ಬೆಂಗಳೂರು(ಜ.07): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.


1. ನಿರ್ಭಯಾ ಹತ್ಯಾಚಾರಿಗಳಿಗೆ ಡೆತ್ ವಾರೆಂಟ್: ರಾಕ್ಷಸರ ಸಂಹಾರಕ್ಕೆ ದಿನಾಂಕ ಫಿಕ್ಸ್!

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಹತ್ಯಾಚಾರ ಪ್ರಕರಣದಲ್ಲಿ ಕೊನೆಗೂ ಸಂತ್ರಸ್ಥೆಗೆ ನ್ಯಾಯ ದೊರೆತಿದೆ. ನಿರ್ಭಯಾ ಹತ್ಯಾಚಾರಿಗಳಿಗೆ ಡೆತ್ ವಾರೆಂಟ್ ಜಾರಿಗೊಳಿಸಿರುವ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯ, ಜ.22ರ ಬೆಳಗ್ಗೆ 7 ಗಂಟೆಗೆ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಬೇಕು ಎಂದು ಆದೇಶ ನೀಡಿದೆ.

2. ಜ.8 ಭಾರತ್‌ ಬಂದ್‌: ಏನಿದೆ-ಏನಿಲ್ಲ? ಶಾಲೆಗಳಿಗೆ ರಜೆ ಇರುತ್ತಾ?


ಕೇಂದ್ರ ಕಾರ್ಮಿಕ ಸಂಘಟನೆಗಳು ಜನವರಿ 8 ರಂದು ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ರಾಜ್ಯದ ಬಹುತೇಕ ಕಾರ್ಮಿಕ ಸಂಘಟಗಳು ಹಾಗೂ ಸಂಘ ಸಂಸ್ಥೆಗಳು ನೈತಿಕ ಬೆಂಬಲ ಸೂಚಿಸಿವೆ. ಆದರೆ ಈ ವೇಳೆ ಏನಿರುತ್ತೆ, ಏನಿರಲ್ಲ ಇಲ್ಲಿದೆ ಮಾಹಿತಿ.

3. 4 ದಿನಗಳ ಟೆಸ್ಟ್‌ ನಡೆಸಲು ಗಂಗೂಲಿ ಬಿಡಲ್ಲ: ಅಖ್ತರ್‌!


4 ದಿನಗಳ ಟೆಸ್ಟ್ ಆಯೋಜನೆಯ ಬಗ್ಗೆ ಒಲವು ಹೊಂದಿರುವ ಐಸಿಸಿ ವಿರುದ್ಧ ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಕಿಡಿಕಾರಿದ್ದಾರೆ. ಅಲ್ಲದೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎದುರು ಹಾಕಿಕೊಂಡು 4 ದಿನಗಳ ಟೆಸ್ಟ್ ಆಯೋಜನೆ ಸುಲಭವಲ್ಲ ಎಂದಿದ್ದಾರೆ. ಈ ಮೂಲಕ ಬಿಸಿಸಿಐ ಮಹತ್ವವನ್ನು ಒತ್ತಿ ಹೇಳಿದ್ದಾರೆ.

4. JNU ಬ್ಯಾನ್ ಮಾಡೋದು ಸರಿ ಅಲ್ಲ: ಕಲ್ಲಡ್ಕ ಪ್ರಭಾಕರ್ ಭಟ್


JNU ಕ್ಯಾಂಪಸ್‌ಗೆ ನುಗ್ಗಿ ಮುಸುಕುಧಾರಿ ದುಷ್ಕರ್ಮಿಗಳು ಹಲ್ಲೆ ನಡೆಸಿದ ಬೆನ್ನಲ್ಲೇ ಈ ವಿವಿಯನ್ನು ಕೆಲವು ವರ್ಷಗಳ ಕಾಲ ಮುಚ್ಚಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬೇರೆಯದೇ ಪರಿಹಾರ ಸೂಚಿಸಿದ್ದಾರೆ. ಏನದು?

5. ಒಬ್ಬಳೇ ಓಡಾಡೋದನ್ನು ಕಲಿಯೋಕೆ ಸೋಲೋ ಟ್ರಿಪ್ ಹೋದ್ರಂತೆ ಅನುಪಮಾ ಗೌಡ!


ಕಿರುತೆರೆ ಹಾಗೂ ಹಿರಿತೆರೆ ಎರಡಕ್ಕೂ ಚಿರಪರಿಚಿತ ಹೆಸರು ಅನುಪಮಾ ಗೌಡ.  ಈಗ ಅವರು ಒಂದಷ್ಟು ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಸೋಲೋ ಟ್ರಿಪ್‌ ಮೂಲಕ ವಿಯೆಟ್ನಾಂ ದೇಶ ಸುತ್ತುತ್ತಿದ್ದಾರೆ. ಅಲ್ಲಿನ ಹನಾಯ್‌, ಹೋಚಿಮಿನ್‌ ಸೇರಿದಂತೆ ಐದಾರು ನಗರಗಳ ಜತೆಗೆ ಅನೇಕ ರಮಣೀಯ ತಾಣಗಳನ್ನು ಸುತ್ತಾಡಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ. 

6. JDS ಶಾಸಕ-ಬಿಜೆಪಿ ಶಾಸಕ ಮಧ್ಯೆ ವಾಕ್ಸಮರ: ವಿಡಿಯೋ ವೈರಲ್

ಜಿಲ್ಲೆಯ ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಶಾಸಕ ಹಾಗೂ ಬಿಜೆಪಿ ಕಾರ್ಯಕರ್ತನ ನಡುವೆ ಬಹಿರಂಗವಾಗಿ ಮಾತಿನ ಚಕಮಕಿಯಾಗಿದೆ.

7. ಯುದ್ಧ ಭೀತಿ ತಂದ ಫಜೀತಿ: ಪೆಟ್ರೋಲ್ ಬೆಲೆ ದಿಢೀರ್ ಏರಿಕೆ!


ಅಮೆರಿಕ-ಇರಾನ್ ವೈಮನಸ್ಸಿನ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಇದರ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗಿದೆ.

8. ಭೂಮಿಯ ಅವಳಿ ಗ್ರಹ ಪತ್ತೆ ಹಚ್ಚಿದ ನಾಸಾ: ಬದುಕಲು ಬೇಕಾಗಿರುವುದೆಲ್ಲಾ ಇದೆ!

ನಾಸಾದ TESS ಟೆಲಿಸ್ಕೋಪ್ ಭೂಮಿಯ ಅವಳಿ ಗ್ರಹವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಭೂಮಿಯಿಂದ ಬರೋಬ್ಬರಿ 100 ಜ್ಯೋತಿರ್ವರ್ಷ ದೂರದಲ್ಲಿರುವ ಈ ಗ್ರಹಕ್ಕೆ TOI 700 d ಎಂದು ಹೆಸರಿಸಲಾಗಿದೆ.

9. ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನೇಮಕಾತಿ: ಅರ್ಜಿ ಹಾಕಿ


ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ 11 ಅಧಿಕಾರಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಿದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 23,2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

10. ಕೋವಿಂದ್ ಬರೋ ದಿನವೇ ಈಕೆಯ ಮದುವೆ: ಮುಂದೇನಾಯ್ತು ಗುರುವೇ?


ಕೇರಳದ ಕೊಚ್ಚಿಗೆ ಆಗಮಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಲಬಾರ್ ತಾಜ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲದೇ ಇಂದು ಇದೇ ಹೋಟೆಲ್‌ನಲ್ಲಿ ಮದುವೆಯಾಗಬೇಕಿದ್ದ ಅಮರಿಕದ ಆಶ್ಲೆ ಹಾಲ್‌ ಅವರ ಮದುವೆಗೂ ಕೋವಿಂದ್ ಅನುವು ಮಾಡಿಕೊಟ್ಟಿದ್ದಾರೆ.