Asianet Suvarna News Asianet Suvarna News

ಜೈಲು ಸೇರಿದ ಸುಕೇಶ್ ಚಂದ್ರಶೇಖರ್ ವಾಹನಗಳ ಆ.11ಕ್ಕೆ ಹರಾಜು, ಕಡಿಮೆಗೆ ಬೆಲೆಗೆ ಸಿಗಲಿದೆ ದುಬಾರಿ ಕಾರು!

ಬೆಂಗಳೂರು ಮೂಲಕ ಸುಕೇಶ್ ಚಂದ್ರಶೇಕರ್ ಈಗಾಗಲೇ ಜೈಲು ಸೇರಿದ್ದಾನೆ. ಈತನಿಂದ ಜಪ್ತಿ ಮಾಡಿರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಹರಾಜು ಆಗಸ್ಟ್ 11ಕ್ಕೆ ನಡೆಯಲಿದೆ. ಬೆಂಜ್, ಫೆರಾರಿ, ರೋಲ್ಸ್ ರಾಯ್ ಸೇರಿದಂತೆ ದುಬಾರಿ ಕಾರುಗಳು ಕಡಿಮೆ ಬೆಲೆಗೆ ಲಭ್ಯವಾಗಲಿದೆ.

Seized cars of conman sukesh chandrasekhar Luxury cars to be auctioned on Aug 11th ckm
Author
First Published Aug 9, 2023, 8:10 PM IST

ನವದೆಹಲಿ(ಆ.09)  ಬರೋಬ್ಬರಿ 200 ಕೋಟಿ ರೂಪಾಯಿ ಸುಲಿಗೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್ ಜೈಲು ಸೇರಿದ್ದಾನೆ. ಈತನ ಗೆಳತಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ನೋರಾ ಫತೇಹಿ ಸೇರಿದಂತೆ ಕೆಲವರ ವಿಚಾರಣೆಗಳು ನಡೆದಿದೆ. ಇದೀಗ ಸುಕೇಶ್ ಚಂದ್ರಶೇಕರ್‌ನಿಂದ ಜಪ್ತಿ ಮಾಡಿರುವ ಐಷಾರಾಮಿ ಕಾರುಗಳನ್ನು ಹರಾಜು ಮಾಡಲಾಗುತ್ತಿದೆ. ಜಾರಿ ನಿರ್ದೇಶನಾಲಯ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಇದೀಗ ಇಡಿ ಅಧಿಕಾರಿಗಳು ಸುಕೇಶ್ ಚಂದ್ರಶೇಖರ್ ದುಬಾರಿ ಕಾರುಗಳನ್ನು ಹರಾಜು ಹಾಕುತ್ತಿದೆ. ಬೆಂಜ್, ಫೆರಾರಿ, ರೋಲ್ಸ್ ರಾಯ್ ಸೇರಿದಂತೆ ದುಬಾರಿ ಕಾರುಗಳು ಅತೀ ಕಡಿಮೆ ಬೆಲೆಗೆ ಲಭ್ಯವಾಗಲಿದೆ.

ಸುಕೇಶ್ ಚಂದ್ರಶೇಖರ್ ಬಳಸುತ್ತಿದ್ದ ಕೋಟಿ ಕೋಟಿ ಮೌಲ್ಯದ ಕಾರುಗಳನ್ನು ಇಡಿ ಅಧಿಕಾರಿಗಳು ಒಂದೇ ಕಡೆ ಪಾರ್ಕ್ ಮಾಡಿದ್ದಾರೆ. ಹಲವು ತಿಂಗಳಿನಿಂದ ಕಾರುಗಳನ್ನು ನಿಲ್ಲಿಸಲಾಗಿದೆ. ಹೀಗಾಗಿ ಧೂಳಿನಿಂದ ತುಂಬಿದೆ.  ಲ್ಯಾಂಡ್ ರೋವರ್ ರೇಂಜ್ ರೋವರ್, ಇಸುಜು ವಿ ಕ್ರಾಸ್, ಮರ್ಸಿಜೀಸ್ ಮೇಬಾಚ್ ಬ್ರಬಸ್, ಫೆರಾರಿ ಎಕ್ಸ್ 458 ಇಟಾಲಿಯಾ,  ಕ್ಯಾಡಿಲಿಯಾ ಎಸ್ಕಲೇಡ್, ರೋಲ್ಸ್ ರಾಯ್ಸ್ ಘೋಸ್ಟ್, ಮರ್ಸಿಡಿಸ್ ಬೆಂಜ್ ಎಸ್‌63 ಎಎಂಜಿ, ಲ್ಯಾಂಬೋರ್ಗಿನಿ ಉರುಸ್, ಬೆಂಟ್ಲಿ ಎಕ್ಸ್ 3, ಬೆಂಟ್ಲಿ ಮಲ್ಸೇನ್, ಆಸ್ಟನ್ ಮಾರ್ಟಿನ್ ವಿಂಟೇಜ್ ಸೇರಿದಂತೆ ಹಲವು ದುಬಾರಿ ಕಾರುಗಳ ಹರಾಜು ನಡೆಯಲಿದೆ.

ರೋಲ್ಸ್ ರಾಯ್ಸ್ to ಪೊರ್ಶೆ: ಹರಾಜಾಯ್ತು ನೀರವ್ ಮೋದಿ 12 ಕಾರು !

ಕೋಟಿ ಕೋಟಿ ಬೆಲೆಯ ದುಬಾರಿ ಕಾರುಗಳು ಹರಾಜಿನಲ್ಲಿ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಇಡಿ ಕಚೇರಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹರಾಜಿನ ಮಾಹಿತಿ ನೀಡಿದ್ದಾರೆ. ಹಲವರು ಈ ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿದ್ದಾರೆ. ವಿಶೇಷವಾಗಿ ಸೆಕೆಂಡ್ ಹ್ಯಾಂಡ್ ಕಾರು ಬಜಾರ್ ಮಾಲೀಕರು ಎಲ್ಲಾ ಕಾರುಗಳನ್ನು ಖರೀದಿಸಲು ತಯಾರಾಗಿದ್ದಾರೆ.

ಇತ್ತೀಚೆಗೆ ವಂಚಕ ಸುಕೇಶ್‌ ಚಂದ್ರಶೇಖರ್‌ನ 200 ಕೋಟಿ ರೂ ಅಕ್ರಮ ಪ್ರಕರಣದಲ್ಲಿ, ನಟಿ ನೋರಾ ಫತೇಹಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಮತ್ತೊಮ್ಮೆ ವಿಚಾರಣೆಗೆ ಗುರಿಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಕೈಗೊಂಡಿರುವ ಇ.ಡಿ. ಅಧಿಕಾರಿಗಳಿಗೆ ಮತ್ತಷ್ಟುಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ನೋರಾಳನ್ನು ವಿಚಾರಣೆಗೆ ಗುರಿಪಡಿಸಲಾಗಿದೆ ಎನ್ನಲಾಗಿದೆ. ಈ ಹಿಂದಿನ ವಿಚಾರಣೆ ವೇಳೆ 2020ರಲ್ಲಿ ಸುಕೇಶ್‌ನ ಪತ್ನಿ ಲೀನಾ ತನ್ನನ್ನು ಚೆನ್ನೈನ ಕಾರ್ಯಕ್ರಮಕ್ಕೆ ಆಹ್ವಾನಿಸಿ ದುಬಾರಿ ಐ ಫೋನ್‌, ಗಸ್ಸಿ ಬ್ಯಾಗ್‌, ಬಿಎಂಡಬ್ಲೂ ಕಾರು ಉಡುಗೊರೆಯಾಗಿ ನೀಡಿದ್ದರು ಎಂದು ನೋರಾ ಹೇಳಿದ್ದರು.

ಹಾಲಿವುಡ್ ನಟಿ ಮರ್ಲಿನ್ ಮುನ್ರೋ ಕಾರು ಹರಾಜು- ಅಂದಾಜು 3 ಕೋಟಿ

ವಂಚಕ ಸುಕೇಶ್‌ ಚಂದ್ರಶೇಖರ್‌ (33) ಜೈಲಲ್ಲೇ ಐಷಾರಾಮಿ ಜೀವನ ನಡೆಸುತ್ತಿದ್ದ ವಿಷಯ ಗುರುವಾರ ನಡೆದ ದಾಳಿಯ ವೇಳೆ ಬಯಲಾಗಿತ್ತು. ಸುಕೇಶ್‌ ಇರುವ ಮಂಡೋಲಿ ಜೈಲಿನ ಕೊಠಡಿಯ ಮೇಲೆ ದಾಳಿ ನಡೆಸಿದ ದೆಹಲಿ ಕಾರಾಗೃಹ ಇಲಾಖೆ ಅಧಿಕಾರಿಳು, 1.5 ಲಕ್ಷ ರು. ಮೌಲ್ಯದ ಒಂದು ಜೊತೆ ಗಸ್ಸಿ ಪಾದರಕ್ಷೆಗಳು ಹಾಗೂ 80,000 ರು. ಮೌಲ್ಯದ ಎರಡು ಜೀನ್ಸ್‌ ಪ್ಯಾಂಟ್‌ಗಳನ್ನು ವಶಪಡಿಕೊಂಡಿದ್ದರು. ಇತ್ತೀಚೆಗೆ ನಡೆದ ಈ ಕಾರ್ಯಾಚರಣೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

Follow Us:
Download App:
  • android
  • ios