ಮಹೀಂದ್ರ ಬಿಡುಗಡೆ ಮಾಡಿರುವ ಹೊಸ ವೇರಿಯೆಂಟ್ XUV 3XO REVX ಕಾರು ಈಗಾಗಲೇ ಡೀಲರ್ ಬಳಿ ತಲುಪಿದೆ. ಕೈಗೆಟುಕುವ ದರದಲ್ಲಿ ಕಾರು ಬಿಡುಗಡೆಯಾಗಿದೆ.ಇದರ ಬೆಲೆ ಪಟ್ಟಿ, ಆಫರ್ ಮಾಹಿತಿ ಇಲ್ಲಿದೆ.

ನವದೆಹಲಿ (ಜು.10) ಮಹೀಂದ್ರ ಕಾರುಗಳು ದೇಶದಲ್ಲೇ ಹೊಸ ಸಂಚಲನ ಸೃಷ್ಟಿಸಿದೆ. ಈಗಾಗಲೇ ಎಲೆಕ್ಟ್ರಿಕ್ ವಿಭಾಗದಲ್ಲಿ ಅತ್ಯಾಕರ್ಷಕ ವಿನ್ಯಾಸದ ಕಾರನ್ನು ಮಹೀಂದ್ರ ಬಿಡುಗಡೆ ಮಾಡಿದೆ. ಇತ್ತ ಇಂಧನ ಕಾರುಗಳಲ್ಲೂ ಮಹೀಂದ್ರ ಹೊಸ ತಂತ್ರಜ್ಞಾನ, ಹೊಸ ವಿನ್ಯಾಸದ ಮೂಲಕ ಗ್ರಾಹಕರ ಸೆಳೆಯುತ್ತಿದೆ. ಈ ಪೈಕಿ ಮರುವಿನ್ಯಾಸದಲ್ಲಿ ಬಿಡುಗಡೆಯಾಗಿರವ ಮಹೀಂದ್ರ XUV 3XO ಕಾರು ಇತ್ತೀಚೆಗೆ ಹೊಸ ವೇರಿಯೆಂಟ್ ಪರಿಚಯಿಸಿದೆ. XUV 3XO ಹೊಸ REVX ಮಾಡೆಲ್ ಕಾರುಗಳು ಈಗಾಗಲೇ ಡೀಲರ್ ಬಳಿ ತಲುಪಿದೆ. ಇದೀಗ ವಿತರಣೆ ಆರಂಭಗೊಳ್ಳುತ್ತಿದೆ.

ಮಹೀಂದ್ರ XUV 3XO ಹೊಸ REVX ಕಾರಿನ ಬೆಲೆ

ಮಹೀಂದ್ರ XUV 3XO ಹೊಸ REVX ಕಾರಿನ ಆರಂಭಿಕ ಬೆಲೆ 8.94 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಪೆಟ್ರೋಲ್ ಎಂಜಿನ್‌ನಲ್ಲಿ ಲಭ್ಯವಿರುವ ಈ ಕಾರಿನಲ್ಲಿ ಒಟ್ಟು ಮೂರು ವೇರಿಯೆಂಟ್ ಲಭ್ಯವಿದೆ.

ಮಹೀಂದ್ರ XUV 3XO ಹೊಸ REVX ಕಾರು ವೇರಿಯೆಂಟ್ ಹಾಗೂ ಬೆಲೆ

REVX M : 8.94 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)

REVX M (O) :9.44 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)

REVX A (ಮಾನ್ಯುಯೆಲ್) : 11.79 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)

REVX A (ಆಟೋಮ್ಯಾಟಿಕ್) : 12.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

REVX ವೇರಿಯೆಂಟ್ ಕಾರುಗಳಲ್ಲಿ ಈ ಲೋಗೋ ಇರಲಿದೆ. ಇನ್ನು 1.2 ಲೀಟರ್ TGDi ಹಾಗೂ 1.2 ಲೀಟರ್ ನಾನ್ TGDi ಎಂಜಿನ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. TGDi ಟರ್ಬೋ ಎಂಜಿನ್‌ನಲ್ಲಿ 6 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಲಭ್ಯವಿದೆ. ಇನ್ನು 1.2 ಲೀಟರ್ ನಾನ್ TGDi ಟರ್ಬೋ ಪೆಟ್ರೋಲ್ ಎಂಜಿನ್‌ನಲ್ಲಿ ಕೇವಲ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಮಾತ್ರ ಲಭ್ಯವಿದೆ.

ಡ್ಯುಯೆಲ್ ಟೋನ್ ಬ್ಲಾಕ್ ಆ್ಯಂಡ್ ವೈಟ್ ಇಂಟಿರೀಯರ್, ಪನೋರಮಿಕ್ ಸನ್‌ರೂಫ್, 16 ಇಂಚಿನ ಬ್ಲಾಕ್ ಆಲೋಯ್ ವ್ಹೀಲ್, bi-LED ಪ್ರೊಜೆಕ್ಟರ್ ಹೆಂಡ್‌ಲ್ಯಾಂಪ್ಸ್, 10.25 ಇಂಚಿನ ಸ್ಕ್ರೀನ್, ಡ್ಯುಯೆಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಅಡ್ರೆನೋಎಕ್ಸ್ ಕನೆಕ್ಟ್ವಿಟಿ, ಆ್ಯಪಲ್ ಕಾರ್‌ಪ್ಲೇ ಹಾಗೂ ಆ್ಯಂಡ್ರಾಯ್ಡ್ ಆಟೋ ಪ್ಲೇ, ರೇರ್ ವೈಪರ್, ವಾಶರ್, ರೇರ್ ಡಿಫಾಗರ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.