userpic
user icon
0 Min read

ಕಡಿಮೆ ಬೆಲೆಯಲ್ಲಿ ಬೆಸ್ಟ್ ಬೈಕ್, 60 ಸಾವಿರ ರೂ ಬೆಲೆಯ ಹೀರೋ HF ಡಿಲಕ್ಸ್ ಬ್ಲಾಕ್ ಬೈಕ್ ಬಿಡುಗಡೆ!

Hero Motocorp launch HF Deluxe black canvas bike with rs 60760 starting price ckm

Hero HF 100

Synopsis

ಇದೀಗ ಯಾವುದೇ ಉತ್ತಮ ಬೈಕ್ ಖರೀದಿಸಲು ಸರಿಸುಮಾರು 1 ಲಕ್ಷ ರೂಪಾಯಿ ಬೇಕು. ಆದರೆ ಹೀರೋ ಮೋಟೋಕಾರ್ಪ್ ಕೈಗೆಟುಕುವ ದರದಲ್ಲಿ ಉತ್ತಮ ಬೈಕ್ ಬಿಡುಗಡೆ ಮಾಡಿದೆ. ಇದರ ಬೆಲೆ ಕೇವಲ 60 ಸಾವಿರ ರೂಪಾಯಿ. ಜೊತೆಗೆ ಉತ್ತಮ ಮೈಲೇಜ್ ಕೂಡ ಹೊಂದಿದೆ.
 

ನವದೆಹಲಿ(ಜೂ.04):  ಭಾರತದಲ್ಲಿ ದ್ವಿಚಕ್ರವಾಹನಗಳ ಬಲೆ ದುಬಾರಿಯಾಗಿದೆ.ಜೂನ್ 1 ರಿಂದ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯೂ ಹೆಚ್ಚಳವಾಗಿದೆ. ಹೀಗಾಗಿ ಸ್ಕೂಟರ್ ಅಥವ ಬೈಕ್ ಖರೀದಿಸಲು ಸಾಮಾನ್ಯವಾಗಿ 1 ಲಕ್ಷ ರೂಪಾಯಿ ಬೇಕು. ಇದರ ನಡುವೆ ಹೀರೋ ಮೋಟಾರ್‌ಕಾರ್ಪ್ ಮತ್ತೊಂದು ಕೈಗೆಟುವ ದರದ ಬೈಕ್ ಬಿಡುಗಡೆ ಮಾಡಿದೆ. ಹೀರೋ HF ಡಿಲಕ್ಸ್ ಬ್ಲಾಕ್ ಕ್ಯಾನ್ವಾಸ್ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಇದರ ಬೆಲೆ 60,760 ರೂಪಾಯಿ(ಎಕ್ಸ ಶೋ ರೂಂ). ಆಕರ್ಷಕ ವಿನ್ಯಾಸದ ಈ ಬೈಕ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. 

ನೂತನ ಹೀರೋ HF ಡಿಲಕ್ಸ್ ಬ್ಲಾಕ್ ಕ್ಯಾನ್ವಾಸ್ ಬೈಕ್ ಎರಡು ವೇರಿಯೆಂಟ್‌ನಲ್ಲಿ ಲಭ್ಯವಿದೆ. ಒಂದು ಕಿಕ್ ಸ್ಟಾರ್ಟ್ ಮತ್ತೊಂದು ಸೆಲ್ಫ್ ಸ್ಟಾರ್ಟ್, ಕಿಕ್ ಸ್ಟಾರ್ಟ್ ಬೈಕ್ ಬೆಲೆ 60,760 ರೂಪಾಯಿ ಇನ್ನು ಸೆಲ್ಫ್ ಸ್ಟಾರ್ಟ್ ಬೈಕ್ ಬೆಲೆ 66,408 ರೂಪಾಯಿ(ಎಕ್ಸ್ ಶೋ ರೂಂ). ನಾಲ್ಕು ಬಣ್ಣಗಳಲ್ಲಿ ನೂತನ ಬೈಕ್ ಲಭ್ಯವಿದೆ. i3s ವೇರಿಯೆಂಟ್, ಯೂಎಸ್‌ಬಿ ಚಾರ್ಜರ್ ಸೇರಿದಂತೆ ಹಲವು ಫೀಚರ್ಸ್ ಈ ಬೈಕ್‌ನಲ್ಲಿ ಲಭ್ಯವಿದೆ.

 

ಕೈಗೆಟುಕುವ ದರ, ಎಥೆನಾಲ್ ಮಿಶ್ರಣ ಇಂಧನದ ಹೊಸ ಹೀರೋ XPULSE ಬೈಕ್ ಬಿಡುಗಡೆ!

97.2ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದೆ. 7.9bhpಪವರ್ ಹಾಗೂ 8.05nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.4 ಸ್ಪೀಡ್ ಗೇರ್‌ಬಾಕ್ಸ್, ಬಿಎಸ್‌6 ಫೇಸ್2 ಎಮಿಶನ್ ಎಂಜಿನ್ ಹೊಂದಿದೆ. ನೂತನ ಹೀರೋ HF ಡಿಲಕ್ಸ್ ಬ್ಲಾಕ್ ಕ್ಯಾನ್ವಾಸ್ ಬೈಕ್, ಹೊಂಡಾ ಶೈನ್, ಬಜಾಜ್ ಪ್ಲಾಟಿನಂ ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ.

ಹೀರೋ ಮೋಟೋಕಾರ್ಪ್ ಇತ್ತೀಚೆಗೆ ಹಲವು ಬೈಕ್‌ಗಳನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ. ಕೆಲ ಬೈಕ್‌ಗಳನ್ನು ಅಪ್‌ಗ್ರೇಡ ಮಾಡಿ ಹೆಚ್ಚುವರಿ ಫೀಚರ್ಸ್ ಸೇರಿಸಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಎಕ್ಸ್‌ಪಲ್ಸ್‌ 200 4 ವೇಲ್ವ್ ಬೈಕ್ ಕೂಡ ಒಂದಾಗಿದೆ.  ಅಡ್ವೆಂಚರ್‌ ಮೋಟಾರ್‌ಸೈಕಲ್‌ ಎಕ್ಸ್‌ಪಲ್ಸ್‌ 200 4 ವಾಲ್‌್ವ ಅನ್ನು ಹೀರೋ ಮೋಟೋಕಾಪ್‌ರ್‍ ಬಿಡುಗಡೆ ಮಾಡಿದೆ. ಇದರ ಎಕ್ಸ್‌ಶೋ ರೂಮ್‌ ಆರಂಭಿಕ ಬೆಲೆ ರು.1,50,891. 200 ಸಿಸಿ ಬಿಎಸ್‌ 6 ಇಂಜಿನ್‌ ಹೊಂದಿರುವ ಈ ಬೈಕ್‌ನಲ್ಲಿ ರೈಡರ್‌ ಸುರಕ್ಷತೆಗೆ ಒತ್ತು ನೀಡಲಾಗಿದ್ದು, ಆರಾಮದಾಯಕ ರೈಡಿಂಗ್‌ ಅನುಭವ ನೀಡುತ್ತದೆ ಎಂದು ಕಂಪನಿ ಹೇಳಿದೆ. ಆಫ್‌ರೋಡ್‌ನಲ್ಲೂ ಸುಲಲಿತವಾಗಿ ಚಲಿಸುವ ಬೈಕ್‌ ಇದು. 

ಕೈಗೆಟುಕುವ ದರ, ಕೆನೆಕ್ಟಿವಿಟಿ ಫೀಚರ್ಸ್, ಹೊಚ್ಚ ಹೊಸ ಸೂಪರ್ ಸ್ಪ್ಲೆಂಡರ್ XTEC ಬಿಡುಗಡೆ!

ಫ್ಯಾಮಿಲಿ ಬೈಕ್‌ ಅಂತಲೇ ಫೇಮಸ್‌ ಆಗಿರೋ ಸ್ಪೆಂಡರ್‌ ಇದೀಗ ಹೊಸ ರೂಪದಲ್ಲಿ ಎಂಟ್ರಿ ಕೊಟ್ಟಿದೆ. 125 ಸಿಸಿ ಸಾಮರ್ಥ್ಯದ ಸೂಪರ್‌ ಸ್ಪ್ಲೆಂಡರ್‌ ಎಕ್ಸ್‌ಟಿಇಸಿ ಬೈಕ್‌ನ ಮೈಲೇಜ್‌ ಲೀಟರ್‌ಗೆ 68 ಕಿಮೀ. ಎರಡು ಮಾದರಿಗಳಲ್ಲಿ ಈ ಬೈಕ್‌ ಲಭ್ಯವಿದೆ. ಕ್ಸ್‌ ಶೋ ರೂಮ್‌ ಬೆಲೆ : 83,368 ರು. (ಡ್ರಮ್‌ ವೇರಿಯೆಂಟ್‌), 87,268 ರು. (ಡಿಸ್ಕ್ ವೇರಿಯೆಂಟ್‌)

Latest Videos