ಹೆಲ್ಮೆಟ್ ಧರಿಸಿಲ್ಲ ಅಂತ ಕಾರಿಗೂ ಒಂದು ಸಾವಿರ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು

ಬೈಕ್‌ ಸವಾರರು ಹೆಲ್ಮೆಟ್ ಧರಿಸದಿದ್ದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರು ಆಡಿ ಕಾರಿಗೂ ದಂಡ ವಿಧಿಸಿದ್ದಾರೆ. ಇದರಿಂದ ಮನನೊಂದ ಕಾರು ಚಾಲಕ ಈಗ ಪ್ರತಿದಿನವೂ ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸುತ್ತಿದ್ದಾರೆ.

Uttar Pradesh The traffic police imposed a fine of 1000 on the Audi car for not wearing a helmet akb

ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯ ಬಹದೂರ್ ಸಿಂಗ್ ಪರಿಹರ್ ಆಡಿ ಕಾರಿನ ಮಾಲೀಕರಾಗಿದ್ದು, ಪ್ರತಿದಿನವೂ ತಮ್ಮ ಕಾರಿನ ಬಳಿ ಹೋಗುವಾಗ ಕೈಯಲ್ಲಿ ಹೆಲ್ಮೆಟ್ ಹಿಡಿದು ಹೋಗುವ ಇವರು, ಕಾರು ಸ್ಟಾರ್ಟ್ ಮಾಡುವ ಮೊದಲು ಹೆಲ್ಮೆಟ್ ಧರಿಸುತ್ತಾರೆ. ಹಾಗಂತ ಇವರೇನು ಫಾರ್ಮುಲಾ 1 ಕಾರನ್ನು ಓಡಿಸುತ್ತಿಲ್ಲ, ಅತೀಯಾದ ಸುರಕ್ಷತೆಯ ಚಿಂತೆಯೂ ಇಲ್ಲ, ಆದರೂ ಹೆಲ್ಮೆಟ್ ಏಕೆ ಧರಿಸುತ್ತಾರೆ ಎಂದು ಕೇಳಿದಾಗ ಸಿಕ್ಕಿದ ಉತ್ತರ, ಟ್ರಾಫಿಕ್ ಪೊಲೀಸರ ದಂಡ.

ಬೈಕ್‌ ಸವಾರರು ಹೆಲ್ಮೆಟ್ ಧರಿಸದಿದ್ದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರು ಆಡಿ ಕಾರಿಗೂ ದಂಡ ವಿಧಿಸಿದ್ದಾರೆ. ಇದರಿಂದ ಮನನೊಂದ ಕಾರು ಚಾಲಕ ಈಗ ಪ್ರತಿದಿನವೂ ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸುತ್ತಿದ್ದು, ಈತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. 

ಬಿಸಿಲ ಬೇಗೆಗೆ ಪೊಲೀಸರಿಗೆ ಎಸಿ ಹೆಲ್ಮೆಟ್, ಮೈಯೆಲ್ಲಾ ಬೆವೆತರೂ ತಲೆ ಕೂಲ್ ಕೂಲ್!

ಟ್ರಕ್ಕರ್‌ ಯೂನಿಯನ್‌ನ ಅಧ್ಯಕ್ಷರಾಗಿರುವ ಪರಿಹಾರ್ ಅವರ ಫೋನ್‌ಗೆ ಮಾರ್ಚ್ ತಿಂಗಳಲ್ಲಿ ಸಂದೇಶವೊಂದು ಬಂದಿದ್ದು, ಅದರಲ್ಲಿ ಅವರ ಕಾರಿಗೆ ದಂಡ ವಿಧಿಸಲಾಗಿತ್ತು. ಹೀಗಾಗಿ ವೆಬ್‌ಸೈಟ್‌ಗೆ ಹೋಗಿ ಏಕೆ ದಂಡ ವಿಧಿಸಲಾಗಿದೆ ಎಂದು ನೋಡಿದಾಗ ಮತ್ತೆ ಕಣ್ಣುಜ್ಜಿಕೊಂಡು ನೋಡುವ ಸ್ಥಿತಿ ಅವರದಾಗಿತ್ತು. ಏಕೆಂದರೆ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಅವರಿಗೆ ಚಲನ್ ಕಳುಹಿಸಲಾಗಿತ್ತು.  ಅಲ್ಲದೇ ಚಲನ್‌ನಲ್ಲಿದ್ದ ಫೋಟೋ ಕೂಡ ಟೂ ವಿಲ್ಲರ್‌ದಾಗಿತ್ತು. ಅದರೆ ವಾಹನದ ವಿಭಾಗದಲ್ಲಿ ಸ್ಪಷ್ಟವಾಗಿ ಮೋಟಾರ್ ಕಾರು ಎಂದು ಬರೆಯಲಾಗಿತ್ತು.

ಈ ಹಿನ್ನೆಲೆಯಲ್ಲಿ ಝಾನ್ಸಿಯ ನಂದು ಕಾಲೋನಿಯ ನಿವಾಸಿಯಾದ ಪರಿಹಾರ್ ಅವರು ಸೀದಾ ಹೋಗಿ ಟ್ರಾಫಿಕ್ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆದರೆ ಪೊಲೀಸರು ಈ ವಿಚಾರವನ್ನು ಲೋಕಸಭಾ ಚುನಾವಣೆಯ ನಂತರ ಗಮನಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಉತ್ತರ ಪ್ರದೇಶದ ದೇಶದ ದೊಡ್ಡ ರಾಜ್ಯವಾಗಿರುವುದರಿಂದ ಲೋಕಸಭೆಯ ಒಟ್ಟು 7 ಹಂತಗಳಲ್ಲಿಯೂ ಇಲ್ಲಿ ಚುನಾವಣೆ ನಡೆಯುತ್ತಿದೆ ಹೀಗಾಗಿ ಪೊಲೀಸರು ಕೂಡ ಬ್ಯುಸಿಯಾಗಿದ್ದಾರೆ. ಹಾಗಾಗಿ ಜೂನ್ 1 ರಂದು ಚುನಾವಣೆ ನಡೆದು ಜೂನ್ 4ಕ್ಕೆ ಫಲಿತಾಂಶ ಹೊರಗೆ ಬರಲಿದೆ. ಇದಾದ ನಂತರ ಕನಿಷ್ಠ ಮೂರು ದಿನವಾದರೂ ಕಾಯಬೇಕಾಗುತ್ತದೆ ಎಂದು ಭಾವಿಸಿದ ಪರಿಹಾರ್ ಅವರು ನಂತರ ಕಾರು ಓಡಿಸುವಾಗಲು ಹೆಲ್ಮೆಟ್ ಧರಿಸುವುದಕ್ಕೆ ಮುಂದಾಗಿದ್ದಾರೆ. 

ಬೆಂಗಳೂರು: ಸ್ಕೂಟರ್ ಕೀ ಕಿತ್ತುಕೊಂಡ ಟ್ರಾಫಿಕ್ ಪೊಲೀಸ್ ಕೈ ಕಚ್ಚಿದ ವಾಹನ ಸವಾರ

ಇನ್ನಷ್ಟು ದಂಡ ಬೀಳದೇ ಇರಲಿ ಎಂಬ ಕಾರಣಕ್ಕೆ ತಾವು ಹೆಲ್ಮೆಟ್ ಧರಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಹೀಗಾಗಿ ಕಾರು ಚಾಳಕರೊಬ್ಬರು ಹೆಲ್ಮೆಟ್ ಧರಿಸುತ್ತಿರುವುದರಿಂದ ದಾರಿಯಲ್ಲಿ ಹೋಗುವವರೆಲ್ಲರೂ ಅವರನ್ನು ತಲೆ ತಿರುಗಿಸಿ ಅಚ್ಚರಿಯಿಂದ ನೋಡುತ್ತಾರೆ. ಕಾರು ಚಲಾಯಿಸುವಾಗ ಹೆಲ್ಮೆಟ್ ಇಲ್ಲದಕ್ಕೆ ನನಗೆ ದಂಡ ಹಾಕಿದ್ದಾರೆ. ಹೀಗಾಗಿ ನಾನು ಹೆಲ್ಮೆಟ್ ಧರಿಸಿ ಕಾರು ಚಲಾಯಿಸುತ್ತಿದ್ದೇನೆ. ಚುನಾವಣೆಯ ನಂತರ ಈ ವಿಚಾರದ ಬಗ್ಗೆ ಮಾತನಾಡುವುದಾಗಿ ಪೊಲೀಸರು ಹೇಳಿದ್ದಾರೆ ಎಂದು ಪರಿಹಾರ್ ಹೇಳಿದ್ದಾರೆ.

 

Latest Videos
Follow Us:
Download App:
  • android
  • ios