಸಾಹಿಬ್ ಮತ್ತು ಪಾಟ್ಲಿಪುತ್ರ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಎರಡೂ ಕ್ಷೇತ್ರಗಳಲ್ಲಿ 4,290 ಮತಗಟ್ಟೆಗಳಿವೆ. 

ಆನ್‌ಲೈನ್‌ನಲ್ಲಿ ಇನ್ಮುಂದೆ ತರಕಾರಿ ಆರ್ಡರ್ ಮಾಡಿದ್ರೆ ಕೊತ್ತಂಬರಿ ಸೊಪ್ಪು ಫ್ರೀ!

ಮತದಾರರಿಗೆ ಉಚಿತ ಪ್ರಯಾಣ

ಜೂನ್ ಒಂದರಂದು ಮತದಾರರು ಮತದಾನಕ್ಕೆ ತೆರಳಲು ರಾಪಿಡೋ ಬುಕ್ ಮಾಡಬಹುದಾಗಿದೆ. ಮತದಾರರಿಗೆ ಈ ಪ್ರಯಾಣ ಸಂಪೂರ್ಣ ಉಚಿತವಾಗಿರಲಿದೆ. ಮತದಾರರು ಯಾವುದೇ ಹಣ ಪಾವತಿಸುಣವಂತಿಲ್ಲ ಎಂದು ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿರತ್ ಕಪಿಲ್ ಅಶೋಕ್ ಮಾಹಿತಿ ನೀಡಿದ್ದಾರೆ. ಮತದಾರರಿಗೆ ಪಾಟ್ನಾ ಜಿಲ್ಲಾಡಳಿತ ಈ ಸೌಲಭ್ಯವನ್ನು ಕಲ್ಪಿಸಿದೆ. 

56 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಪಾಟ್ನಾ ಸಾಹಿಬ್ ಕ್ಷೇತ್ರದಿಂದ 32 ಮತ್ತು ಪಾಟ್ಲಿಪುತ್ರದಿಂದ 24 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಈ ಎರಡೂ ಲೋಕಸಭಾ ಕ್ಷೇತ್ರಗಳಿಂದ 56 ಜನರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೇ 17ರಂದು ನಾಮಪತ್ರ ಪಡೆಯಲು ಕೊನೆಯ ದಿನವಾಗಿದೆ. ಈಗಾಗಲೇ ಎರಡೂ ಕ್ಷೇತ್ರಗಳಲ್ಲಿ  ಅಭ್ಯರ್ಥಿಗಳು ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ.

ಭಾರತ ಚಂದ್ರನ ಮೇಲಿದೆ, ನಮ್ಮ ಮಕ್ಕಳು ಚರಂಡಿಯಲ್ಲಿ... ಸದನದಲ್ಲಿ ಕೂಗಿ ಕೂಗಿ ಹೇಳಿದ ಪಾಕ್ ನಾಯಕ

ಶೇ.50ರಷ್ಟು ರಿಯಾಯ್ತಿ

ಕೆಲ ಮತದಾರರು ಮತಗಟ್ಟೆ ದೂರ ಅಂತ ವೋಟ್ ಹಾಕಲು ಬರಲ್ಲ. ಆದ್ದರಿಂದ ಈ ಉಚಿತ ವ್ಯವಸ್ಥೆಯನ್ನು ತಂದಿದ್ದೇವೆ. ಕೆಲವು ಚಿತ್ರಮಂದಿರದ ಮಾಲೀಕರು ಜೂನ್ ಒಂದು ಮತ್ತು ಎರಡರಂದು ಶೇ.50ರಷ್ಟು ರಿಯಾಯ್ತಿಯನ್ನ ಘೋಷಿಸಿವೆ. ಈ ವಿಶೇಷ ರಿಯಾಯ್ತಿ ಪಡೆಯಲು ಜನರು ಕೈ ಬೆರಳಿನ ಮೇಲಿರುವ ಶಾಹಿಯನ್ನು ತೋರಿಸಬೇಕು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿರತ್ ಕಪಿಲ್ ಅಶೋಕ್ ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios