ಗಣಿಕಾರಿಕಾ ಕೇಂದ್ರ ಘಟಕದಲ್ಲಿ ಭಾರಿ ಭೂಕುಸಿತ ಸಂಭವಿಸಿತ್ತು. 9 ದಿನಗಳ ಹಿಂದೆ ನಡೆದ ಈ ಘಟನೆಯಲ್ಲಿ ಇಬ್ಬರು ಕಾರ್ಮಿಕರು ಬರೋಬ್ಬರಿ 620 ಅಡಿ ಆಳದಲ್ಲಿ ಸಿಲುಕಿದ್ದರು. ಸತತ ಕಾರ್ಯಾಚರಣೆ ಮಾಡಿ ಇಬ್ಬರನ್ನು ರಕ್ಷಿಸಲಾಗಿದೆ. ಕಳೆದ 9 ದಿನ ಕೇವಲ ಕಾಫಿ ಪುಡಿಯಿಂದ ಇಬ್ಬರು ಬದುಕುಳಿದಿದ್ದಾರೆ.
ದಕ್ಷಿಣ ಕೊರಿಯಾ(ನ.06): ಭೂಮಿಯ ಆಳದಿಂದ ಸತುವನ್ನು ಹೊರಗೆ ತೆಗೆಯುವ ದಕ್ಷಿಣ ಕೊರಿಯಾದ ಬೊಂಗ್ವಾದಲ್ಲಿನ ಗಣಿಗಾರಿಕಾ ಕೇಂದ್ರದಲ್ಲಿ ಭಾರಿ ಕುಸಿತ ಸಂಭವಿಸಿ ಇಂದಿಗೆ 9 ದಿನ. ಕಳೆದ 9 ದಿನಗಳಿಂದ ಬರೋಬ್ಬರಿ 620 ಅಡಿ ಆಳದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಲು ಸತತ ಕಾರ್ಯಾಚರಣೆ ನಡೆಸಲಾಗಿದೆ. ಸತತ 9 ದಿನಗಳ ಬಳಿಕ ಪಾತಾಳದಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರನ್ನು ರಕ್ಷಿಸಲಾಗಿದೆ. ವಿಶೇಷ ಅಂದರೆ 9 ದಿನ ಯಾವುದೇ ಆಹಾರವಿಲ್ಲದೆ ಇಬ್ಬರು ಕಾರ್ಮಿಕರು ಬದುಕುಳಿದಿದ್ದು ಹೇಗೆ ಎಂಬ ಅಚ್ಚರಿ ಎಲ್ಲರನ್ನು ಕಾಡಿದೆ. ಇದಕ್ಕೆ ಉತ್ತರವೂ ಸಿಕ್ಕಿದೆ. ಇಬ್ಬರು ಕಾರ್ಮಿಕರು ಕಾಫಿ ಪುಡಿ ಹಾಗೂ ಹನಿ ನೀರಿನಿಂದ ಬದುಕುಳಿದಿದ್ದಾರೆ. ಕಳೆದ 9 ದಿನ ಕಾಫಿ ಪುಡಿಯನ್ನು ಸ್ವಲ್ಪ ತಿನ್ನುತ್ತಾ ಭೂಮಿಯ ಅಡಿಯಲ್ಲಿ ತೇವದಿಂದ ಬರುವ ಹನಿ ನೀರನ್ನು ಕುಡಿಯುತ್ತಾ ಕಳೆದಿದ್ದಾರೆ. ಈ ಮೂಲಕ ಜೀವ ಉಳಿಸಿಕೊಂಡಿದ್ದಾರೆ. ಇದು ಅಚ್ಚರಿ ತಂದಿದೆ. ಅವರ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಸೌತ್ ಕೊರಿಯಾ ಅಧ್ಯಕ್ಷ ಯೊನ್ ಸುಕ್ ಯೆಲ್ ಹೇಳಿದ್ದಾರೆ.
ಅಕ್ಟೋಬರ್ 26 ರಂದು ಸತುವಿನ ಗಣಿಯಲ್ಲಿ ಭೂಕುಸಿತ ಸಂಭವಿಸಿತ್ತು. ಈ ವೇಳೆ ಇಬ್ಬರು ಕಾರ್ಮಿಕರು 620 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದರು. 62 ವರ್ಷದ ಹಾಗೂ 56 ವರ್ಷದ ಇಬ್ಬರು ಭೂಮಿಯಡಿ ಸಿಲುಕಿದ್ದರು. ಭೂಕುಸಿತದಿಂದ ಇಬ್ಬರು ಕಾರ್ಮಿಕರು ಸಿಲುಕಿ ಒದ್ದಾಡಿದ್ದಾರೆ. ಇವರು ಕೆಲಸದ ವೇಳೆ ಕುಡಿಯಲು ತಂದಿದ್ದ ತ್ವರಿತ ಕಾಫಿ ಪುಡಿ(instant coffee) ಜೀವ ಉಳಿಸಿದೆ. 30 ಪ್ಯಾಕೆಟ್ ಕಾಫಿ ಪುಡಿಯನ್ನು ಕೆಲಸದ ವೇಳೆ ಇಟ್ಟುಕೊಂಡಿದ್ದರು.
ಮೊರ್ಬಿ ತೂಗು ಸೇತುವೆ ದುರಂತ ಪ್ರಕರಣ, ನವೀಕರಣಕ್ಕೆ 2 ಕೋಟಿ ರೂನಲ್ಲಿ ಬಳಸಿದ್ದು 12 ಲಕ್ಷ ಮಾತ್ರ!
ಭೂಕುಸಿತದ ಪರಿಣಾಮ ಎಲ್ಲಾ ಸಂಪರ್ಕ ಕಡಿತಗೊಂಡಿದೆ. 620 ಅಡಿ ಆಳದಲ್ಲಿರುವ ಕಾರ್ಮಿಕರ ರಕ್ಷಣೆಗೆ ಕಾರ್ಯಾಚರಣೆ ಕೂಡ ಅತ್ಯಂತ ದುರ್ಗಮವಾಗಿತ್ತು. ಕಾರಣ ಕಾರ್ಯಾಚರಣೆ ವೇಳೆ ಮತ್ತೆ ಭೂಕುಸಿತ ಸಂಭವಿಸಿದರೆ ಅಪಾಯ ಹೆಚ್ಚು. ಹೀಗಾಗಿ ಕಾರ್ಮಿಕರು ಇರುವ ಸ್ಥಳದ ಅನತಿ ದೂರದಿಂದ ಮಣ್ಣು ತೆಗೆದು ಆಳಕ್ಕೆ ಇಳಿಯುವ ಕಾರ್ಯ ಅಕ್ಟೋಬರ್ 26ಕ್ಕೆ ಆರಂಭಿಸಲಾಗಿತ್ತು.
ಇತ್ತ ಭೂಮಿಯಡಿ ಸಿಲುಕಿದ ಕಾರ್ಮಿಕರು ಇರುವ ಕಾಫಿ ಪುಡಿಯನ್ನು ತಿಂದು, ಹನಿ ಹನಿ ನೀರನ್ನು ಕುಡಿಯುತ್ತಾ ದಿನ ದೂಡಿದ್ದಾರೆ. ಹೀಗೆ 9 ದಿನ ಮುಂದುವರಿದಿದೆ. ಕೊನೆಗೆ ಹೆಚ್ಚಿನ ಅಪಾಯವಿಲ್ಲದೆ ಇಬ್ಬರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಕೆಲ ದಿನಗಳಲ್ಲೇ ಈ ಕಾರ್ಮಿಕರು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕಾರ್ಮಿಕರು ಕಳೆದ 9 ದಿನ ಬದುಕುಳಿದಿದ್ದು ಹೇಗೆ ಅನ್ನೋದನ್ನು ಹೇಳಿದ್ದಾರೆ.
ಲಗೇಜ್ ಹಿಡಿದು ಹಳಿ ದಾಟಿದ ಮಹಿಳೆ, ರೈಲು ಬಂದರೂ ಪವಾಡ ಸದೃಶ ರೀತಿ ಬಚಾವ್!
ಕೊರಿಯಾದಲ್ಲಿ ಹ್ಯಾಲೊವಿನ್ ಆಚರಣೆ ವೇಳೆ ಭೀಕರ ನೂಕುನುಗ್ಗಲು: 120 ಬಲಿ
ಹ್ಯಾಲೊವಿನ್ ಹಬ್ಬದಾಚರಣೆಯ ವೇಳೆಗೆ ಕಿರಿದಾದ ಬೀದಿಗಳಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ನಡೆದ ತಳ್ಳಾಟದಿಂದಾಗಿ 120 ಮಂದಿ ದಾರುಣವಾಗಿ ಮೃತಪಟ್ಟಘಟನೆ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಶನಿವಾರ ನಡೆದಿದೆ. 100ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಹ್ಯಾಲೋವಿನ್ ಪಾರ್ಟಿ ಸ್ಥಳ ಕಿರಿದಾಗಿದ್ದು, ವೇಳೆ ಹಚ್ಚು ಜನಸಂದಣಿ ಸೇರಿತ್ತು. ಈ ವೇಳೆ ಮುನ್ನುಗ್ಗಲು ಒಬ್ಬರ ಮೇಲೊಬ್ಬರು ಮುಗಿಬಿದ್ದಾಗ ಭೀಕರ ನೂಕುನುಗ್ಗಾಟ ಉಂಟಾಯಿತು. ಈ ವೇಳೆ ಅನೇಕರು ಉಸಿರುಗಟ್ಟಿಹೃದಯ ಸ್ತಂಭನದಿಂದ ಮೃತಪಟ್ಟರು. 74 ಜನರ ಶವಗಳನ್ನು ಆಸ್ಪತ್ರೆಗೆ ಕಳಿಸಲಾಗಿದೆ. ಇನ್ನೂ 46 ಮಂದಿಯ ಶವ ಶನಿವಾರ ಮಧ್ಯರಾತ್ರಿಯಾದರೂ ರಸ್ತೆಯಲ್ಲೇ ಬಿದ್ದಿದ್ದವು.