'ಮುಖ್ಯ ನ್ಯಾಯಮೂರ್ತಿ ಏನ್‌ ಮಾಡ್ತಿದ್ದಾರೆ?' ಪಿಟಿಐ ನಾಯಕನಿಗೆ ಇಮ್ರಾನ್‌ ಖಾನ್‌ ಕಳಿಸಿದ ಸಂದೇಶ ಲೀಕ್‌!

Published : May 12, 2023, 03:45 PM IST
'ಮುಖ್ಯ ನ್ಯಾಯಮೂರ್ತಿ ಏನ್‌ ಮಾಡ್ತಿದ್ದಾರೆ?' ಪಿಟಿಐ ನಾಯಕನಿಗೆ ಇಮ್ರಾನ್‌ ಖಾನ್‌ ಕಳಿಸಿದ ಸಂದೇಶ ಲೀಕ್‌!

ಸಾರಾಂಶ

ಸುಪ್ರೀಂ ಕೋರ್ಟ್‌ ಸೂಚನೆಯ ಮೇರೆಗೆ ಬಿಡುಗಡೆಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌, ಜೈಲಿನಲ್ಲಿದ್ದಾಗಲೇ ಪಿಟಿಐ ನಾಯಕನಿಗೆ ಕಳಿಸಿದ್ದ ಮೆಸೇಜ್‌ ಲೀಕ್‌ ಆಗಿದೆ.

ನವದೆಹಲಿ (ಮೇ.12): ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಸಮಸ್ಯೆಗಳು ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಆದರೆ, ಅಲ್‌ ಖಾದಿರ್ ಟ್ರೆಸ್ಟ್‌ ಪ್ರಕರಣದಲ್ಲಿ ಅವರಿಗೆ ಸದ್ಯ ದೊಡ್ಡ ನಿರಾಳತೆ ಸಿಕ್ಕಿದೆ. ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಇಮ್ರಾನ್‌ ಖಾನ್‌ ಬಂಧನವನ್ನು ಕಾನೂನುಬಾಹಿರ ಹಾಗೂ ಅಸಿಂಧು ಎಂದು ಕರೆದಿದೆ. ಇದರ ನಡುವೆ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮುಖಂಡ ಮುಸರತ್ ಜಮ್‌ಶೆಡ್ ಚೀಮಾ ಅವರೊಂದಿಗೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಸಂಭಾಷಣೆಯ ಆಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಡಿಯೋ ಕ್ಲಿಪ್‌ನಲ್ಲಿ, ಖಾನ್ ಮತ್ತು ಚೀಮಾ ಇತ್ತೀಚಿನ ನ್ಯಾಯಾಲಯದ ಬೆಳವಣಿಗೆಗಳು ಮತ್ತು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿಯ ಪ್ರತಿಕ್ರಿಯೆಯ ಬಗ್ಗೆ ಮಾತನಾಡಿದ್ದಾರೆ.
ಇಮ್ರಾನ್‌ ಖಾನ್‌ ಇತ್ತೀಚಿನ ಸ್ಥಿತಿಯ ಬಗ್ಗೆ ಅವರಲ್ಲಿ ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಚೀಮಾ, 'ನಾವೀಗ ಹೈಕೋರ್ಟ್‌ನಲ್ಲಿ ಕುಳಿದುಕೊಂಡಿದ್ದೇವೆ. ನಮ್ಮ ಎದುರು ಖಾನ್‌ ಸಾಹಿಬ್‌ ಅವರನ್ನು ಕರೆತರಲು ಹೇಳಿದ್ದೇವೆ. ಇದಲ್ಲದೇ ಇದಲ್ಲಿ ನಾವು ಈ ಸ್ಥಳವನ್ನು ಕದಲೋದಿಲ್ಲ ಎಂದಿದ್ದೇವೆ. ನಿಮ್ಮ ಕೇಸ್‌ಅನ್ನು ಮುಖ್ಯ ನ್ಯಾಯಮೂರ್ತಿ ಅವರೇ ವಿಚಾರಣೆ ಮಾಡಲಿದ್ದಾರೆ' ಎಂದು ಹೇಳಿದ್ದಾರೆ.
 
ದೂರವಾಣಿ ಸಂಭಾಷಣೆಯ ಸಮಯದಲ್ಲಿ ಖಾನ್ ಅವರು ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೋ (NAB) ವಶದಲ್ಲಿದ್ದರು ಎಂದು ವರದಿಯಾಗಿದೆ. ತಮ್ಮ ಬಂಧನವನ್ನು ಟೀಕಿಸಿದ ಖಾನ್, ಅಧಿಕಾರಿಗಳು ಮಾಡಿದ್ದೆಲ್ಲವನ್ನೂ ವಿವರಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಪ್ರಾರಂಭ ಮಾಡುವಂತೆ ಚೀಮಾಗೆ ಹೇಳಿದರು. ಈ ಹಂತದಲ್ಲಿ "ಮುಖ್ಯ ನ್ಯಾಯಾಧೀಶರು ಏನು ಮಾಡುತ್ತಿದ್ದಾರೆ?" ಖಾನ್ ಪ್ರಶ್ನೆ ಮಾಡಿದ್ದಾರೆ.  "ಕೂಡಲೇ ಆಜಮ್ ಜೊತೆ ಒಂದು ಮಾತು ಹೇಳಿ ಮತ್ತು ಇತರ ಜನರೊಂದಿಗೆ ಮಾತನಾಡಲು ಹೇಳಿ" ಎಂದು ಇಮ್ರಾನ್ ಖಾನ್‌ ಹೇಳಿದ್ದಾರೆ.

ಖಾನ್ ಅವರ ಬಂಧನ ಪೂರ್ವ ಜಾಮೀನಿಗಾಗಿ ಶುಕ್ರವಾರ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹಾಜರಾಗಲಿದ್ದಾರೆ. ಬಳಿಕ ರಾಜಧಾನಿಯಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಇದಕ್ಕೂ ಮೊದಲು ಮೇ 9 ರಂದು, ಪಿಟಿಐ ಮುಖ್ಯಸ್ಥರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ನಾಟಕೀಯವಾಗಿ ಬಂಧಿಸಲಾಯಿತು ಮತ್ತು ನಂತರ ಅಲ್-ಖಾದಿರ್ ಟ್ರಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ದಿನಗಳ ರಿಮಾಂಡ್‌ಗಾಗಿ ಎನ್‌ಎಬಿಗೆ ಹಸ್ತಾಂತರಿಸಲಾಗಿತ್ತು.

 

Breaking ಇಮ್ರಾನ್ ಖಾನ್ ಬಂಧನ ಕಾನೂನು ಬಾಹಿರ; ತಕ್ಷಣ ಬಿಡುಗಡೆ ಮಾಡಿ: ಪಾಕಿಸ್ತಾನ ಸುಪ್ರೀಂಕೋರ್ಟ್‌ ಆದೇಶ

70 ವರ್ಷ ವಯಸ್ಸಿನ ನಾಯಕನ ಬಂಧನವು ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳನ್ನು ಉಂಟುಮಾಡಿತು, ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರವು ಇಸ್ಲಾಮಾಬಾದ್, ಪಂಜಾಬ್, ಖೈಬರ್ ಪಖ್ತುಂಕ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಸೇನೆಯನ್ನು ನಿಯೋಜಿಸಲು ಒತ್ತಾಯಿಸಿತು.ಇಲ್ಲಿಯವರೆಗೆ, ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ.

 

ನನಗೆ ಟಾಯ್ಲೆಟ್‌ಗೆ ಹೋಗಲೂ ಬಿಡ್ತಿಲ್ಲ; ತೀವ್ರ ಚಿತ್ರಹಿಂಸೆ ನೀಡ್ತಿದ್ದಾರೆ: ಇಮ್ರಾನ್‌ ಖಾನ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ