
ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾಗಳು ಜಗತ್ತನ್ನೇ ಆವರಿಸಿಕೊಂಡಿದೆ. ಹಲವರು ಯೂಟ್ಯೂಬ್‌ನ್ನೇ ವೃತ್ತಿಯಾಗಿ ಸ್ವೀಕರಿಸಿಕೊಂಡಿದ್ದಾರೆ. ಲಕ್ಷ ಲಕ್ಷ ರೂಪಾಯಿ ಸಂಪಾದನೆಯನ್ನು ಯೂಟ್ಯೂಬ್ ಮೂಲಕ ಮಾಡುತ್ತಿದ್ದಾರೆ. ಜೆನ್‌ಝಿ ಸಮೂಹ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದೆ. ಇದೀಗ ಖ್ಯಾತ ಯೂಟ್ಯೂಬರ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ ಗರ್ಭಿಣಿ ಪತ್ನಿಗೆ ಡಿವೋರ್ಸ್ ಕೊಟ್ಟ ಘಟನೆ ನಡೆದಿದೆ. ಹೌದು, ಪಾಕಿಸ್ತಾನ ಖ್ಯಾಟ ಯೂಟ್ಯೂಬರ್ ರಜಬ್ ಭಟ್ ಡಿವೋರ್ಸ್ ಘೋಷಣೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಾಗುತ್ತಿದೆ.
ಯೂಟ್ಯೂಬರ್ ರಜಬ್ ಭಟ್ ಡಿವೋರ್ಸ್ ಚರ್ಚೆಯಾಗಲು ಮುಖ್ಯ ಕಾರಣ, ಮತ್ತೊಬ್ಬ ಯೂಟ್ಯೂಬರ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ ಗರ್ಭಿಣಿ ಪತ್ನಿಗೆ ಡಿವೋರ್ಸ್ ಕೊಟ್ಟಿದ್ದಾನೆ. ಪತ್ನಿ ಇಮಾನ್ ಫಾತಿಮಾ ಜೊತೆ ಮನಸ್ತಾಪ, ಜಗಳ ನಡೆಯುತ್ತಿತ್ತು ನಿಜ. ಆದರೆ ಪತಿ ಡಿವೋರ್ಸ್ ಕೊಡುವ ಬಗ್ಗೆ ಪತ್ನಿಗೆ ಯಾವುದೇ ಸುಳಿವು ಇರಲಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಪಾಕಿಸ್ತಾನದಲ್ಲಿ ವಿವಾದಾತ್ಮಕ ವಿಡಿಯೋಗಳ ಮೂಲಕವೇ ಭಾರಿ ಜನಪ್ರಿಯವಾಗಿದ್ದ ರಜಬ್ ಭಟ್, ಹಲವು ಪ್ರಕರಣದಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಹಲವು ಬಾರಿ ವಿವಾದ ತೀವ್ರ ಸ್ವರೂಪಕ್ಕೆ ತಿರುಗಿ ಕೋಲಾಹಲಗಳೇ ಸೃಷ್ಟಿಯಾಗಿದೆ. ಇದೀಗ ರಜಬ್ ಭಟ್ ವೈುಕ್ತಿಕ ಜೀವನದಲ್ಲೂ ಬಿರುಗಾಳಿ ಎದ್ದಿದೆ. ತನಗೆ ಪತ್ನಿ ಜೊತೆ ಸಾಕಾಗಿದೆ. ಮಗು ಯಾರ ಜೊತೆಗಿರಬೇಕು ಅನ್ನೋದು ನ್ಯಾಯಾಲಯದ ನಿರ್ಧಾರ ಮಾಡುತ್ತೆ. ನನಗೆ ಚಿಕ್ಕ ವಯಸ್ಸು, ಇಮಾನ ಫಾತಿಮಾ ಜೊತೆಗಿನ ಸಂಸಾರ ಸಾಕಾಗಿ ಹೊರಬರುತ್ತಿದ್ದೇನೆ ಎಂದು ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ರಜಬ್ ಭಟ್ ಹಾಗೂ ಇಮಾನ್ ಫಾತಿಮಾ ಜೊತೆಗಿನ ಜಗಳ ಸೋಶಿಯಲ್ ಮೀಡಯಾದಲ್ಲಿ ಭಾರಿ ಚರ್ಚೆಯಾಗಿತ್ತು. ಹಲವರು ರಜಬ್ ಭಟ್ ಟ್ರೋಲ್ ಮಾಡಿದ್ದರು.ಇಮಾನ್ ಫಾತಿಮಾ ಗರ್ಭಿಣಿಯಾದ ಬಳಿಕ ರಜಬ್ ಭಟ್ ಬೇರೆ ಯುವತಿ ಜೊತೆ ಸಂಬಂದ ಇಟ್ಟುಕೊಂಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದರು. ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಸೋಶಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್ ಜೊತೆಗಿರುವವ ಕೆಲ ವಿಡಿಯೋ ಹಾಗೂ ಫೋಟೋಗಳು ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ರಜತ್ ಹಾಗೂ ಫಾತಿಮಾ ನಡುವಿನ ಜಟಾಪಟಿ ಬೀದಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಪಾಡ್‌ಕಾಸ್ಟ್‌ನಲ್ಲಿ ಡಿವೋರ್ಸ್ ಘೋಷಿಸಿದ ಕಾರಣ ಇದೀಗ ರಜಬ್ ಭಟ್ ವಿಚ್ಚೇದ ಭಾರಿ ಚರ್ಚೆಯಾಗುತ್ತಿದೆ. ಇದು ಜೆನ್‌ಝಿ ಕಾಲ. ಹೀಗಾಗಿ ಇಲ್ಲಿ ಹೇಗೆ ಬೇಕಾದರೂ ಡಿವೋರ್ಸ್ ಆಗಬಹದುದು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ