Asianet Suvarna News Asianet Suvarna News

ಅಂಪೈರಿಂಗ್ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅಶುತೋಶ್, ಈಗ ಪಂಜಾಬ್ ಪಾಲಿನ ಆಪತ್ಬಾಂಧವ..!

ಕಳೆದ ವರ್ಷ ನಡೆದ IPL ಮಿನಿ ಆಕ್ಷನ್ನಲ್ಲಿ ಪಂಜಾಬ್ ಫ್ರಾಂಚೈಸಿ, ಕೇವಲ 20 ಲಕ್ಷ ನೀಡಿ ಅಶುತೋಶ್‌ನನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಆದ್ರೆ, ಅಶುತೋಶ್‌ನ ಆಟದ ಮುಂದೆ 20 ಕೋಟಿ ಪಡೆದವರು ಲೆಕ್ಕಕ್ಕೇ ಇಲ್ಲ. ಅಷ್ಟರಮಟ್ಟಿಗೆ ಅಶುತೋಶ್ ಮಿಂಚು ಹರಿಸಿದ್ದಾನೆ.

Who Is Ashutosh Sharma Punjab Kings Explosive Batter Who Once Sank Into Depression kvn
Author
First Published Apr 20, 2024, 5:12 PM IST

ಬೆಂಗಳೂರು(ಏ.20): ಈ ಆಟಗಾರ ತನ್ನ ಸ್ವಂತ ರಾಜ್ಯದ ತಂಡದಿಂದಲೇ ರಿಜೆಕ್ಟ್ ಆಗಿದ್ದ. ಇದ್ರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ. 6 ತಿಂಗಳು ಡಿಪ್ರೆಷನ್‌ಗೂ ಒಳಗಾಗಿದ್ದ. ಆದ್ರೆ, ಇದೇ ಆಟಗಾರ ಕ್ರಿಕೆಟ್ ಜಗತ್ತಿನ ಹೊಸ ಸೆನ್ಸೇಷನ್ ಆಗಿದ್ದಾನೆ. ಯುವ ಕ್ರಿಕೆಟರ್ಸ್‌ಗೆ ಸ್ಫೂರ್ತಿಯಾಗಿದ್ದಾನೆ. ಯಾರು ಆ ಆಟಗಾರ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

IPL ಮೂಲಕ ಹೊರಬಂತು ಮತ್ತೊಂದು ಟ್ಯಾಲೆಂಟ್..! 

IPL ಕ್ರಿಕೆಟ್ ದುನಿಯಾದ ಈ ಶ್ರೀಮಂತ ಲೀಗ್ನಿಂದ ಹಲವು ಟ್ಯಾಲೆಂಟೆಡ್ ಕ್ರಿಕೆಟರ್ಸ್ ಬೆಳಕಿಗೆ ಬಂದಿದ್ದಾರೆ. ಅದರಂತೆ, ಈ ಬಾರಿಯ IPLನಲ್ಲಿ 25 ವರ್ಷದ ಯಂಗ್‌ಸ್ಟರ್ ಅಶುತೋಶ್ ಶರ್ಮಾ, ಜಬರ್ದಸ್ತ್ ಬ್ಯಾಟಿಂಗ್ನಿಂದ ಧೂಳೆಬ್ಬಿಸ್ತಿದ್ದಾನೆ. ಫಿಯರ್ಲೆಸ್ ಬ್ಯಾಟಿಂಗ್ನಿಂದ ಪಂಜಾಬ್ ಕಿಂಗ್ಸ್ ಪರ ಅಬ್ಬರಿಸ್ತಿದ್ದಾನೆ. 

ಕಳೆದ ವರ್ಷ ನಡೆದ IPL ಮಿನಿ ಆಕ್ಷನ್ನಲ್ಲಿ ಪಂಜಾಬ್ ಫ್ರಾಂಚೈಸಿ, ಕೇವಲ 20 ಲಕ್ಷ ನೀಡಿ ಅಶುತೋಶ್‌ನನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಆದ್ರೆ, ಅಶುತೋಶ್‌ನ ಆಟದ ಮುಂದೆ 20 ಕೋಟಿ ಪಡೆದವರು ಲೆಕ್ಕಕ್ಕೇ ಇಲ್ಲ. ಅಷ್ಟರಮಟ್ಟಿಗೆ ಅಶುತೋಶ್ ಮಿಂಚು ಹರಿಸಿದ್ದಾನೆ. IPLನಂತ ಬಿಗ್ ಸ್ಟೇಜ್ನಲ್ಲಿ, ಅದೂ ಕೆಳ ಕ್ರಮಾಂಕದಲ್ಲಿ ಕನ್ಸಿಸ್ಟೆಂಟ್ ಆಗಿ ಫರ್ಪಾಮ್ ಮಾಡೋದು, ಸುಲಭದ ಮಾತಲ್ಲ. ಆದ್ರೆ, ಈ ಯಂಗ್‌ಸ್ಟರ್ ನೀರು ಕುಡಿದಷ್ಟೇ ಸುಲಭವಾಗಿ ಸಿಕ್ಸರ್ಗಳನ್ನ ಸಿಡಿಸುತ್ತಿದ್ದಾನೆ. 

ಮತ್ತೆ ಆರ್‌ಸಿಬಿ ಸೇರ್ತಾರಾ KL ರಾಹುಲ್..? ಬೆಂಗಳೂರು ತಂಡದ ಬಗ್ಗೆ ಲಖನೌ ಕ್ಯಾಪ್ಟನ್ ಹೇಳಿದ್ದೇನು..?

ಲೀಗ್‌ನಲ್ಲಿ ಈವರೆಗೂ 4 ಇನ್ನಿಂಗ್ಸ್ಗಳಿಂದ 205.26ರ ಸ್ಟ್ರೈಕ್ರೇಟ್ನಲ್ಲಿ 156 ಗಳಿಸಿದ್ದಾನೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಸೋಲಿನ ಸುಳಿಗೆ ಸುಲುಕಿದ್ದಾಗ, ಅಶುತೋಶ್, ಸಿಂಗಲ್ ಸಿಂಹದಂತೆ ಗೆಲುವಿಗಾಗಿ ಹೋರಾಡಿದ್ರು. ಮುಂಬೈ ಪಡೆಯಲ್ಲಿ ಸೋಲಿನ ಭಯ ಹುಟ್ಟಿಸಿದ್ರು. ಅದರಲ್ಲೂ ಡೆಡ್ಲಿ ಬೌಲರ್ ಬುಮ್ರಾ ಓವರ್ನಲ್ಲಿ ಸ್ವೀಪ್ ಸಿಕ್ಸ್ ಬಾರಿಸಿ, ತಮ್ಮ ತಾಕತ್ತು ಪ್ರೂವ್ ಮಾಡಿದ್ರು. 

ಅಂಪೈರಿಂಗ್ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅಶುತೋಶ್..!

ಯೆಸ್, ಅಶುತೋಶ್ ಸ್ವಂತ ಊರು ಮಧ್ಯಪ್ರದೇಶದ ರಾಟ್ಲಮ್. ಬಡಕುಟುಂಬದಲ್ಲಿ ಜನಿಸಿದ ಅಶುತೋಶ್‌ಗೆ, ಸಣ್ಣ ವಯಸ್ಸಿನಿಂದಲೇ ಕ್ರಿಕೆಟರ್ ಆಗ್ಬೇಕು ಅನ್ನೋ ಕನಸು. ಅದೇ ಕಾರಣಕ್ಕೆ ಇಂದೋರ್‌ಗೆ ಶಿಫ್ಟ್ ಆದ ಅಶುತೋಶ್, ಲೋಕಲ್ ಟೂರ್ನಮೆಂಟ್’ಗಳಲ್ಲಿ ಅಂಪೈರಿಂಗ್ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ರು. ಲೋಕಲ್ ಟೂರ್ನಿಗಳಲ್ಲಿ ಆಡಿ ಮಿಂಚ್ತಿದ್ದ ಅಶುಗೆ ದಾರಿ ತೋರಿಸಿದ್ದು ಮಧ್ಯಪ್ರದೇಶದ ಮಾಜಿ ಕ್ರಿಕೆಟಿಗ, ಅಮಾಯ್ ಖುರೇಸಿಯಾ.

2018ರ ಸೈಯದ್ ಮುಷ್ತಾಕ್ ಅಲಿ T20 ಟೂರ್ನಿಯಲ್ಲಿ ಅಶುತೋಷ್, ಮಧ್ಯಪ್ರದೇಶ ಪರ ಆಡಿದ್ರು. ತಂಡದ ಪರ ಅತಿಹೆಚ್ಚು ರನ್‌ಗಳಿಸಿದ್ರು. ಇಷ್ಟಾದ್ರೂ, 2019ರ SMAT ತಂಡದಿಂದ ಅಶುತೋಶ್ರನ್ನ ಡ್ರಾಪ್ ಮಾಡಲಾಯ್ತು. ಇದ್ರಿಂದ ಅಶುತೋಶ್ ಮೆಂಟಲಿ ಕುಗ್ಗಿಹೋಗಿದ್ರು. 6 ತಿಂಗಳು ಡಿಪ್ರೆಶನ್ಗೊಳಗಾಗಿದ್ರು. ಆ ನಂತರ ಕೋವಿಡ್ ಕಾರಣದಿಂದ ಅಶುತೋಶ್ ಕರಿಯರ್‌ಗೆ ಬ್ರೇಕ್ ಬಿತ್ತು. 

IPL 2024 ಸನ್‌ರೈಸರ್ಸ್‌ ಹೈದರಾಬಾದ್ ಆರ್ಭಟಕ್ಕೆ ಬ್ರೇಕ್‌ ಹಾಕುತ್ತಾ ಡೆಲ್ಲಿ ಕ್ಯಾಪಿಟಲ್ಸ್?

ಸ್ವಂತ ರಾಜ್ಯದ ತಂಡದಿಂದಲೇ ರಿಜೆಕ್ಟ್ ಆದ ಅಶುತೋಶ್ ರೈಲ್ವೇಸ್ ಕೈಹಿಡೀತು. 2023ರಲ್ಲಿ ಮಧ್ಯಪ್ರದೇಶದ ಹುಡುಗನಿಗೆ ಕೆಲಸ ಕೊಟ್ಟ ರೈಲ್ವೇ ಇಲಾಖೆ, ತನ್ನ ತಂಡದಲ್ಲಿ ಆಡುವ ಅವಕಾಶವನ್ನೂ ಕೊಟ್ಟಿತು. ನಾಲ್ಕು ವರ್ಷ ಪ್ರೊಫೆಶನಲ್ ಕ್ರಿಕೆಟ್ ಆಡದ ಅಶುತೋಷ್, ಆ ವರ್ಷ ರೈಲ್ವೇಸ್ ಪರ ಅಬ್ಬರಿಸಿ ಬಿಟ್ಟ. SMAT ಟೂರ್ನಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಕೇವಲ 11 ಎಸೆತಗಳಲ್ಲಿ 50 ರನ್ ಸಿಡಿಸಿ, ಯುವರಾಜ್ ಸಿಂಗ್ ದಾಖಲೆಯನ್ನೇ ಟಿ20 ಯಲ್ಲಿ ಅಳಸಿ ಹಾಕಿದ್ರು. ಆವತ್ತು ಕ್ವಾಲಿಟಿ ಇಲ್ಲದ ಬೌಲಿಂಗ್ ಅಟ್ಯಾಕ್ ವಿರುದ್ಧ ಹೊಡೆಯೋದು   ಏನ್ ಮಹಾ, ಅಂದವರಿಗೆ ಈಗ ಅಶುತೋಶ್ ಉತ್ತರ ನೀಡಿದ್ದಾನೆ. 

ಅದೇನೆ ಇರಲಿ, ಮುಂದಿನ ಪಂದ್ಯಗಳಳಲ್ಲೂ ಅಶುತೋಶ್ ಹಿಂಗೆ ಅಬ್ಬರಿಸಲಿ, ಮುಂದೊಂದು ದಿನ ಟೀಂ ಇಂಡಿಯಾ ಪರ ಆಡಲಿ ಅನ್ನೋದೆ ನಮ್ಮ ಆಶಯ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

Follow Us:
Download App:
  • android
  • ios