ಪಾಕ್‌ ವಿಮಾನ ದುರಂತದಿಂದ ಅನೇಕರನ್ನು ಕಾಪಾಡಿದ ನಮಾಜ್‌!

By Kannadaprabha News  |  First Published May 24, 2020, 1:15 PM IST

ಪಾಕ್‌ ವಿಮಾನ ದುರಂತ: 97 ಮಂದಿ ಸಾವು, ಇಬ್ಬರು ಬಚಾವ್ ‌| ಘಟನೆಯಿಂದ 25 ಮನೆಗಳಿಗೆ ಹಾನಿ | ಮನೆ ಮಂದಿ ಬೇರೆಡೆಗೆ ಸ್ಥಳಾಂತರ


ಕರಾಚಿ(ಮೇ.24): ಪಾಕಿಸ್ತಾನದ ಕರಾಚಿಯಲ್ಲಿ  ಕಳೆದ ಶುಕ್ರವಾರ ನಡೆದ ವಿಮಾನ ದುರ್ಘಟನೆಯಲ್ಲಿ ಒಂಬತ್ತು ಮಕ್ಕಳು ಸೇರಿ ಒಟ್ಟು 97 ಮಂದಿ ಸಾವನ್ನಪ್ಪಿದ್ದಾರೆ. 8 ಸಿಬ್ಬಂದಿ ಸೇರಿ ಒಟ್ಟು 107 ಮಂದಿ ಪ್ರಯಾಣಿಸುತ್ತಿದ್ದ ಪಿಐಎ ವಿಮಾನವು ತಾಂತ್ರಿಕ ದೋಷದಿಂದಾಗಿ ಪತನಗೊಂಡಿತ್ತು.

ಆದರೆ ಪವಾಡ ಸದೃಶ ರೀತಿಯಲ್ಲಿ ವಿಮಾನದಲ್ಲಿದ್ದ ಇಬ್ಬರು ಬಚಾವ್‌ ಆಗಿದ್ದಾರೆ. ಘಟನೆಯಿಂದ 25 ಮನೆಗಳಿಗೆ ಹಾನಿಯಾಗಿದ್ದು, ದುರಸ್ಥಿ ಕಾರ್ಯ ನಡೆಯುತ್ತಿದೆ. ಮನೆ ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

Tap to resize

Latest Videos

undefined

ಕರಾಚಿ ವಿಮಾನ ದುರಂತ ನೋಡಿ ನಕ್ಕ ಭಾರತೀಯರನ್ನು ಸ್ಯಾಡಿಸ್ಟ್ ಎಂದ ಪಾಕ್ ನೆಟ್ಟಿಗರು

ಶುಕ್ರವಾರ ಬಹಳಷ್ಟು ಪುರುಷರು ನಮಾಜ್‌ಗೆ ತೆರಳಿದ್ದ ಕಾರಣ ಮನೆಗಳಲ್ಲಿ ಹೆಚ್ಚಿನ ಜನ ಇರಲಿಲ್ಲ. ಇಲ್ಲದೇ ಹೋದಲ್ಲಿ ವಿಮಾನ ಪತನಕ್ಕೆ ಇನ್ನಷ್ಟು ಜನ ಬಲಿಯಾಗುವ ಅಪಾಯ ಇರುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ 2 ತಿಂಗಳ ಹಿಂದಷ್ಟೆ ವಿಮಾನವನ್ನು ತಪಾಸಣೆ ಮಾಡಲಾಗಿತ್ತು. ಗುರುವಾರವಷ್ಟೇ ಅದು ಮಸ್ಕತ್‌ನಿಂದ ಲಾಹೋರ್‌ಗೆ ಯಾವುದೇ ತೊಂದರೆ ಇಲ್ಲದೆ ಸಂಚಾರ ನಡೆಸಿತ್ತು ಎಂದು ಪಾಕ್‌ ವಿಮಾನಯಾನ ಸಚಿವಾಲಯ ಮಾಹಿತಿ ಕೊಟ್ಟಿದೆ.

ಮಂಗಳೂರು ದುರಂತ ರೀತಿಯಲ್ಲಿ ಪಾಕಿಸ್ತಾನದಲ್ಲಿ ವಿಮಾನ ಪತನ; 107 ಮಂದಿ ಸಜೀವ ದಹನ?

ಮತ್ತೊಂದು ಅಚ್ಚರಿಯ ವಿಷಯವೆಂದರೆ ಘಟನೆಯಲ್ಲಿ ಪಾರಾದ ಬ್ಯಾಂಕ್‌ ಆಫ್‌ ಪಂಜಾಬ್‌ನ ಸಿಇಒ ಜಾಫರ್‌ ಮಸೂದ್‌ ಅವರ ಪೂರ್ವಜರು ಉತ್ತರ ಪ್ರದೇಶ ಮೂಲದವರು.

click me!