
ಗಲ್ಫ್ ದೇಶಗಳಲ್ಲಿ ಒಂದಾಗಿರುವ ದುಬೈ ಜಗತ್ತಿನ ಹಲವು ವಾಸ್ತುಶಿಲ್ಪ ಅದ್ಭುತಗಳಿಗೆ ಸಾಕ್ಷಿಯಾಗಿದೆ. ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಗಗನಚುಂಬಿ ಕಟ್ಟಡಗಳನ್ನು ದೇವರೇ ನಾಚಿಸುವಂತೆ ದುಬೈ ಸೃಷ್ಟಿಸಿದೆ. ಕೃತಕ ಬೀಚ್‌ನಿಂದ ಹಿಡಿದು ಕೃತಕ ಹಿಮಪಾತವಾಗುವಂತಹ ಅದ್ಭುತಗಳು ನೋಡಲು ಸಿಗುವುದು ದುಬೈನಲ್ಲಿ ಮಾತ್ರ. ಹೀಗಿರುವಾಗ ದುಬೈ ಮತ್ತೊಂದು ಸಾಹಸ ಮಾಡಲು ಹೊರಟಿದೆ. ಹಲವು ಗಗನಚುಂಬಿ ಕಟ್ಟಡಗಳಿಗೆ ಸಾಕ್ಷಿಯಾಗಿರುವ ದುಬೈ ಈಗ ವಿಶ್ವದ ಅತ್ಯಂತ ಸ್ಲಿಮ್ ಆಗಿರುವ ಅಂದರೆ ತೆಳ್ಳಗಿರುವ ಗಗನಚುಂಬಿ ಕಟ್ಟಡವನ್ನು ನಿರ್ಮಿಸಲು ಹೊರಟ್ಟಿದ್ದು ಇದು ಮಾಯಾನಗರಿ ದುಬೈನ ಮತ್ತೊಂದು ಅದ್ಭುತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಬಗ್ಗೆ ಒಂದು ವರದಿ.
ಮುರಾಬಾ ವೇಲ್ ಹೆಸರಿನ ಈ ಅತ್ಯಂತ ತೆಳ್ಳಗಿನ ಗಗನಚುಂಬಿ ಕಟ್ಟಡವೂ 13,00 ಅಡಿ ಎತ್ತರವಿರಲಿದ್ದು, 73 ಮಹಡಿಗಳನ್ನು ಹೊಂದಿರಲಿದೆ. ಕೇವಲ 73 ಅಡಿ ಅಂದರೆ ಕೇವಲ 22.5 ಮೀಟರ್ ಅಗಲವಿರುವ ಈ ಕಟ್ಟಡವೂ ಒಂದು ಫ್ಲೋರ್‌ನಲ್ಲಿ ಬರೀ ಒಂದು ಅಪಾರ್ಟ್‌ಮೆಂಟನ್ನು ಮಾತ್ರ ಹೊಂದಿರಲಿದೆ. ಇದರ ಬೆಲೆ 5 ಮಿಲಿಯನ್ ಡಾಲರ್ ಆಗಿದ್ದು, 131 ಪೂರ್ಣ ಮಹಡಿಗಳ ರೆಸಿಡೆನ್ಸಿ ಇದರಲ್ಲಿ ಇರಲಿದೆ. ಪ್ರತಿ ಮನೆಯೂ 360 ಡಿಗ್ರಿ ನೋಟವನ್ನು ನಿವಾಸಿಗಳಿಗೆ ನೀಡಲಿದೆ.
ಮುಂಬೈನಿಂದ ದುಬೈಗೆ ಕೇವಲ 2 ಗಂಟೆ ಪ್ರಯಾಣ, ಸಮುದ್ರದಡಿಯಿಂದ ರೈಲು ಸೇವೆಗೆ UAE ಪ್ಲಾನ್
ಪ್ರತಿ ಅಪಾರ್ಟ್‌ಮೆಂಟ್‌ನಲ್ಲಿ ಕೇವಲ ಎರಡರಿಂದ ಐದು ಮಲಗುವ ಕೋಣೆಗಳನ್ನು ಹೊಂದಿರಲಿದೆ. ಅಂದಹಾಗೆ ದುಬೈನ ಮತ್ತೊಂದು ಅದ್ಭುತಕ್ಕೆ ಸಾಕ್ಷಿಯಾಗಲಿರುವ ಈ ಕಟ್ಟಡವನ್ನು ಪ್ರಿಟ್ಜ್ಕರ್ ಪ್ರಶಸ್ತಿ ವಿಜೇತ ಆರ್‌ಸಿಆರ್ ಆರ್ಕಿಟೆಕ್ಟ್ಸ್ ವಿನ್ಯಾಸಗೊಳಿಸಿದ್ದಾರೆ. ಅಲ್ಲದೇ ಇತರ ಎಂಜಿನಿಯರಿಂಗ್ ಸಂಸ್ಥೆಗಳಾದ ಡಬ್ಲ್ಯೂಎಸ್‌ಪಿ ಮತ್ತು ಅರುಪ್ ಅನ್ನು ಸಹ ಒಳಗೊಂಡಿದೆ.
ಸಾಂಪ್ರದಾಯಿಕ ಅರೇಬಿಯನ್ ವಾಸ್ತುಶಿಲ್ಪದಿಂದ ಪ್ರೇರಿತವಾಗಿ, ಇದು ದುಬೈನ ಪ್ರಮುಖ ಸ್ಥಳದಲ್ಲಿ ನೆಲೆಗೊಳ್ಳಲಿದ್ದು, ದುಬೈನ ಕಠಿಣ ಸೂರ್ಯನ ಹಾವಳಿಯನ್ನು ನಿವಾರಿಸಲು ಉದ್ದೇಶಿಸಲಾದ ರಂಧ್ರವಿರುವ ಸ್ಟೇನ್‌ಲೆಸ್ ಸ್ಟೀಲ್ ಮಶ್ರಬಿಯಾ ಶೈಲಿಯ ಜಾಲರಿ ಅಥವಾ ಮುಸುಕುನಿಂದ ಈ ಕಟ್ಟಡವೂ ಸುತ್ತುವರಿಯಲ್ಪಡುತ್ತದೆ. ಇದರ ಒಳಭಾಗವು 73 ಮಹಡಿಗಳನ್ನು ಒಳಗೊಂಡಿರುತ್ತದೆ ಮತ್ತು ಇದು ಅಗಲಕ್ಕಿಂತ ಹೆಚ್ಚು ಉದ್ದವಾಗಿದ್ದು, ಇದು 131 ಐಷಾರಾಮಿ ನಿವಾಸಗಳಿಗೆ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ.
ದುಬೈ ರಾಜನ ಮಗಳ ಹೆಸರು ಕೇಳಿದ್ರೆ ಭಾರತೀಯರಿಗೆ ಖುಷಿ ಆಗುತ್ತೆ!
ಈ ಕಟ್ಟಡದ ನಿರ್ಮಾಣ ಕಾರ್ಯ ಸದ್ಯ ನಡೆಯುತ್ತಿದ್ದು, ಈ ಅಲ್ಟ್ರಾ ಐಷಾರಾಮಿ ಗಗನಚುಂಬಿ ಕಟ್ಟಡವು ಜಾಗತಿಕ ಮಟ್ಟದಲ್ಲಿ ಖಾಸಗಿತನ, ಪ್ರತ್ಯೇಕತೆ ಮತ್ತು ವಿಭಿನ್ನವಾದ ಜೀವನವನ್ನು ಮರುವ್ಯಾಖ್ಯಾನಿಸುತ್ತೆ ಎಂದು ಹೇಳಿದ್ರೆ ತಪ್ಪಾಗಲ್ಲ.
ಬಾಲ್ಕನಿಯಲ್ಲಿ ಬಟ್ಟೆ ಒಣಗಿಸೋರಿಗೆ ಶಾಕ್ ನೀಡಿದ ಅಬುಧಾಬಿ
ಹೌದು ಗಲ್ಫ್ ರಾಷ್ಟ್ರಗಳಲ್ಲಿ ಒಂದಾಗಿರುವ ಅಬುಧಾಬಿ ಈಗ ತನ್ನ ನಗರದಲ್ಲಿ ಸೌಂದರ್ಯ ಕಾಪಾಡಲು ಮುಂದಾಗಿದೆ. ನಗರದ ಗಗನಚುಂಬಿ ಅಪಾರ್ಟ್‌ಮೆಂಟ್‌ಗಳ ಬಾಲ್ಕನಿಯಲ್ಲಿ ಗಾಳಿಪಟದಂತೆ ನೇತು ಹಾಕಿರುವ ಬಟ್ಟೆಗಳು ಬೇಡದ ವಸ್ತುಗಳಿಂದ ನಗರದ ಸೌಂದರ್ಯ ಹಾಳಾಗುತ್ತಿದೆ ಎಂಬ ನಿರ್ಧಾರಕ್ಕೆ ಬಂದಿರುವ ಅಬುಧಾಬಿ ಆಡಳಿತವೂ ಈ ಬಾಲ್ಕನಿಯಲ್ಲಿ ಇನ್ನು ಮುಂದೆ ಕಸಗಳನ್ನು ರಾಶಿ ಹಾಕುವುದು ಅಥವಾ ಬಟ್ಟೆಗಳನ್ನು ನೇತು ಹಾಕಲು ಜಾಗ ಮಾಡಿಕೊಂಡರೆ ಅಂತಹ ಜನರಿಗೆ ಭಾರಿ ದಂಡ ವಿಧಿಸಲು ಸಿದ್ಧತೆ ನಡೆಸಿದೆ. ಮೊದಲಿಗೆ 500 ರೂ ದಿರ್ಹಮ್ ಹಾಕಲಿರುವ ಅಬುಧಾಬಿ ನಂತರ ಈ ಕೃತ್ಯವನ್ನು ಮತ್ತೆ ಮತ್ತೆ ಮುಂದುವರಿಸಿದರೆ 2000 ದಿಹ್ರಮ್ ದಂಡ ವಿಧಿಸಲಿದೆ. ಸುಸ್ಥಿರ ನಗರ ಪರಿಸರವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲು ಅಬುಧಾಬಿ ಮುಂದಾಗಿದೆ. ಆದರೆ 500 ದಿಹ್ರಮ್ ಎಂದರೆ 500 ರೂಪಾಯಿ ಅಲ್ಲ, ಸರಿಸುಮಾರು ಭಾರತದ ರೂಪಾಯಿ ಲೆಕ್ಕದಲ್ಲಾದರೆ 11,627 ರೂಪಾಯಿಗಳು ಹಾಗೂ 2000 ಎಂದರೂ ಬರೀ 2 ಸಾವಿರ ರೂಪಾಯಿಯಲ್ಲ, 46,509 ರೂಪಾಯಿಗಳು ಹೀಗಾಗಿ ಮನೆ ಹೊರಗೆ ಬಾಲ್ಕನಿಯಲ್ಲಿ ಬಟ್ಟೆ ಒಣಗಿಸಿ ಅಭ್ಯಾಸವಿರುವ ಭಾರತೀಯರೇನಾದರೂ ಈ ಕೃತ್ಯವೆಸಗಿದರೆ ಅವರ ಪಾಲಿಗೆ ದುಬಾರಿ ಹಣ ಗೋತಾ ಆಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ