Asianet Suvarna News Asianet Suvarna News

ಬೆಮೆಲ್‌ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, 3 ಲಕ್ಷವರೆಗೂ ವೇತನ!

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕ ನಿರ್ದೇಶಕ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್‌ 20ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

BEML Recruitment 2023 for various posts gow
Author
First Published Nov 17, 2023, 10:06 AM IST

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕ ನಿರ್ದೇಶಕ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್‌ 20ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಭಾರತದ ಪ್ರಮುಖ ಬಹು- ತಂತ್ರಜ್ಞಾನ ಕಂಪನಿಯಾಗಿದ್ದು, ಕಳೆದ ಆರು ವರ್ಷಗಳಲ್ಲಿ ವಿಶ್ವದರ್ಜೆಯ ಉತ್ಪನ್ನಗಳನ್ನು ಉತ್ಪಾದಿಸಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದೆ. ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕ ನಿರ್ದೇಶಕರು, ಉಪ ಜನರಲ್ ಮ್ಯಾನೇಜರ್, ಸಹಾಯಕ ವ್ಯವಸ್ಥಾಪಕರು, ಸಹಾಯಕ ಜನರಲ್ ಮ್ಯಾನೇಜರ್ ಮತ್ತು ಇತರ ಖಾಲಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದು.

ನಿಮ್ಹಾನ್ಸ್‌ನಲ್ಲಿ 161 ನರ್ಸಿಂಗ್ ಆಫೀಸರ್ ಹುದ್ದೆಗೆ ನೇಮಕಾತಿ,

ಹುದ್ದೆಗಳ ವಿವರ

ಗ್ರೇಡ್ - 1 ಸಹಾಯಕ ಅಧಿಕಾರಿ – 2 ಹುದ್ದೆ

ಗ್ರೇಡ್ - 2 ಮ್ಯಾನೇಜ್‌ಮೆಂಟ್ ಟ್ರೈನಿ – 21 ಹುದ್ದೆ

ಗ್ರೇಡ್ - 2 ಆಫೀಸರ್‌ - 11 ಹುದ್ದೆ

ಗ್ರೇಡ್ - 3 ಸಹಾಯಕ ವ್ಯವಸ್ಥಾಪಕ - 35 ಹುದ್ದೆ

ಗ್ರೇಡ್ - 4 ಮ್ಯಾನೇಜರ್ - 7 ಹುದ್ದೆ

ಗ್ರೇಡ್ - 5 ಹಿರಿಯ ವ್ಯವಸ್ಥಾಪಕ - 3 ಹುದ್ದೆ

ಗ್ರೇಡ್ - 6 ಸಹಾಯಕ ಜನರಲ್ ಮ್ಯಾನೇಜರ್ - 8 ಹುದ್ದೆ

ಗ್ರೇಡ್ - 7I ಉಪ ಜನರಲ್ ಮ್ಯಾನೇಜರ್ - 8 ಹುದ್ದೆ

ಗ್ರೇಡ್ –8 ಜನರಲ್ ಮ್ಯಾನೇಜರ್ -1 ಹುದ್ದೆ

ಗ್ರೇಡ್ - 9 ಮುಖ್ಯ ಜನರಲ್ ಮ್ಯಾನೇಜರ್ - 2 ಹುದ್ದೆ

ಗ್ರೇಡ್ - 10 ಕಾರ್ಯನಿರ್ವಾಹಕ ನಿರ್ದೇಶಕ - 3 ಹುದ್ದೆ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಉದ್ಯೋಗ, 

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಪ್ರಾರಂಭ ದಿನಾಂಕ: 06-11-2023

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 20-11-2023

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ/ಇ ಡಬ್ಲ್ಯೂ ಎಸ್/ಓಬಿಸಿ ಅಭ್ಯರ್ಥಿಗಳಿಗೆ : ರೂ. 500

ಎಸ್ ಸಿ/ಎಸ್ ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ಇಲ್ಲ

ವೇತನ/ಭತ್ಯೆಗಳು

ಗ್ರೇಡ್ -1 ಸಹಾಯಕ ಅಧಿಕಾರಿ: ರೂ.30,000 - 1,20,000

ಗ್ರೇಡ್ – 2- ಮ್ಯಾನೇಜ್‌ಮೆಂಟ್ ಟ್ರೈನಿ / ಆಫೀಸರ್ : ರೂ.40,000 - 1,40,000

ಗ್ರೇಡ್ - 3 ಸಹಾಯಕ ಮ್ಯಾನೇಜರ್ : ರೂ.50,000 - 1,60,000

ಗ್ರೇಡ್ - 4 ಮ್ಯಾನೇಜರ್ : ರೂ.60,000 - 1,80,000

ಗ್ರೇಡ್ - 5 ಹಿರಿಯ ವ್ಯವಸ್ಥಾಪಕ : ರೂ.70,000 - 2,00,000

ಗ್ರೇಡ್ - 6 ಸಹಾಯಕ ಜನರಲ್ ಮ್ಯಾನೇಜರ್ : ರೂ.80,000 - 2,20,000

ಗ್ರೇಡ್ – 7 ಡೆಪ್ಯುಟಿ ಜನರಲ್ ಮ್ಯಾನೇಜರ್ : ರೂ.90,000 – 2,40,000

ಗ್ರೇಡ್ – 8 ಜನರಲ್ ಮ್ಯಾನೇಜರ್ : ರೂ.1,00,000 – 2,60,000

ಗ್ರೇಡ್ – 9 ಮುಖ್ಯ ಜನರಲ್ ಮ್ಯಾನೇಜರ್ : ರೂ.1,20,000 – 2,80,000

ಗ್ರೇಡ್ - 10 ಕಾರ್ಯನಿರ್ವಾಹಕ ನಿರ್ದೇಶಕ ರೂ.1,50,000 - 3,00,000

ಶೈಕ್ಷಣಿಕ ವಿದ್ಯಾರ್ಹತೆ

1. ಕಾರ್ಯನಿರ್ವಾಹಕ ನಿರ್ದೇಶಕರು: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪ್ರಥಮ ದರ್ಜೆಯಲ್ಲಿ ಎಂಜಿನಿಯರಿಂಗ್‌ ಪದವಿಯನ್ನು ಪಡೆದಿರಬೇಕು. ಮತ್ತು ಖ್ಯಾತ ಸಂಘಟಿತ ಕಂಪೆನಿಯಲ್ಲಿ ಯೋಜನೆ/ ನಿರ್ವಹಣೆ ಕ್ಷೇತ್ರದಲ್ಲಿ 10 ವರ್ಷಗಳ ಸೇವೆ ಸಲ್ಲಿಸಿರುವ ಅನುಭವ ಹೊಂದಿರಬೇಕು.

2. ಮುಖ್ಯ ಜನರಲ್ ಮ್ಯಾನೇಜರ್ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪ್ರಥಮ ದರ್ಜೆಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿರಬೇಕು.ಜೊತೆಗೆ ಖ್ಯಾತ ಸಂಘಟಿತ ಕಂಪೆನಿಯಲ್ಲಿ ಮಾರ್ಕೆಟಿಂಗ್‌ ವಿಭಾಗದಲ್ಲಿ ರಕ್ಷಣಾ ಉಪಕರಣಗಳನ್ನು ಮಾರಾಟ ಮಾಡಿರುವ ಅನುಭವ ಹೊಂದಿರಬೇಕು.

3. ಜನರಲ್ ಮ್ಯಾನೇಜರ್ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಎಂಜಿನಿಯರಿಂಗ್‌ ವಿಭಾಗದಲ್ಲಿ ಅಧ್ಯಯನ ಮಾಡಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಮತ್ತು ಸಂಬಂಧಿಸಿದ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿರಬೇಕು.

4. ಡೆಪ್ಯುಟಿ ಜನರಲ್ ಮ್ಯಾನೇಜರ್ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್/ಆಟೋಮೊಬೈಲ್/ಕೈಗಾರಿಕಾ ಉತ್ಪಾದನೆ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿರಬೇಕು. ಮತ್ತು ಖ್ಯಾತ ಸಂಘಟಿತ ಕಂಪೆನಿಯಲ್ಲಿ ಅಂತರಿಕ್ಷಯಾನದ ಉತ್ಪಾದನಾ ವಿಭಾಗದಲ್ಲಿ 5 ವರ್ಷಗಳ ಸೇವೆ ಸಲ್ಲಿಸಿರಬೇಕು.

5. ಸಹಾಯಕ ಜನರಲ್ ಮ್ಯಾನೇಜರ್ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪ್ರಥಮ ದರ್ಜೆಯಲ್ಲಿ ಎಲೆಕ್ಟ್ರಾನಿಕ್/‌ ಮೆಕ್ಯಾನಿಕಲ್‌ ವಿಭಾಗದಲ್ಲಿ ಇಂಜಿನಿಯರಿಂಗ್‌ ಪದವಿ ಪಡೆದಿರಬೇಕು.

6. ಹಿರಿಯ ವ್ಯವಸ್ಥಾಪಕ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪ್ರಥಮ ದರ್ಜೆಯಲ್ಲಿ ಪದವಿ ಪಡೆದಿರಬೇಕು. ಅಥವಾ ಸಿಬ್ಬಂದಿ ನಿರ್ವಹಣೆಯಲ್ಲಿ ಡಿಪ್ಲೊಮಾ ಪದವಿ ಪಡೆದಿರಬೇಕು. ಅಥವಾ ಎಂಬಿಎ/ ಹೆಚ್‌ ಆರ್/‌ ಐಆರ್/‌ ಎಂ ಎಸ್‌ ಡಬ್ಲ್ಯೂಪದವಿ ಪಡೆದಿರಬೇಕು.

7. ಸಹಾಯಕ ಮ್ಯಾನೇಜರ್ ಮತ್ತು ಮ್ಯಾನೇಜರ್ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅಥವಾ ಸಾರ್ವಜನಿಕ ಸಂಬಂಧಗಳು /ಪತ್ರಿಕೋದ್ಯಮ /ಸಮೂಹ ಸಂವಹನ ವಿಷಯದಲ್ಲಿ ಡಿಪ್ಲೊಮಾ ಹೊಂದಿರಬೇಕು.

8. ಮ್ಯಾನೇಜ್‌ಮೆಂಟ್ ಟ್ರೈನಿ / ಆಫೀಸರ್: ಅಭ್ಯರ್ಥಿಗಳು ಮೆಕ್ಯಾನಿಕಲ್‌ ವಿಭಾಗದಲ್ಲಿ ಬಿ.ಇ/ ಬಿ.ಟೆಕ್‌‌ ನಲ್ಲಿ ಸರಾಸರಿ 60 ಅಂಕಗಳೊಂದಿಗೆ ಪದವಿ ಪಡೆದಿರಬೇಕು.

9. ಸಹಾಯಕ. ಅಧಿಕಾರಿ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ

ಆಯ್ಕೆಯು ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವನ್ನು ಒಳಗೊಂಡಿರುತ್ತದೆ. ಹಾಗೂ ಕಂಪನಿಯು ವಿವಿಧ ಹುದ್ದೆಗಳಿಗೆ ಅನ್ವಯವಾಗುವಂತೆ ಮೌಲ್ಯಮಾಪನ ಪ್ರಕ್ರಿಯೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿಯನ್ನು ಪ್ರಕಟಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಬೆಮೆಲ್‌ ವೆಬ್‌ಸೈಟ್‌ ವೀಕ್ಷಿಸಬಹುದು.

Follow Us:
Download App:
  • android
  • ios