ಮುಸಲ್ಮಾನರಿಗೆ ನಮಾಜ್ ಮಾಡಲು ಬಾಗಿಲು ತೆರೆದ ಚರ್ಚ್!

By Suvarna NewsFirst Published May 24, 2020, 5:33 PM IST
Highlights

ಸಾಮಾಜಿಕ ಅಂತರದ ನಿಯಮದಿಂದ ಮಸೀದಿಯಲ್ಲಿ ನಮಾಜ್‌ ಮಾಡಲಾಗದೆ ಅನೇಕ ಮುಸಲ್ಮಾನರ ಪರದಾಟ| ಸಾಮೂಹಿಕ ಸಮಾಜ್ ಮಾಡಲು ಮುಸಲ್ಮಾನರಿಗೆ ಅವಕಾಶ ಮಾಡಿಕೊಟ್ಟ ಚರ್ಚ್| ಮುಸಲ್ಮಾನರಿಗಾಗಿ ಬಾಗಿಲು ತೆರೆದ ಚರ್ಚ್

ಬರ್ಲಿನ್(ಮೇ.24): ವಿಶ್ವವ್ಯಾಪಿ ಮುಸಲ್ಮಾನ ಬಂಧುಗಳು ಈ ವಾರಾಂತ್ಯದಲ್ಲಿ ಪವಿತ್ರ ರಂಜಾನ್ ಆಚರಣೆ ಮಾಡಲು ಸಜ್ಜಾಗಿದ್ದಾರೆ. ಹೀಗಿರುವಾಗ ಸಾಮಾಜಿಕ ಅಂತರ ಕಾಪಾಡುವ ಹಾಗೂ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸಾಮೂಹಿಕ ನಮಾಜ್ ನಡೆಸಲು ಬಹುತೇಕ ಕಡೆ ನಿರ್ಬಂಧ ಹೇರಲಾಗಿದೆ. ಹೀಗಿರುವಾಗ ಕೊರೋನಾ ಆತಂಕದ ನಡುವೆ ಚರ್ಚ್ ಒಂದು ಮುಸಲ್ಮಾನರಿಗೆ ಸಾಮಾಜಿಕ ಅಂತರ ಕಾಪಾಡುತ್ತಾ ಶುಕ್ರವಾರದ ನಮಾಜ್ ಮಾಡಲು, ಬಾಗಿಲು ತೆರೆದಿದೆ.

ಹೌದು ಬರ್ಲಿನ್‌ನ ದರ್ ಅಸ್ಸಲಾಂ ಮಸೀದಿಯಲ್ಲಿ ಕೊರೋನಾದಿಂದಾಗಿ ಹೇರಲಾದ ಸಾಮಾಜಿಕ ಅಂತರದಿಂದಾಗಿ ಪವಿತ್ರ ರಂಜಾನ್‌ ವೇಳೆ ಕೆಲವರಿಗಷ್ಟೇ ನಮಾಜ್ ಮಾಡಲು ಅವಕಾಶ ಸಿಗುತ್ತದೆ. ಹೀಗಿರುವಾಗ ಮಾರ್ಥಾ ಲೂಥರನ್ ಚರ್ಚ್ ಮುಸಲ್ಮಾನರ ನೆರವಿಗೆ ಧಾವಿಸಿದೆ ಹಾಗೂ ಮುಸಲ್ಮಾನರಿಗೆ ಚರ್ಚ್‌ನಲ್ಲಿ ನಮಾಜ್ ಮಾಡಲು ಬಾಗಿಲು ತೆರೆದಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಚರ್ಚ್ ಮುಖ್ಯಸ್ಥರಾದ ಮೊನಿಕಾ ಮಥಾಯಸ್ 'ನಮಗೆಲ್ಲರಿಗೂ ಇರುವ ಕಾಳಜಿ ಒಂದೇ, ಹೀಗಿರುವಾಗ ನಾವು ನಿಮ್ಮಿಂದ ಕಲಿಯಲು ಇಚ್ಛಿಸುತ್ತೇವೆ. ಪರಸ್ಪರ ಹೀಗೆ ಸಹಾಯ ಮಾಡುವ ಭಾವನೆಯೇ ಖುಷಿ ಕೊಡುತ್ತದೆ' ಎಂದಿದ್ದಾರೆ.

ಈದ್ ಹಬ್ಬಕ್ಕೆ ಕ್ರಿಕೆಟಿಗ ಇರ್ಫಾನ್ ಪಠಾಣ್ ಮಹತ್ವದ ಸಂದೇಶ!

ಇನ್ನು ಫ್ರಾನ್ಸ್‌ನಲ್ಲಿನ್ಯಾಯಾಂಗದ ಮೂಲಕ ಸವಾಲೆಸೆದ ಪರಿಣಾಮ,  ಧಾರ್ಮಿಕ ಕಾರ್ಯಗಳಿಗೆ ಹೇರಲಾದ ನಿರ್ಬಂಧವನ್ನು ಹಿಂಪಡೆಯಲಾಗಿದೆ. ಹೀಗಾಗಿ ಶನಿವಾರದಿಂದ ಇಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಇನ್ನು ಅಮೆರಿಕದಲ್ಲಿ ಚರ್ಚ್, ಸಿನಾಗೊಗ್ ಹಾಗೂ ಮಸೀದಿಗಳಲ್ಲಿ ನಡೆಯುವ ಪ್ರಾರ್ಥನೆಯನ್ನು ಅವಶ್ಯಕ ಸೇವೆಗೆ ಸೇರ್ಪಡೆಗೊಳಿಸಲಾಗಿದ್ದು, ಇದನ್ನು ತಡೆಯುವ ಗವರ್ನರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. 

click me!