ವಿಮಾನ ಹಾರಿಸುತ್ತಿದ್ದ ಈತ ಆಗಸದ ಮಧ್ಯದಲ್ಲಿ ಎಂಜಿನ್ ಹಾಳಾಗಿದೆ ಎಂದು ಅದನ್ನು ಇಳಿಸುವ ಬದಲು ಅಲ್ಲೇ ಬಿಟ್ಟು ಪ್ಯಾರಶೂಟ್‌ನಿಂದ ಚಿಗಿದಿದ್ದಾನೆ. ಬಳಿಕ ವಿಮಾನ ಪತನವಾಗಿದೆ.
ನ್ಯೂಯಾರ್ಕ್ (ಮೇ 14, 2023): ಕೆಲವು ಯೂಟ್ಯೂಬರ್‌ಗಳು ತಾವು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಅದಕ್ಕೆ ‘ವ್ಯೂ’ (ವೀಕ್ಷಣೆ) ಹೆಚ್ಚು ಬರಬೇಕೆಂದು ನಾನಾ ಸಾಹಸ-ದುಸ್ಸಾಹಸ ಮಾಡೋದುಂಟು. ಅಂಥದ್ದರಲ್ಲಿ ಅಮೆರಿಕದ ಯೂಟ್ಯೂಬರ್ ಒಬ್ಬ ವಿಮಾನದಿಂದ ತಾನು ಹಾರಿ ಅದನ್ನು ಅಪಘಾತಕ್ಕೆ ಒಳಪಡಿಸಿ ಚಿತ್ರೀಕರಿಸಿದ್ದಾನೆ. ಈತನ ವಿರುದ್ಧ ಈಗ ಕೇಸು ದಾಖಲಾಗಿದ್ದು, 20 ವರ್ಷ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ.
ಟ್ರೆವರ್ ಜಾಕೋಬ್ ಎಂಬಾತನೇ ಈ ದುಸ್ಸಾಹಸ ಮಾಡಿದಾತ. ವಿಮಾನ ಹಾರಿಸುತ್ತಿದ್ದ ಈತ ಆಗಸದ ಮಧ್ಯದಲ್ಲಿ ಎಂಜಿನ್ ಹಾಳಾಗಿದೆ ಎಂದು ಅದನ್ನು ಇಳಿಸುವ ಬದಲು ಅಲ್ಲೇ ಬಿಟ್ಟು ಪ್ಯಾರಶೂಟ್‌ನಿಂದ ಚಿಗಿದಿದ್ದಾನೆ. ಬಳಿಕ ವಿಮಾನ ಪತನವಾಗಿದೆ. ಈ ಘಟನೆಯನ್ನು ಆತ ಚಿತ್ರೀಕರಿಸಿಕೊಂಡಿದ್ದು, ವಿಡಿಯೋವನ್ನು ಯೂಟ್ಯೂಬ್‌ಗೆ ಹಾಕಿ ಹೆಚ್ಚು ಹಿಟ್ಸ್ ಬರಲು ಹೀಗೆ ಮಾಡಿದ್ದಾನೆ.
ಇದನ್ನು ಓದಿ: ಗೋ ಫಸ್ಟ್ ವಿಮಾನ ಸೇವೆ ದಿವಾಳಿ ಎಫೆಕ್ಟ್: ದೇಶದಲ್ಲಿ ವಿಮಾನ ಟಿಕೆಟ್ ದರ 4 - 6 ಪಟ್ಟು ಹೆಚ್ಚಳ
29 ವರ್ಷದ ಟ್ರೆವರ್ ಜಾಕೋಬ್ ಡಿಸೆಂಬರ್ 2021 ರಲ್ಲಿ ವಿಮಾನ ಅಪಘಾತದ ವಿಡಿಯೋವನ್ನು ಯೂಟ್ಯೂಬ್‌ಗೆ ಪೋಸ್ಟ್ ಮಾಡಿದ್ದು, ಇದು ಅಪಘಾತ ಎಂದು ಸೂಚಿಸುತ್ತದೆ. ಇದು ಇಲ್ಲಿಯವರೆಗೆ 2.9 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಇದನ್ನು ಅಪಘಾತ ಎನ್ನಲಾಯಿತಾದ್ರೂ, ಉತ್ಪನ್ನ ಪ್ರಾಯೋಜಕತ್ವದ ಒಪ್ಪಂದದ ಭಾಗವಾಗಿ ವಿಡಿಯೋ ಚಿತ್ರೀಕರಿಸೋದಾಗಿಯೂ ಹೇಳಿದ್ದಾರೆ. 29 ವರ್ಷದ ಪೈಲಟ್ ಮತ್ತು ಸ್ಕೈಡೈವರ್ ಫೆಡರಲ್ ತನಿಖೆಯನ್ನು ತಡೆಯುವ ಉದ್ದೇಶದಿಂದ ವಿಮಾನ ಕ್ರ್ಯಾಶ್ ಆಗಿದೆ. ಅಪರಾಧ ತಪ್ಪಿಸಿಕೊಳ್ಳಲು ಈ ರೀತಿ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದೂ ಯುಎಸ್ ನ್ಯಾಯ ಇಲಾಖೆ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
ನವೆಂಬರ್ 2021 ರಲ್ಲಿ, ಟ್ರೆವರ್ ಜ್ಯಾಕೋಬ್ ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾ ವಿಮಾನ ನಿಲ್ದಾಣದಿಂದ ಏಕಾಂಗಿ ವಿಮಾನದಲ್ಲಿ ತನ್ನ ವಿಮಾನದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಟ್ರೆವರ್ ಜೇಕಬ್ ತನ್ನೊಂದಿಗೆ ಕ್ಯಾಮೆರಾಗಳ ಜೊತೆಗೆ, ಪ್ಯಾರಾಚೂಟ್ ಮತ್ತು ಸೆಲ್ಫಿ ಸ್ಟಿಕ್ ಅನ್ನು ತೆಗೆದುಕೊಂಡಿಡು ಹೋಗಿದ್ದಾರೆ.
ಇನ್ನು, ಅವರು "ತನ್ನ ಗಮ್ಯಸ್ಥಾನವನ್ನು ತಲುಪುವ ಉದ್ದೇಶವನ್ನು ಹೊಂದಿರಲಿಲ್ಲ. ಬದಲಿಗೆ ಹಾರಾಟದ ಸಮಯದಲ್ಲಿ ತನ್ನ ವಿಮಾನದಿಂದ ಹೊರಹೋಗಲು ಯೋಜಿಸಿದ್ದರು ಮತ್ತು ಸ್ವತಃ ವಿಮಾನದಿಂದ ನೆಲಕ್ಕೆ ಪ್ಯಾರಾಚೂಟ್ ಕೆಳಕ್ಕೆ ಇಳಿಯುವ ವಿಡಿಯೋ ಮಾಡಿದರು. ಮತ್ತು ಈ ವಿಮಾನವು ಲ್ಯಾಂಡ್ ಆಗುವ ವೇಳೆ ಅಪಘಾತಕ್ಕೀಡಾಯಿತು" ಎಂದು ಅಮೆರಿಕದ ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್‌ನ US ಅಟಾರ್ನಿ ಕಚೇರಿ ಹೇಳಿದೆ.
ಇದನ್ನೂ ಓದಿ: ಮಿಗ್ 21 ಯುದ್ದ ವಿಮಾನ ಪತನ: ನಾಲ್ವರು ಮಹಿಳೆಯರ ಸಾವು, ಪೈಲಟ್ ಸೇಫ್
ವಿಮಾನ ಟೇಕ್ ಆಫ್ ಆದ 35 ನಿಮಿಷಗಳ ನಂತರ ಲಾಸ್ ಪ್ಯಾಡ್ರೆಸ್ ರಾಷ್ಟ್ರೀಯ ಅರಣ್ಯಕ್ಕೆ ಅಪ್ಪಳಿಸಿತು. ಅವರು ಸ್ಥಳಕ್ಕೆ ಹೋಗಿ ವಿಡಿಯೋವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಕೆಲವು ಯೂಟ್ಯೂಬ್ ವೀಕ್ಷಕರು ಈ ಅಪಘಾತದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಟ್ರೆವರ್ ಜಾಕೋಬ್ ಮೊದಲೇ ಪ್ಯಾರಾಚೂಟ್ ಧರಿಸಿದ್ದರು ಮತ್ತು ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಆರೋಪಿಸಿದ್ದರು. ಅಲ್ಲದೆ, ಅವರು ಅಪಘಾತದ ಬಗ್ಗೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಗೆ ವರದಿ ಮಾಡಿದರು.
ಇದನ್ನೂ ಓದಿ: ಮೇ 9 ರವರೆಗೆ Go First ವಿಮಾನಗಳು ಕ್ಯಾನ್ಸಲ್; ಪ್ರಯಾಣಿಕರಿಗೆ ಸಕಾಲಕ್ಕೆ ರೀಫಂಡ್ ಮಾಡಲು ಡಿಜಿಸಿಎ ಸೂಚನೆ
ಬಳಿಕ, ಘಟನೆ ಬಗ್ಗೆ ಒಪ್ಪಿಕೊಂಡ ಯೂಟ್ಯೂಬರ್ ವಿಮಾನ ಅಪಘಾತದ ಬಳಿಕ ಹೆಲಿಕಾಪ್ಟರ್‌ನಲ್ಲಿ ಹಿಂತಿರುಗಿದರು ಮತ್ತು ಭಗ್ನಾವಶೇಷಗಳನ್ನು ಸುರಕ್ಷಿತಗೊಳಿಸಿದರು ಮತ್ತು ತೆಗೆದುಹಾಕಿದ್ದು, ನಂತರ ಅವರು ಅದನ್ನು ನಾಶಪಡಿಸಿದರು ಎಂದು ಹೇಳಿಕೆ ಹೇಳುತ್ತದೆ. ಟ್ರೆವರ್ ಜಾಕೋಬ್ ಮುಂಬರುವ ವಾರಗಳಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವ ನಿರೀಕ್ಷೆಯಿದೆ.
ಕಳೆದ ವರ್ಷ ಅವರ ಪೈಲಟ್ ಪರವಾನಗಿಯನ್ನು ರದ್ದುಗೊಳಿಸಲಾಗಿತ್ತು. ಒಟ್ಟಾರೆ, ಈ ಘಟನೆ ಅಮೆರಿಕ ನಾಗರಿಕ ವಿಮಾನಯಾನ ಪ್ರಾಧಿಕಾರದ ಕೆಂಗಣ್ಣಿಗೆ ಗುರಿಯಾಗಿದ್ದು ಈಗ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಲ್ಲಿದ್ದಾನೆ.
ಇದನ್ನೂ ಓದಿ: ಸೂಡಾನ್‌ನಲ್ಲಿ ವಾಯುಪಡೆ ರಾತ್ರಿ ಸಾಹಸ: ವಿಮಾನ ಇಳಿಯಲೂ ಕಷ್ಟವಾದ ಸ್ಥಳದಲ್ಲಿ ಲ್ಯಾಂಡಿಂಗ್ ಮಾಡಿ 121 ಜನರ ರಕ್ಷಣೆ