ಕೊರೋನಾ ವೈರಸ್ ಚೀನಾದ ವುಹಾನ್ ಲ್ಯಾಬ್‌ನಿಂದ ಸೋರಿಕೆಯಾಗಿದೆ ಎಂಬ ಆರೋಪ| ವುಹಾನ್ ಲ್ಯಾಬ್‌ನಲ್ಲಿ ಕೊರೋನಾ ವೈರಸ್ ಪತ್ತೆ, ಕೋವಿಡ್ ಜತೆ ಹೋಲ್ತಿಲ್ಲ| | ಬಾವಲಿಗಳಿಂದ ಸಂಗ್ರಹಿಸಿದ 3 ಮಾದರಿಯ ಕೊರೋನಾ ವೈರಸ್ ಇರುವುದು ಬಯಲು
ಬೀಜಿಂಗ್(ಮೇ.25): ವಿಶ್ವವನ್ನು ನಡುಗಿಸಿರುವ ಕೊರೋನಾ ವೈರಸ್ ಚೀನಾದ ವುಹಾನ್ ಲ್ಯಾಬ್‌ನಿಂದ ಸೋರಿಕೆಯಾಗಿದೆ ಎಂಬ ಆರೋಪಗಳು ವ್ಯಾಪಕವಾಗಿರುವಾಗಲೇ, ವುಹಾನ್‌ನ ವೈರಾಣು ಸಂಸ್ಥೆಯಲ್ಲಿ ಬಾವಲಿಗಳಿಂದ ಸಂಗ್ರಹಿಸಿದ 3 ಮಾದರಿಯ ಕೊರೋನಾ ವೈರಸ್ ಇರುವುದು ಬಯಲಾಗಿದೆ.
ಚೀನಾದ ಲ್ಯಾಬ್‌ನಿಂದ ಕೊರೋನಾ ಪರಾರಿ ಬಗ್ಗೆ ತನಿಖೆ ಆರಂಭ!
undefined
ಆದರೆ ಈ ಮೂರೂ ಮಾದರಿಗೂ ಈಗ ವಿಶ್ವಾದ್ಯಂತ ಹಬ್ಬಿರುವ ಕೋವಿಡ್-19ಕ್ಕೂ ಹೋಲಿಕೆಯಾಗುತ್ತಿಲ್ಲ. ಬಾವಲಿಗಳಿಂದ ಕೊರೋನಾ ವೈರಸ್ ಪ್ರತ್ಯೇಕಿಸಿ, ಸಂಗ್ರಹಿಸಿದ್ದೇವೆ. ಅಂತಹ 3 ಸಜೀವ ಮಾದರಿಗಳು ನಮ್ಮಲ್ಲಿವೆ. ಆದರೆ ಅವುಗಳಿಗೂ ಕೋವಿಡ್-19 ವೈರಾಣುವಿಗೂ ಗರಿಷ್ಠ ಸಾಮ್ಯತೆ 79.8ರಷ್ಟಿದೆ.
ಕೋವಿಡ್-19 ವುಹಾನ್ ಲ್ಯಾಬ್‌ನಿಂದ ಸೋರಿಕೆಯಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪ ಕಟ್ಟುಕತೆ ಎಂದು ವುಹಾನ್ ಲ್ಯಾಬ್‌ನ ನಿರ್ದೇಶಕಿ ವಾಂಗ್ ಯಾನ್ಯಿ ತಿಳಿಸಿದ್ದಾರೆ.