userpic
user icon
0 Min read

ಬೆಂಗಳೂರು ಟೆಕ್ ಮೇಳದಲ್ಲಿ ಹೊರಹೊಮ್ಮಿದ ಧ್ವನಿ: ಬಾಹ್ಯಾಕಾಶ ಕ್ಷೇತ್ರದಲ್ಲೂ ಬೇಕು ಮಹಿಳಾ ನಾಯಕತ್ವ..!

Womens Leadership is also Needed in the Field of Space grg
Bengaluru Tech Summit

Synopsis

ಇಸ್ರೋದಲ್ಲೂ ಮಹಿಳಾ ಪ್ರಾತಿನಿಧ್ಯ ಶೇ.20-25 ಇದ್ದು, ಇತ್ತೀಚಿನ ವರ್ಷಗಳಲ್ಲಿ ಬದಲಾವಣೆ ಕಾಣುತ್ತಿದೆ. ಹೊಸ ಮಹಿಳಾ ಪೀಳಿಗೆ ಬಾಹ್ಯಾಕಾಶ ಕ್ಷೇತ್ರದತ್ತ ಮುಖ ಮಾಡುತ್ತಿದೆ. ಹೊಸ ನೇಮಕಾತಿಗಳಲ್ಲಿ ಶೇ.50ರಷ್ಟು ಮಹಿಳಾ ಮುಖಗಳು ಕಾಣುತ್ತಿವೆ.  ಇಸ್ರೋದ ಚಂದ್ರಯಾನ, ಆದಿತ್ಯ ಮಿಷನ್‌ಗಳಲ್ಲಿ ಮಹಿಳೆಯರು ಪ್ರಮುಖ ಹುದ್ದೆಗಳಲ್ಲಿದ್ದರು ಎಂದು ತಿಳಿಸಿದ ಇಸ್ರೋದ ಬಾಹ್ಯಾಕಾಶ ನೌಕೆ ಕಾರ್ಯಾಚರಣೆ ವಿಭಾಗದ ಉಪ ನಿರ್ದೇಶಕರಾದ ನಂದಿನಿ ಹರಿನಾಥ್ 

ಬೆಂಗಳೂರು(ನ.29): ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತಿನ ವಿವಿಧ ದೇಶಗಳು ಅತ್ಯದ್ಭುತ ಪ್ರಗತಿ ಸಾಧಿಸುತ್ತಿದ್ದರೂ, ಇನ್ನೂ ಈ ಕ್ಷೇತ್ರ ಪುರುಷ ಪ್ರಧಾನವಾಗಿಯೇ ಉಳಿದಿದೆ. ವಿಶ್ವದಾದ್ಯಂತ ಮಹಿಳಾ ಪ್ರಾತಿನಿಧ್ಯ ಶೇ.20ರಷ್ಟು ಮಾತ್ರ ಇದೆ. ಇನ್ನಾದರೂ ಲಿಂಗ ಸಮಾನತೆ ಜಾರಿಗೆ ಬರಬೇಕು. ಬಾಹ್ಯಾಕಾಶ ಕ್ಷೇತ್ರಕ್ಕೂ ಸ್ತ್ರೀ ನಾಯಕತ್ವ ಬೇಕು ಎಂಬುದು ಬಾಹ್ಯಾಕಾಶ ಕ್ಷೇತ್ರದ ನಾಯಕಿಯರ ಒಕ್ಕೊರಲ ಆಗ್ರಹವಾಗಿದೆ.  

ಇಲ್ಲಿನ ಅರಮನೆ ಆವರಣದಲ್ಲಿ ಬುಧವಾರ ಆರಂಭವಾದ "ಬೆಂಗಳೂರು ಟೆಕ್ ಶೃಂಗಸಭೆ-2023"ರ ಅಂಗವಾಗಿ ನೆದರ್ಲೆಂಡ್ಸ್ ನಿರ್ವಹಿಸಿದ “ಬಾಹ್ಯಾಕಾಶದಲ್ಲಿ ಮಹಿಳೆ" ಸಂವಾದದಲ್ಲಿ ಈ ಅಭಿಪ್ರಾಯ ಹೊರಹೊಮ್ಮಿತು.
ಡ್ಯುವಾ ಅಸೋಸಿಯೇಟ್ಸ್‌ನ ಪಾಲುದಾರರಾದ, ವಕೀಲೆ, ಡಾ.ರಂಜನಾ ಕೌಲ್ ಮಾತನಾಡಿ,  ಲಿಂಗ ಸಮಾನತೆಗೆ ಕಾನೂನು ಚೌಕಟ್ಟಿನ ಬೆಂಬಲವಿದ್ದರೆ ಸಾಲದು. ಸಮಾಜದ ಮನಃಸ್ಥಿತಿ ಮುಖ್ಯವಾಗುತ್ತದೆ. ಭಾರತದ ಕಾನೂನಿನಲ್ಲಿ ಈಗಾಗಲೇ ಉದ್ಯೋಗಲ್ಲಿ ಲಿಂಗ ತಾರತಮ್ಯ ಇರಬಾರದು, ಸಮಾನ ಅವಕಾಶ ನೀಡಬೇಕು ಎಂಬುದಾಗಿ ಹೇಳಲಾಗಿದೆ ಎಂದು ವಿವರಿಸಿದರು. 

ಬೆಂಗಳೂರು ಟೆಕ್ ಸಮ್ಮಿಟ್: ಬದಿಗೆ ಸರಿದ ತಂತ್ರಜ್ಞಾನ, ಮೆರೆದ ರಾಜಕಾರಣಿಗಳು..!

ವಾಸ್ತವ ಸ್ಥಿತಿ ಬದಲಾವಣೆಯಾಗಬೇಕಾದರೆ, ಪೋಷಕರ ಬೆಂಬಲ ಅಗತ್ಯ. "ಓದಿದ್ದು ಸಾಕು, ಮದುವೆಯಾಗು" ಎಂದು ಹೇಳುವ ಮನಃಸ್ಥಿತಿ ಬದಲಾಗಬೇಕು. ಮಹಿಳೆಯರಿಗೂ ಸಾಧಿಸಲು ಸಾಧ್ಯ ಎಂಬ ಅರಿವು ಮೂಡಬೇಕು. ಸ್ತ್ರೀ-ಪುರುಷ ಜತೆಜತೆಯಾಗಿ ಸಾಗಬೇಕು ಎಂದು ಅಭಿಪ್ರಾಯಪಟ್ಟರು.

ಇಸ್ರೋದಲ್ಲಿ ಮಹಿಳಾ ಮುಖ: ಇಸ್ರೋದಲ್ಲೂ ಮಹಿಳಾ ಪ್ರಾತಿನಿಧ್ಯ ಶೇ.20-25 ಇದ್ದು, ಇತ್ತೀಚಿನ ವರ್ಷಗಳಲ್ಲಿ ಬದಲಾವಣೆ ಕಾಣುತ್ತಿದೆ. ಹೊಸ ಮಹಿಳಾ ಪೀಳಿಗೆ ಬಾಹ್ಯಾಕಾಶ ಕ್ಷೇತ್ರದತ್ತ ಮುಖ ಮಾಡುತ್ತಿದೆ. ಹೊಸ ನೇಮಕಾತಿಗಳಲ್ಲಿ ಶೇ.50ರಷ್ಟು ಮಹಿಳಾ ಮುಖಗಳು ಕಾಣುತ್ತಿವೆ.  ಇಸ್ರೋದ ಚಂದ್ರಯಾನ, ಆದಿತ್ಯ ಮಿಷನ್‌ಗಳಲ್ಲಿ ಮಹಿಳೆಯರು ಪ್ರಮುಖ ಹುದ್ದೆಗಳಲ್ಲಿದ್ದರು ಎಂದು ಇಸ್ರೋದ ಬಾಹ್ಯಾಕಾಶ ನೌಕೆ ಕಾರ್ಯಾಚರಣೆ ವಿಭಾಗದ ಉಪ ನಿರ್ದೇಶಕರಾದ ನಂದಿನಿ ಹರಿನಾಥ್ ಹೇಳಿದರು

ಸಂಸ್ಥೆ, ಸಮಾಜ ಹೀಗೆ ಎಲ್ಲಾ ಹಂತಗಳಲ್ಲಿ ಮಹಿಳೆಯರು ಗೋಚರಿಸಬೇಕು. ಇದಕ್ಕೆ ಸಂಸ್ಥೆ ಹಾಗೂ ಸಮಾಜದ ಬೆಂಬಲವೂ ಬೇಕು. ಮಹಿಳೆಯರ ಪ್ರಾತಿನಿಧ್ಯ ಶೇ.50ರ ತನಕ ಹೆಚ್ಚಿದರೆ ಅದ್ಭುತ ಸಾಧನೆಯಾಗುತ್ತದೆ. ಆಗ ಸಂಸ್ಥೆಗಳಲ್ಲಿ ವೈವಿಧ್ಯಮಯ ಚಿಂತನೆ ಹುಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಷೇರು ಮಾರುಕಟ್ಟೆಯ ಐತಿಹಾಸಿಕ ಸಾಧನೆ, 4 ಟ್ರಿಲಿಯನ್‌ ಡಾಲರ್‌ ಕ್ಲಬ್‌ ಸೇರಿದ ಭಾರತ!

ಬಾಹ್ಯಾಕಾಶ ಕ್ಷೇತ್ರದ ತಾಂತ್ರಿಕ ವಿಭಾಗದಲ್ಲಿ ಈಗಲೂ ಪುರುಷ ಪ್ರಾಧಾನ್ಯತೆ ಇದೆ. ಮಹಿಳೆಯರಿಗೂ ಅವಕಾಶ ಸಿಗಬೇಕಿದೆ. ಹೊಸ ಚಿಂತನೆ ಹುಟ್ಟಲು ಲಿಂಗ ವೈವಿಧ್ಯವಷ್ಟೇ ಅಲ್ಲ, ಸಾಂಸ್ಕೃತಿಕ ವೈವಿಧ್ಯವೂ ಅಗತ್ಯವೆಂಬುದು ತಮ್ಮ ಅಭಿಪ್ರಾಯ ಎಂದು ಜಿಯೋಸ್ಪೇಶಿಯಲ್, ಫುಗ್ರೋದ ಡಾ.ಪೂಜಾ ಮಹಾಪಾತ್ರಾ ಹೇಳಿದರು.

ಮಹಿಳೆಯರಿಗೆ ಸಾಮರ್ಥ್ಯವಿದೆ. ಅವರಿಗೆ ಅವಕಾಶ ನೀಡಿದರೆ ನಾಯಕತ್ವ ಸಾಬೀತುಪಡಿಸಬಲ್ಲರು ಎಂದರು ನೆದರ್ಲೆಂಡ್ ಸ್ಪೇಸ್ ಆಫೀಸ್‌ನ ಹಿರಿಯ ಬಾಹ್ಯಾಕಾಶ ಸಲಹೆಗಾರ್ತಿ ಜೊವಾನ್ನಾ ರುಯಿಟರ್ಸ್. ಭಾರತದ ನೆದರ್ಲೆಂಡ್ ರಾಯಭಾರಿ ಎಚ್.ಇ. ಮರಿಸಾ ಜೆರಾಡ್ಸ್ ಕಾರ್ಯಕ್ರಮ ನಿರ್ವಹಿಸಿದರು.

Latest Videos