Asianet Suvarna News Asianet Suvarna News

ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ: ಸವಾರನ ಕಣ್ಣು ಗುಡ್ಡೆಯೇ ಹೊರಕ್ಕೆ!

ಶುಕ್ರವಾರ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಿದ್ದ ಬೈಕ್‌ ಸವಾರನ ಕಣ್ಣು ಗುಡ್ಡೆಯೇ ಹೊರಬಿದ್ದು, ಆತ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.

Accident the rider's eyeball is outside at yadgir rav
Author
First Published Jul 29, 2023, 6:29 AM IST

ಯಾದಗಿರಿ (ಜು.29) :  ಶುಕ್ರವಾರ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಿದ್ದ ಬೈಕ್‌ ಸವಾರನ ಕಣ್ಣು ಗುಡ್ಡೆಯೇ ಹೊರಬಿದ್ದು, ಆತ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.

ನಸುಕಿನ ಜಾವ ಎಡ್ಡಳ್ಳಿ ಗ್ರಾಮದ ಚೆನ್ನಾರೆಡ್ಡಿ ಎನ್ನುವವರು ಮೊಹರಂ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಯಾದಗಿರಿಯಿಂದ ಗ್ರಾಮಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಕೆಳಗೆ ಬಿದ್ದ ಚೆನ್ನಾರೆಡ್ಡಿ ಅವರ ಕಣ್ಣುಗುಡ್ಡೆಯೇ ನೆಲಕ್ಕೆ ಬಿದ್ದು ಆಘಾತ ಮೂಡಿಸಿತ್ತು.

ಬೈಕ್‌ ಸವಾರನಿಗೆ ಗಂಭೀರ ಗಾಯಗೊಂಡು, ಕಣ್ಣು ಗುಡ್ಡೆಯೇ ಕಿತ್ತುಕೊಂಡು ರಸ್ತೆ ಮೇಲೆ ಬಿದ್ದಾಗ, ಸಹಾಯಕ್ಕಾಗಿ ಅಂಗಲಾಚಿದ ಅವರಿಗೆ ಆಗ ಹೊರಟಿದ್ದ ಕೆಲವರು ನಿಂತು ನೋಡುತ್ತಿದ್ದರೇ ವಿನಃ ಸಹಾಯಕ್ಕೆ ಬರದೆ, ನಿಂತು ನೊಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಹೊರಟಿದ್ದ ಕಿಲ್ಲನಕೇರಾ ಗ್ರಾಮದ ಬೀರಲಿಂಗಪ್ಪ ಎಂಬ ಯುವಕ ಮಾನವೀಯತೆ ಮೆರೆದು ಸಹಾಯ ಮಾಡಲು ನೆರವಾಗಿದ್ದಾನೆ.

ವಿಕಲಚೇತನನ ಮೇಲೆ ಪೊಲೀಸ್‌ ದೌರ್ಜನ್ಯ: ವರದಿ ಕೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕೂಡಲೇ 112 ನಂಬರ್‌ ಕರೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಬಂದು ನಂತರ ಅಂಬ್ಯುಲೆನ್ಸ್‌ನಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕಳುಹಿಸಲಾಯಿತು. ಚೆನ್ನಾರೆಡ್ಡಿ ಅವರು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ನೌಕರರು. ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.

ಕಣ್ಣುಗುಡ್ಡೆಯು ರಸ್ತೆ ಮೇಲೆ ಬಿದ್ದದನ್ನು ಅರಿತು, ಈ ಬಗ್ಗೆ ಬೀರಲಿಂಗಪ್ಪ ಸ್ಥಳೀಯ ಬಿಜೆಪಿ ಮುಖಂಡ ವೆಂಕಟರೆಡ್ಡಿ ಅಬ್ಬೆತುಮಕೂರ ಅವರ ಗಮನಕ್ಕೆ ತಂದಾಗ, ವೆಂಕಟರೆಡ್ಡಿ ಅವರು ಗಾಯಗೊಂಡ ಕುಟುಂಬಸ್ಥರನ್ನು ಸಂಪರ್ಕಿಸಿ ಕಿತ್ತು ಹೋದ ಕಣ್ಣು ಗುಡ್ಡೆಯನ್ನು ಕುಟುಂಬಸ್ಥರಿಗೆ ನೀಡಿ ಮಾನವೀಯತೆ ತೊರಿದ್ದಾರೆ. ವೈದ್ಯರ ಮಾಹಿತಿ ಪ್ರಕಾರ ಕಣ್ಣು ಗುಡ್ಡೆಯನ್ನು ಅಳವಡಿಕೆ ಮಾಡಲು ಸಾಧ್ಯವಿಲ್ಲವಾದರೂ, ಕಣ್ಣಿನ ಪೊರೆಯನ್ನು ಬೆರೆಯವರಿಗೆ ಅಳವಡಿಕೆ ಮಾಡಬಹುದಂತೆ.

ಮೊಬೈಲ್ ಖರೀದಿಸಲು 7 ಗ್ರಾಂ ಬಂಗಾರ ಕದ್ದ ಪ್ರಕರಣ; ಕಿರುಕುಳ ತಾಳದೆ ವಿದ್ಯಾರ್ಥಿ ಆತ್ಮಹತ್ಯೆ

Follow Us:
Download App:
  • android
  • ios