KL ರಾಹುಲ್..! ಸದ್ಯ ಕ್ರಿಕೆಟ್ ಜಗತ್ತಿನ ಒನ್ ಆಫ್ ದಿ ಕ್ಲಾಸ್ ಬ್ಯಾಟ್ಸ್‌ಮನ್. ರಾಹುಲ್ ಸ್ಟೈಲಿಶ್ ಬ್ಯಾಟಿಂಗ್ ನೋಡೋದೆ ಕಣ್ಣಿಗೆ ಹಬ್ಬ. ಅದರಲ್ಲೂ ಈತನ ಫ್ಲಿಕ್ ಶಾಟ್ಗೆ ಸಪ್ರೇಟ್ ಫ್ಯಾನ್ ಬೇಸಿದೆ. ಇಂತಹ ಆಟಗಾರ ನಮ್ಮವನು ಅನ್ನೋದೆ ಕನ್ನಡಿಗರ ಹೆಮ್ಮೆ. ಆದ್ರೆ, IPLನಲ್ಲಿ ಮಾತ್ರ ರಾಹುಲ್ ನಮ್ಮವರಲ್ಲ ಅನ್ನೋದೆ ಕನ್ನಡಿಗರ ಬೇಸರ.
ಬೆಂಗಳೂರು(ಏ.20) ಈವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿರೋ ಕ್ರೇಝ್ ಕಮ್ಮಿಯೇನಲ್ಲ. ಅದರ ಜೊತೆಗೆ ಈ ಆಟಗಾರ RCB ತಂಡದಲ್ಲಿದ್ದಿದ್ರೆ ಬೆಂಗಳೂರು ತಂಡದ ಕ್ರೇಝ್ ಮತ್ತಷ್ಟು ಹೆಚ್ಚುತ್ತಿತ್ತು. ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗ್ತಿತ್ತು. ಆದ್ರೆ, ಆ ಕಾಲ ದೂರವಿಲ್ಲ. ಈ ಕ್ಲಾಸ್ ಬ್ಯಾಟ್ಸ್‌ಮನ್ ಶೀಘ್ರದಲ್ಲೇ ತವರು ತಂಡ ಸೇರಿದ್ರೂ ಅಚ್ಚರಿ ಇಲ್ಲ..!
KL ರಾಹುಲ್..! ಸದ್ಯ ಕ್ರಿಕೆಟ್ ಜಗತ್ತಿನ ಒನ್ ಆಫ್ ದಿ ಕ್ಲಾಸ್ ಬ್ಯಾಟ್ಸ್‌ಮನ್. ರಾಹುಲ್ ಸ್ಟೈಲಿಶ್ ಬ್ಯಾಟಿಂಗ್ ನೋಡೋದೆ ಕಣ್ಣಿಗೆ ಹಬ್ಬ. ಅದರಲ್ಲೂ ಈತನ ಫ್ಲಿಕ್ ಶಾಟ್ಗೆ ಸಪ್ರೇಟ್ ಫ್ಯಾನ್ ಬೇಸಿದೆ. ಇಂತಹ ಆಟಗಾರ ನಮ್ಮವನು ಅನ್ನೋದೆ ಕನ್ನಡಿಗರ ಹೆಮ್ಮೆ. ಆದ್ರೆ, IPLನಲ್ಲಿ ಮಾತ್ರ ರಾಹುಲ್ ನಮ್ಮವರಲ್ಲ ಅನ್ನೋದೆ ಕನ್ನಡಿಗರ ಬೇಸರ.
ಯೆಸ್. ರಾಹುಲ್‌ನಂಥ ಪ್ಲೇಯರ್ RCBಯಲ್ಲಿದ್ದಿದ್ರೆ, ಆರ್‌ಸಿಬಿ ತಂಡದ ಕ್ರೇಝ್ ಮತ್ತಷ್ಟು ಹೆಚ್ಚುತ್ತಿತ್ತು. ಆದ್ರೆ, ನಮ್ಮ ಹುಡುಗ ದೂರದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನ ಮುನ್ನಡೆಸುತ್ತಿದ್ದಾನೆ. ರಾಹುಲ್ ಕಾರಣಕ್ಕೆ ಕನ್ನಡಿಗರು ಲಕ್ನೋ ತಂಡಕ್ಕೆ ಸಪೋರ್ಟ್ ಮಾಡ್ತಿದ್ದಾರೆ. ಆದ್ರೆ, ಇನ್ಮುಂದೆ ಕನ್ನಡಿಗರು LSG ಟೀಮ್‌ಗೆ ಸಪೋರ್ಟ್ ಮಾಡಬೇಕಿಲ್ಲ. ಯಾಕಂದ್ರೆ, ರಾಹುಲ್ ಮತ್ತೆ RCB ತಂಡಕ್ಕೆ ಎಂಟ್ರಿ ನೀಡೋ ಕಾಲ ದೂರವಿಲ್ಲ.
ಬೆಂಗಳೂರಿನಿಂದಲೇ ಆರಂಭ, ಅಲ್ಲೇ ಅಂತ್ಯ ..!
ಹೌದು, ರಾಹುಲ್ RCB ತಂಡದ ಪರ ಆಡೋ ಆಸೆ ವ್ಯಕ್ತಪಡಿಸಿದ್ದಾರೆ. ರವಿಚಂದ್ರನ್ ಅಶ್ವಿನ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. "ನಾನು ಕರ್ನಾಟಕದ ಆಟಗಾರ, ನನ್ನ ಊರು ಬೆಂಗಳೂರು, ಚಿನ್ನಸ್ವಾಮಿ ನನ್ನ ಮನೆ, ಅದು ಯಾವತ್ತಿಗೂ ಬದಲಾಗಲ್ಲ. ಪ್ರತಿಯೊಬ್ಬ ಆಟಗಾರನಿಗೂ ತವರಿನ ತಂಡದ ಪರ ಆಡಬೇಕು ಅನ್ನೋ ಆಸೆ ಇರುತ್ತೆ, ಅದರಂತೆ ನನಗೂ RCB ಪರ ಆಡೋದು ಇಷ್ಟ, IPL ಕರಿಯರ್ ಸ್ಟಾರ್ಟ್ ಆಗಿದ್ದು RCB ಮೂಲಕ, ಅಲ್ಲೇ ಕರಿಯರ್ ಮುಗಿಸಿದ್ರೆ ಚೆನ್ನಾಗಿರುತ್ತೆ" ಅಂತ ರಾಹುಲ್ ತಮ್ಮ ಮನದಾಸೆ ಹೊರಹಾಕಿದ್ದಾರೆ.
ರಾಹುಲ್ ಬಂದ್ರೆ RCB ಕನ್ನಡಿಗರಗೆ ಮತ್ತಷ್ಟು ಹತ್ತಿರ..!
ಯೆಸ್, ಟ್ರೇಡಿಂಗ್ ಅಥವಾ ಮುಂದಿನ ವರ್ಷ IPL ಮೆಗಾ ಆಕ್ಷನ್ ನಡಯಲಿದೆ. ಇವೆರಡರಲ್ಲಿ ಯಾವುದಾರೊಂದರ ಮೂಲಕ ರಾಹುಲ್ RCB ತಂಡ ಸೇರಿಕೊಳ್ಳಬಹುದು. ರಾಹುಲ್ ಬಂದ್ರೆ, ಕನ್ನಡಿಗರಿಗೆ RCB ಮತ್ತಷ್ಟು ಹತ್ತಿರವಾಗಲಿದೆ. ಈ ಸೀಸನ್ ನಂತರ ಫಾಫ್ ಡುಪ್ಲೆಸಿ ರಿಟೈರ್ ಆಗೋ ಸಾಧ್ಯತೆ ಇರೋದ್ರಿಂದ, ರಾಹುಲ್‌ಗೆ ನಾಯಕತ್ವವೂ ಒಲಿಯಲಿದೆ. ಆದ್ರೆ, ಇದೆಲ್ಲಾ RCB ಫ್ರಾಂಚೈಸಿ ಕೈಯಲ್ಲಿದೆ. RCB ಓನರ್ಸ್ ಅಂತಹ ಮನಸ್ಸು ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್
