50 ವರ್ಷಗಳಿಂದ ಲೈಸೆನ್ಸ್ ಇಲ್ಲದೇ ಕಾರು ಓಡಿಸ್ತಿದ್ದವ ಕೊನೆಗೂ ಸಿಕ್ಕಿಬಿದ್ದ

By Anusha Kb  |  First Published May 12, 2023, 3:12 PM IST

50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಕಾರು ಚಾಲನೆ  ಮಾಡ್ತಿದ್ದ ವ್ಯಕ್ತಿಯ ಕಾರನ್ನು ಈಗ ಲೈಸೆನ್ಸ್ ಇಲ್ಲದ ಕಾರಣಕ್ಕೆ ಪೊಲೀಸರು ವಶಕ್ಕೆ ಪಡೆದ ವಿಚಿತ್ರ  ಘಟನೆ ಇಂಗ್ಲೆಂಡ್‌ನ ಡೆರ್ಬಿಶೈರ್‌ನಲ್ಲಿ ನಡೆದಿದೆ.  


ಲಂಡನ್: 50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಕಾರು ಚಾಲನೆ  ಮಾಡ್ತಿದ್ದ ವ್ಯಕ್ತಿಯ ಕಾರನ್ನು ಈಗ ಲೈಸೆನ್ಸ್ ಇಲ್ಲದ ಕಾರಣಕ್ಕೆ ಪೊಲೀಸರು ವಶಕ್ಕೆ ಪಡೆದ ವಿಚಿತ್ರ  ಘಟನೆ ಇಂಗ್ಲೆಂಡ್‌ನ ಡೆರ್ಬಿಶೈರ್‌ನಲ್ಲಿ ನಡೆದಿದೆ.  

ನಮ್ಮಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಾಲನೆ ಮಾಡುವವರು ತೀರಾ ಕಡಿಮೆ. ಏಕೆಂದರೆ ಗಲ್ಲಿ ಗಲ್ಲಿಯಲ್ಲಿ  ಟ್ರಾಫಿಕ್ ಪೊಲೀಸರು ನಿಂತುಕೊಂಡಿರ್ತಾರೆ. ಸ್ವಲ್ಪ ಯಾಮಾರಿದ್ರೂ ದಂಡ ಹಾಕ್ತಾರೆ.  ಬಹುಶಃ ಹೊಸದಾಗಿ ಕಾರು ಕಲಿತವರು ಸುಮ್ಮನೆ ಕುತೂಹಲದಿಂದ ಕಾರು ಚಾಲನೆ ಮಾಡಿ ಸಿಕ್ಕಿ ಹಾಕಿಕೊಳ್ಳುವುದನ್ನು ನೀವು ನೋಡಿರಬಹುದು. ಆದರೆ ಇಂಗ್ಲೆಂಡ್‌ನಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 50 ವರ್ಷಗಳಿಂದ ಲೈಸೆನ್ಸ್‌ ಇಲ್ಲದೇ ಕಾರು ಚಾಲನೆ ಮಾಡಿದ್ದು, ಈಗ ಸಿಕ್ಕಿ ಹಾಕಿಕೊಂಡಿದ್ದಾರೆ. ಅಲ್ಲಿನ ಟ್ರಾಫಿಕ್ ಪೊಲೀಸರು  ಅವರ ಕಾರನ್ನು ಜಪ್ತಿ ಮಾಡಿದ್ದಾರೆ.

Latest Videos

undefined

ಮೇ 6 ರ ಶನಿವಾರದಂದು ಡರ್ಬಿಶೈರ್ ಪೊಲೀಸರು ರಸ್ತೆ ಸುರಕ್ಷತಾ ನಿಯಮಗಳ ಪರಿಶೀಲನೆಯಲ್ಲಿ ತೊಡಗಿದ್ದಾಗ, ಈ ಕಾರು ಪೊಲೀಸರ ಕೈಗೆ ತಗಲಾಕೊಂಡಿದೆ. ಕಾರನ್ನು ಪರಿಶೀಲನೆಗೆ ತೊಡಗಿದ ಬಳಿಕವಷ್ಟೇ ಈ ಕಾರಿನ ಚಾಲಕ ಕಳೆದ 50 ವರ್ಷಗಳಿಂದಲೂ ಯಾವುದೇ ಲೈಸೆನ್ಸ್‌ ಇಲ್ಲದೇ ಕಾರನ್ನು ಓಡಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮೇ.6 ರಂದು ಈ ಘಟನೆ ನಡೆದಿದೆ.69 ವರ್ಷದ ವ್ಯಕ್ತಿಯೊಬ್ಬರು ಕಳೆದ 50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್‌ಗಾಗಿ ಯಾವುದೇ ಪ್ರಯತ್ನವನ್ನು ಕೂಡ ಮಾಡದೇ ಐದು ದಶಕಗಳಿಂದ ಅಕ್ರಮವಾಗಿ ವಾಹನ ಚಾಲನೆ ಮಾಡಿದ್ದು ಗಮನಕ್ಕೆ ಬಂದಿದೆ.

ಇದ್ಯಾವ ನ್ಯಾಯ ಗುರು ಇವ್ರು ಹೆಲ್ಮೆಟ್ ಇಲ್ದೆ ಸುತ್ತಿದ್ರೆ ಜಾಲಿ ರೈಡ್.... ನಾವು ಹೋದ್ರೆ ಫುಲ್ ಫೈನ್

ಅವರು ಸಂಪೂರ್ಣ ಸಮಯದ ಪರವಾನಗಿ ಹೊಂದಿದ್ದಾರೆಂದು ಭಾವಿಸುವಂತೆ ಆತ ಕಾರು ವಿಮಾ ಕಂಪನಿಗಳನ್ನು ಮೋಸಗೊಳಿಸುತ್ತಿದ್ದ ಎಂದು ತಿಳಿದು ಬಂದಿದೆ.  ಈ ವಾಹನದ ಚಾಲಕನಿಗೆ 69 ವರ್ಷ ವಯಸ್ಸಾಗಿದ್ದರೂ ಮತ್ತು 50 ವರ್ಷಗಳಿಂದ ವಾಹನ ಚಾಲನೆ ಮಾಡುತ್ತಿದ್ದರೂ 69 ವರ್ಷದವನಾಗಿದ್ದರೂ ಎಂದಿಗೂ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣನಾಗಿಲ್ಲ ಎಂದು ಬರೆದು ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಲಾಗಿತ್ತು.  ಆತ ತನಗೆ ಪರವಾನಗಿ ಇದೆ ಎಂದು ಸೂಚಿಸುವ ನಕಲಿ ವಿವರಗಳನ್ನು ವ್ಯವಸ್ಥಿತವಾಗಿ ವಿಮಾ ಕಂಪನಿಗಳಿಗೆ ಆತ ಒದಗಿಸಿದ್ದ ಎಂದು ತಿಳಿದು ಬಂದಿದೆ. 

ಈ ವಿಚಾರ ಗೊತ್ತಾದ ಮೇಲೆ ಆತನ 5 ದಶಕದ ಚಾಲನಾ ಪಾರುಪತ್ಯ ಅಂತ್ಯಗೊಂಡಿದೆ. ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಚಾಲಕನ ವಿರುದ್ಧ ಹಲವಾರು ಅಪರಾಧಗಳಿಗೆ ದೂರು ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತ ಮೋಟಾರು ವಿಮಾದಾರರ ಬ್ಯೂರೋದ ಪಾಲ್ ಫಾರ್ಲೆ ಈ ಬಗ್ಗೆ  ಪ್ರತಿಕ್ರಿಯಿಸಿದ್ದು, ಅಂತಿಮವಾಗಿ, ಸ್ವೀಕಾರಾರ್ಹವಲ್ಲದ ಆತನ ಆಳ್ವಿಕೆ ಅಂತ್ಯಗೊಂಡಿದೆ. ಆತ ಇದುವರೆಗೆ ಯಾವುದಾದರೂ ಅಪಘಾತ ನಡೆಸಿದ್ದಾರೆ ಹಾಗೂ ಆತ ಮಾಡಿದ್ದ ಕ್ಲೈಮ್‌ಗೆ ಪಾವತಿ ಮಾಡಿದ್ದರೆ, ಅದನ್ನು ಮರಳಿಸಲು ನಾವು ಆತನ ಬಳಿ ಕೇಳುತ್ತಿದ್ದೆವು ಎಂದಿದ್ದಾರೆ.

Women Driving: ಡ್ರೈವಿಂಗ್ ವಿಷ್ಯದಲ್ಲಿ ಮಹಿಳೆ ಜೋಕರ್ ಆಗೋದು ಎಷ್ಟು ಸರಿ?

ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಚಾಲಕ 50 ವರ್ಷಗಳಿಂದ ಹೇಗೆ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಕೆಲವರು ಪ್ರಶ್ನಿಸಿದ್ದಾರೆ.  ಅವರು ಇಷ್ಟು ವರ್ಷಗಳಲ್ಲಿ ಎಲ್ಲೂ ಸಿಕ್ಕಿಬೀಳದೇ ಇದ್ದಿದ್ದು ವಿಚಿತ್ರ,  ಇಂದಿನ ಅತ್ಯಾಧುನಿಕ ವ್ಯವಸ್ಥೆಯಲ್ಲೂ ಅವರು ತಪ್ಪಿಸಿಕೊಂಡಿದ್ದಾರೆ. ಇವರ ಈ ಪ್ರಕರಣ ಇತರರನ್ನು ಪ್ರೋತ್ಸಾಹಿಸಬಹುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಆತ ಲೈಸೆನ್ಸ್‌ ಪಡೆಯದಿದ್ದರೂ ಉತ್ತಮ ಚಾಲಕ. ಏಕೆಂದರೆ ಅವರು 50 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡಿದ್ದಾರೆ ಎಂದಾದರೆ ಎಲ್ಲೂ ಅಪಘಾತ ಮಾಡಿಲ್ಲವೆಂದೇ ಅರ್ಥ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಅದೇನೇ ಇರಲಿ ಇತ್ತೀಚಿಗೆ ಮನುಷ್ಯ ಜೀವಿತಾವಧಿ  ಹೆಚ್ಚೆಂದರೆ ಸರಾಸರಿ 60 ರಿಂದ 70 ವರ್ಷದ ಅಂದಾಜಿಗೆ ಇಳಿಕೆಯಾಗಿದೆ. ಅದರಲ್ಲೂ ಈ ವ್ಯಕ್ತಿ ತಮ್ಮ ಆಯಸ್ಸಿನ ಬಹುತೇಕ ವರ್ಷವನ್ನು ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಕಾರು ಓಡಿಸಿ ಕಳೆದಿದ್ದು, ಇನ್ನು ಸ್ವಲ್ಪ ಸಮಯ ಮುಗಿದಿದ್ದರೆ ಆತನ ಆಯಸ್ಸೇ ಮುಗಿದು ಹೋಗುತ್ತಿತ್ತು. ಅಷ್ಟರಲ್ಲಿ ಆತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವುದು ಅಚ್ಚರಿ ಮೂಡಿಸಿದೆ.

click me!