Asianet Suvarna News Asianet Suvarna News

ರೈಲ್ವೆಯಲ್ಲಿ ಲಕ್ಷಗಟ್ಟಲೆ ವೇತನದ ಉದ್ಯೋಗ, ಇಂದೇ ಅರ್ಜಿ ಸಲ್ಲಿಸಿ

ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು  ಆಹ್ವಾನಿಸಲಾಗುತ್ತಿದೆ. ಸರಿ ಸುಮಾರು  2 ಲಕ್ಷದವರೆಗೂ ವೇತನ ನಿಗದಿಯಾಗಿದೆ.

RAILTEL Recruitment 2023 notification for various managers posts gow
Author
First Published Oct 24, 2023, 5:23 PM IST

ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು  ಆಹ್ವಾನಿಸಲಾಗುತ್ತಿದೆ. ಭಾರತದಲ್ಲಿ ಎಲ್ಲಿಯಾದರೂ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ರೈಲ್‌ಟೆಲ್ ನೇಮಕಾತಿ 2023 ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇದೇ ನವೆಂಬರ್ 11, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಒಟ್ಟು 81 ಹುದ್ದೆಗಳು ಖಾಲಿ ಇದ್ದು,    ರೈಲ್‌ಟೆಲ್ ನೇಮಕಾತಿ 2023 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಡೆಪ್ಯುಟಿ ಮ್ಯಾನೇಜರ್- 21ರಿಂದ 30 ವರ್ಷ, ಮ್ಯಾನೇಜರ್- 23ರಿಂದ 30 ವರ್ಷ, ಸೀನಿಯರ್ ಮ್ಯಾನೇಜರ್- 27ರಿಂದ 34 ವರ್ಷ ನಿಗಧಿ ಮಾಡಲಾಗಿದೆ. ಸಂಬಂಧಿಸಿದ ವರ್ಗದವರಿಗೆ ವಯೋಮಿತಿ ಸಡಿಲಿಕೆ ಇದೆ.

ದೇಶದ ಅತಿದೊಡ್ಡ ಐಟಿ ಸೇವಾ ಕಂಪನಿ ಟಿಸಿಎಸ್ ನಲ್ಲಿ ನೇಮಕಾತಿ

ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂ.ಎಸ್ಸಿ, ಎಂಸಿಎ ಪೂರ್ಣಗೊಳಿಸಿರಬೇಕು. 

RailTel ನೇಮಕಾತಿ 2023 ಗಾಗಿ ಅಭ್ಯರ್ಥಿಗಳ ಆಯ್ಕೆಯು ಆನ್‌ಲೈನ್ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ಆಧರಿಸಿದೆ. ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ನಂತರ ತಿಳಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನೇಮಕಾತಿಯಲ್ಲಿ ರೈಲ್‌ಟೆಲ್‌ಗೆ ಸೇರಿದ ದಿನಾಂಕದಿಂದ 02 ವರ್ಷಗಳವರೆಗೆ ಇರುತ್ತದೆ. RailTel ನೇಮಕಾತಿ 2023 ಗಾಗಿ ಆಯ್ಕೆಯಾದ ಅರ್ಜಿದಾರರು ಮಾಸಿಕ ಸಂಭಾವನೆಯನ್ನು ರೂ. 140000.

 ಭಾರತ್ ಅರ್ಥ್ ಮೂವರ್ಸ್ ನರ್ಸ್, ಡಿಫೆನ್ಸ್, ಏರೋಸ್ಪೇಸ್,

RailTel ನೇಮಕಾತಿ 2023 ಗಾಗಿ ಅಭ್ಯರ್ಥಿಗಳ ಆಯ್ಕೆಯು ಆನ್‌ಲೈನ್ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ಆಧರಿಸಿದೆ. ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ನಂತರ ತಿಳಿಸಲಾಗುವುದು.  ಅಭ್ಯರ್ಥಿಗಳು ರೂ. 1200 ಅರ್ಜಿ ಶುಲ್ಕ ಮತ್ತು SC/ST/PwBD ವರ್ಗದ ಅಭ್ಯರ್ಥಿಗಳು ರೂ. 600. ಆನ್‌ಲೈನ್ ಅರ್ಜಿ ಪಾವತಿಸಬೇಕು.

ನೇಮಕಾತಿಯಲ್ಲಿ ಆಯ್ಕೆಯಾದ ಡೆಪ್ಯುಟಿ ಮ್ಯಾನೇಜರ್ ಗೆ ಮಾಸಿಕ   40,000-1,40,000 ರೂ. ಮ್ಯಾನೇಜರ್ ಹುದ್ದೆಗೆ ಮಾಸಿಕ   50,000 ರೂ ನಿಂದ 1,60,000 ರೂ, ಸೀನಿಯರ್ ಮ್ಯಾನೇಜರ್ ಗೆ ರೂ 60,000 ದಿಂದ ರೂ 1,80,000 ರೂ. ವೇತನ ದೊರೆಯಲಿದೆ.

ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿವೆ ಮತ್ತು ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ  ನವೆಂಬರ್‌ 11 ಆಗಿದೆ. ಅರ್ಜಿ ಸಲ್ಲಿಸಬೇಕಾದ ವಿಳಾಸ ಇಂತಿದೆ.
ಜನರಲ್ ಮ್ಯಾನೇಜರ್/ಎಚ್‌ಆರ್
ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
ಪ್ಲೇಟ್-ಎ
6ನೇ ಮಹಡಿ
ಕಛೇರಿ ಬ್ಲಾಕ್-II
ಪೂರ್ವ ಕಿದ್ವಾಯಿ ನಗರ
ನವದೆಹಲಿ-110023

ರೈಲ್‌ಟೆಲ್ ಭಾರತೀಯ ರೈಲ್ವೇಸ್‌ನೊಂದಿಗೆ ದೇಶಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಸಾರ್ವಜನಿಕ ವೈ-ಫೈ ಒದಗಿಸುವ ಮೂಲಕ ರೈಲ್ವೆ ನಿಲ್ದಾಣಗಳನ್ನು ಡಿಜಿಟಲ್ ಹಬ್ ಆಗಿ ಪರಿವರ್ತಿಸಲು ಕೆಲಸ ಮಾಡುತ್ತಿದೆ ಮತ್ತು ಒಟ್ಟು 6108 ನಿಲ್ದಾಣಗಳು ರೈಲ್‌ಟೆಲ್‌ನ ರೈಲ್‌ವೈರ್ ವೈ-ಫೈನೊಂದಿಗೆ ಲೈವ್ ಆಗಿವೆ.
Follow Us:
Download App:
  • android
  • ios