Asianet Suvarna News Asianet Suvarna News

1200 ಜನರ ಇಸ್ರೇಲಿಗಳ ಹತ್ಯೆಗೂ ಮುನ್ನ ಸುರಂಗ ಸೇರಿದ್ದ ಸಿನ್ವರ್‌; ಅಲ್ಲಿಂದಲೇ ಹತ್ಯೆ, ಕಿಡ್ನಾಪ್‌, ರೇಪ್‌ ವೀಕ್ಷಣೆ

ಹಮಾಸ್‌ ಮುಖ್ಯಸ್ಥ ಯಾಹ್ಯಾ ಸಿನ್ವರ್‌ 1200 ಇಸ್ರೇಲಿಗಳ ಹತ್ಯೆಗೂ ಮುನ್ನ ಸುರಂಗದಲ್ಲಿ ಅಡಗಿದ್ದ ವಿಡಿಯೋವನ್ನು ಇಸ್ರೇಲಿ ಸೇನೆ ಬಿಡುಗಡೆ ಮಾಡಿದೆ. ಸುರಂಗದೊಳಗಿನಿಂದಲೇ ಹತ್ಯೆ, ಅಪಹರಣ ಮತ್ತು ಅತ್ಯಾಚಾರದ ದೃಶ್ಯಗಳನ್ನು ವೀಕ್ಷಿಸಿದ್ದಾನೆ ಎಂದು ಆರೋಪಿಸಲಾಗಿದೆ.

Hamas ex Chief Yahya Sinwar Seen Inside Tunnel footage viral mrq
Author
First Published Oct 21, 2024, 8:27 AM IST | Last Updated Oct 21, 2024, 8:27 AM IST

ಗಾಜಾ: ಕಳೆದ ವರ್ಷದ ಅ.7ರಂದು ಹಮಾಸ್‌ ಉಗ್ರರು ಇಸ್ರೇಲ್‌ನೊಳಗೆ ನುಗ್ಗಿ 1200 ಜನರನ್ನು ಬಲಿ ಪಡೆಯುವ ಘಟನೆಗೂ ಮುನ್ನ, ಹಮಾಸ್‌ ಮುಖ್ಯಸ್ಥ ಯಾಹ್ಯಾ ಸಿನ್ವರ್‌ ಸುರಂಗದೊಳಗೆ ಅಡಗಿದ್ದ ವಿಡಿಯೋವೊಂದನ್ನು ಇಸ್ರೇಲಿ ಸೇನೆ ಬಿಡುಗಡೆ ಮಾಡಿದೆ. ಸಿನ್ವರ್‌ನನ್ನು 3 ದಿನಗಳ ಹಿಂದಷ್ಟೇ ಇಸ್ರೇಲಿ ಸೇನೆ ಹತ್ಯೆ ಮಾಡಿತ್ತು. ಅದರ ಬೆನ್ನಲ್ಲೇ ಭಾನುವಾರ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ಖಾನ್‌ ಯೂನಿಸ್‌ ಪ್ರದೇಶದ ಮನೆಯೊಂದರ ಕೆಳಗೆ ನಿರ್ಮಿಸಿದ್ದ ರಹಸ್ಯ ಸುರಂಗದೊಳಗೆ ಸಿನ್ವರ್‌, ತನ್ನ ತನ್ನ ಮಕ್ಕಳು, ಪತ್ನಿಯೊಂದಿಗೆ ಟೀವಿ, ಹಾಸಿಗೆ, ನೀರು, ದಿಂಬು, ಬ್ಯಾಗ್‌ ಹಿಡಿದು ಹೋಗುತ್ತಿರುವ ದೃಶ್ಯಗಳಿವೆ.

‘ಹಮಾಸ್‌ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ದಾಳಿ ನಡೆಸಿದರೆ ಅದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಿನ್ವರ್‌ ಕುಟುಂಬ ಸದಸ್ಯರೊಂದಿಗೆ ಸುರಂಗದಲ್ಲಿ ಆಶ್ರಯ ಪಡೆಯಲು ಮುಂದಾಗಿದ್ದಿರಬಹುದು. ಜೊತೆಗೆ ತನ್ನ ಸಂಘಟನೆಯ ಕಾರ್ಯಕರ್ತರು ಅಮಾಯಕರ ಇಸ್ರೇಲಿಗಳನ್ನು ಹತ್ಯೆ ಮಾಡಿದ್ದನ್ನು, ಅವರನ್ನು ಅಪಹರಿಸಿದ್ದನ್ನು ಮತ್ತು ಅವರ ಮೇಲೆ ಅತ್ಯಾಚಾರ ಎಸಗಿದ ದೃಶ್ಯಗಳನ್ನು ಆತ ಸುರಂಗದೊಳಗಿನಿಂದಲೇ ವೀಕ್ಷಿಸಿದ್ದಾನೆ‘ ಎಂದು ಇಸ್ರೇಲಿ ಸೇನೆ ಹೇಳಿದೆ.

ಅ.7ರಂದು ಸಿನ್ವರ್‌ ಸೂಚನೆಯಂತೆ ನಡೆದ ದಾಳಿಯೇ ಇಸ್ರೇಲ್‌ - ಹಮಾಸ್‌ ನಡುವೆ ಸುದೀರ್ಘ ಯುದ್ಧಕ್ಕೆ ಕಾರಣವಾಗಿದೆ. ಈ ಯುದ್ಧದಲ್ಲಿ ಈಗಾಗಲೇ 40000ಕ್ಕೂ ಹೆಚ್ಚು ಪ್ಯಾಲೆಸ್ತೀನಿಗಳು ಸಾವಿಗೀಡಾಗಿದ್ದಾರೆ.

ಮನೆ ಮನೆ ಅಲೆಯುತ್ತಿದ್ದ ಸಿನ್ವರ್‌ನ ಹುಡುಕಿ ಹತ್ಯೆಗೈದ ಇಸ್ರೇಲ್‌- ಕೊನೇ ಕ್ಷಣ ಡ್ರೋನ್‌ ಕ್ಯಾಮೆರಾದಲ್ಲಿ ಸೆರೆ

ಹಮಾಸ್‌ ಉಗ್ರಗಾಮಿ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಯಾಹ್ಯಾ ಸಿನ್ವರ್‌ ಹತನಾಗುತ್ತಿದ್ದಂತೆ ಆತನ ಶವಕ್ಕಾಗಿ ಹುಡುಕಾಡಿದ ಇಸ್ರೇಲ್‌ ಯೋಧರು ಮೃತದೇಹ ಸಿಕ್ಕ ಕೂಡಲೇ ಮೊದಲು ಮಾಡಿದ ಕೆಲಸವೆಂದರೆ, ಸಿನ್ವರ್‌ನ ತೋರುಬೆರಳು ಕತ್ತರಿಸಿದ್ದು! ಅಚ್ಚರಿಯಾದರೂ ಇದು ನಿಜ. ತಮ್ಮೆದುರೇ ಶವವಾಗಿ ಮಲಗಿದ್ದ ವ್ಯಕ್ತಿ ಯಾಹ್ಯಾ ಸಿನ್ವರೇ ಹೌದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಆತನ ಎಡಗೈ ತೋರು ಬೆರಳನ್ನು ಯೋಧರು ಕತ್ತರಿಸಿದ್ದರು. ಅದನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಿದರು. ಗಾಜಾಪಟ್ಟಿಯ ರಫಾದಲ್ಲಿ ಸಿಕ್ಕ ಶವ ಯಾಹ್ಯಾನದ್ದೇ ಎಂಬುದು ಪರೀಕ್ಷೆಯಿಂದ ದೃಢಪಟ್ಟಿತು.

2 ದಶಕಗಳ ಕಾಲ ಯಾಹ್ಯಾ ಇಸ್ರೇಲ್‌ ಜೈಲಿನಲ್ಲಿದ್ದ. 2011ರಲ್ಲಿ ಕೈದಿಗಳ ವಿನಿಮಯ ಒಪ್ಪಂದದ ಭಾಗವಾಗಿ ಆತ ಬಿಡುಗಡೆಯಾಗಿದ್ದ. ತನ್ನ ಜೈಲಿನಲ್ಲಿದ್ದಾಗ ಯಾಹ್ಯಾ ಡಿಎನ್‌ಎ ಮಾದರಿಯನ್ನು ಇಸ್ರೇಲ್‌ ಸಂಗ್ರಹಿಸಿಟ್ಟಿತ್ತು. ಆತನ ಹತ್ಯೆ ನಂತರ ಕತ್ತರಿಸಿದ ಬೆರಳನ್ನು ತನ್ನ ಬಳಿ ಮೊದಲೇ ಇದ್ದ ಮಾದರಿ ಜತೆ ಹೋಲಿಸಿ ಇಸ್ರೇಲ್‌ ಪರೀಕ್ಷೆ ನಡೆಸಿತು ಎಂದು ವರದಿಗಳು ತಿಳಿಸಿವೆ.

Latest Videos
Follow Us:
Download App:
  • android
  • ios