ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಜುಲೈ ತಿಂಗಳ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ದಿಗ್ಗಜ ಉದ್ಯಮಿಗಳು ಸ್ಥಾನ ಪಡೆದಿದ್ದಾರೆ. ಈ ಟಾಪ್ 10 ಪಟ್ಟಿಯಲ್ಲಿ ಏಕೈಕಾ ಮಹಿಳಾ ಉದ್ಯಮಿ ಸ್ಥಾನ ಪಡೆದಿದ್ದಾರೆ.

ನವದೆಹಲಿ (ಜು.09 ) ಫೋರ್ಬ್ಸ್ ಶ್ರೀಮಂತರ ಪಟ್ಟಿ ಬಿಡುಗಡೆಗೊಂಡಿದೆ. ಭಾರತದ ಶ್ರೀಮಂತರು ಯಾರು? ಇಂಧನ, ತಂತ್ರಜ್ಞಾನ, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳ ಶ್ರೀಮಂತ ಉದ್ಯಮಿಗಳ ಪಟ್ಟಿ ಬಿಡುಗಡೆಯಾಗಿದೆ. ಜುಲೈ ತಿಂಗಳ ಫೋರ್ಬ್ಸ್ ಪಟ್ಟಿಯಲ್ಲಿ ಮತ್ತೆ ಭಾರತದ ದಿಗ್ಗಜ ಉದ್ಯಮಿ ಮುಕೇಶ್ ಅಂಬಾನಿ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ಹಿಂಡನ್‌ಬರ್ಗ್ ವರದಿ, ಮಾರುಕಟ್ಟೆಯಲ್ಲಿ ಆದ ಭಾರಿ ಏರಿಳಿತಗಗಳ ನಡುವೆಯೂ ಗೌತಮ್ ಅದಾನಿ 2ನೇ ಸ್ಥಾನದಲ್ಲಿದ್ದಾರೆ. ಆದರೆ ಈ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಮಹಿಳಾ ಉದ್ಯಮಿ ಸಾವಿತ್ರಿ ಜಿಂದಾಲ್.ಜುಲೈ ತಿಂಗಳು ಫೋರ್ಬ್ಸ್ ಬಿಡುಗಡೆ ಮಾಡಿದ ಈ ಶ್ರೀಮಂತರ ಟಾಪ್ 10 ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ರಿಯಲ್ ಎಸ್ಟೇಟ್ ಉದ್ಯಮಿ ಕುಶಾಪ್ ಪಾಲ್ ಸಿಂಗ್ ಕಾಣಿಸಿಕೊಂಡಿದ್ದಾರೆ.

ಭಾರತದ ಶ್ರೀಮಂತರ ಉದ್ಯಮಿಗಳ ಪಟ್ಟಿ

1) ಮುಕೇಶ್ ಅಂಬಾನಿ: 115.5 ಬಿಲಿಯನ್ ಅಮೆರಿಕನ್ ಡಾಲರ್ ನೆಟ್‌ವರ್ತ್

2) ಗೌತಮ್ ಅದಾನಿ : 67 ಬಿಲಿಯನ್ ಅಮೆರಿಕನ್ ಡಾಲರ್ ನೆಟ್‌ವರ್ತ್

3) ಶಿವ್ ನಾಡರ್: 38 ಬಿಲಿಯನ್ ಅಮೆರಿಕನ್ ಡಾಲರ್ ನೆಟ್‌ವರ್ತ್

4) ಸಾವಿತ್ರಿ ಜಿಂದಾಲ್ ಹಾಗೂ ಕುಟುಂಬ :37.3 ಬಿಲಿಯನ್ ಅಮೆರಿಕನ್ ಡಾಲರ್ ನೆಟ್‌ವರ್ತ್

5) ದಿಲೀಪ್ ಶಾಂಘವಿ: 26.4 ಬಿಲಿಯನ್ ಅಮೆರಿಕನ್ ಡಾಲರ್ ನೆಟ್‌ವರ್ತ್

6) ಸೈರಸ್ ಪೂನಾವಾಲ:25.1 ಬಿಲಿಯನ್ ಅಮೆರಿಕನ್ ಡಾಲರ್ ನೆಟ್‌ವರ್ತ್

7) ಕುಮಾರ್ ಮಂಗಲಂ ಬಿರ್ಲಾ: 22.2 ಬಿಲಿಯನ್ ಅಮೆರಿಕನ್ ಡಾಲರ್ ನೆಟ್‌ವರ್ತ್

8) ಲಕ್ಷ್ಮಿ ಮಿತ್ತಲ್: 18.7 ಬಿಲಿಯನ್ ಅಮೆರಿಕನ್ ಡಾಲರ್ ನೆಟ್‌ವರ್ತ್

9) ರಾಧಾಕೃಷ್ಣ ಧಮಾನಿ: 18.3 ಬಿಲಿಯನ್ ಅಮೆರಿಕನ್ ಡಾಲರ್ ನೆಟ್‌ವರ್ತ್

10 ) ಕುಶಾಲ್ ಪಾಲ್ ಸಿಂಗ್: 18.1 ಬಿಲಿಯನ್ ಅಮೆರಿಕನ್ ಡಾಲರ್ ನೆಟ್‌ವರ್ತ್

ಟಾಪ್ 10 ಪಟ್ಟಿಯಲ್ಲಿ ಏಕೈಕ ಮಹಿಳಾ ಉದ್ಯಮಿ

ಸ್ಟೀಲ್ ಹಾಗೂ ಪವರ್ ಇಂಡಸ್ಟ್ರಿ ಉದ್ಯಮದಲ್ಲಿರುವ ಒಪಿ ಜಿಂದಾಲ್ ಗ್ರೂಪ್ ಮುನ್ನಡೆಸುತ್ತಿರುವ ಸಾವಿತ್ರ ಜಿಂದಾಲ್ ಜುಲೈ ತಿಂಗಳ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಿಶೇಷ ಅಂದರೆ ಸಾವಿತ್ರಿ ಜಿಂದಾಲ್ ಭಾರತದ ಶ್ರೀಮಂತರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ.

ಬಿಲೇನಿಯರ್ ಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ

ವಿಶೇಷ ಅಂದೆ ಜಾಗತಿಕ ಮಟ್ಟದಲ್ಲಿ ಭಾರತ ಮಹತ್ವದ ಸ್ಥಾನ ಪಡೆದಿದೆ. ಅತೀ ಹೆಚ್ಚು ಬಿಲೇನಿಯರ್ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನ ಪಡೆದುಕೊಂಡಿದೆ. ಅತೀ ಹೆಚ್ಚು ಬಿಲೇನಿಯರ್ ಹೊಂದಿದ ರಾಷ್ಟ್ರದ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ 2ನೇ ಸ್ಥಾನದಲ್ಲಿದೆ. ಭಾರತ 3ನೇ ಸ್ಥಾನ ಪಡೆದುಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ಆದ ಏರಿಳಿತಗಳಿಂದ ಬಿಲೇನಿಯರ್ ಸಂಖ್ಯೆ ಕೊಂಚ ಇಳಿಕೆಯಾಗಿದೆ.

ಮುಕೇಶ್ ಅಂಬಾನಿಗೆ ಜಾತಿಕ ಮಟ್ಟದಲ್ಲಿ 15ನೇ ಸ್ಥಾನ

ಮುಕೇಶ್ ಅಂಬಾನಿ ಭಾತದ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಮುಕೇಶ್ ಅಂಬಾನಿ ಮೊದಲ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಜಾಗತಿಕ ಮಟ್ಟದಲ್ಲಿ ಮುಕೇಶ್ ಅಂಬಾನಿ ಸ್ಥಾನ 15. ಆಯಿಲ್, ಗ್ಯಾಸ್, ಟೆಲಿಕಾಂ, ರಿಟೇಲ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ಅಂಬಾನಿ ತೊಡಗಿಸಿಕೊಂಡಿದ್ದಾರೆ.

ಮಾರುಕಟ್ಟೆ ಕುಸಿತದ ನಡುವೆ ಅದಾನಿಗೆ 2ನೇ ಸ್ಥಾನ

ಗೌತಮ್ ಅದಾನಿ ಕಳೆದ ಕೆಲ ವರ್ಷಗಳಲ್ಲಿ ಭಾರಿ ಚರ್ಚೆ ಹಾಗೂ ಟೀಕೆಗೆ ಗುರಿಯಾದ ಉದ್ಯಮಿ. ಇಂಧನ ಕ್ಷೇತ್ರದಿಂದ ಹಿಡಿದು ಹಲವು ಕ್ಷೇತ್ರಗಳ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಗೌತಮ್ ಅದಾನಿ 2ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಹಿಂಡನ್‌ಬರ್ಗ್ ವರದಿ ಬಳಿಕ ಅಾನಿ ಷೇರುಗಳು ಪಾತಾಳಕ್ಕೆ ಕುಸಿದಿತ್ತು. ಆದರೆ ಮತ್ತೆ ಸಾಮ್ರಾಜ್ಯ ಕಟ್ಟಿರುವ ಅದಾನಿ, ಭಾರತದ 2ನೇ ಶ್ರೀಮಂತ ಎಂದು ಗುರುತಿಸಿಕೊಂಡಿದ್ದಾರೆ.