ಅಮೆರಿಕಾದ FBIನಿಂದ ಮತ್ತೊಂದು ಬೇಟೆ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್-ವಾಂಟೆಡ್ ಉಗ್ರ ಅರೆಸ್ಟ್

Published : Apr 18, 2025, 03:19 PM ISTUpdated : Apr 18, 2025, 03:25 PM IST
 ಅಮೆರಿಕಾದ FBIನಿಂದ ಮತ್ತೊಂದು ಬೇಟೆ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್-ವಾಂಟೆಡ್ ಉಗ್ರ  ಅರೆಸ್ಟ್

ಸಾರಾಂಶ

ಪಂಜಾಬ್‌ನಾದ್ಯಂತ ನಡೆದ 14ಕ್ಕೂ ಹೆಚ್ಚು ಗ್ರೇನೆಡ್ ದಾಳಿಗಳಲ್ಲಿ ಭಾಗಿಯಾದ ಹ್ಯಾಪಿ ಪ್ಯಾಸಿಯಾ ಅಲಿಯಾಸ್ ಹರ್‌ಪ್ರೀತ್‌ ಸಿಂಗ್‌ನನ್ನು ಅಮೆರಿಕದಲ್ಲಿ ಎಫ್‌ಬಿಐ ಬಂಧಿಸಿದೆ. ಭಾರತದಲ್ಲಿ ನಡೆದ ಹಲವಾರು ಇಂತಹ ದಾಳಿಗಳ ಜವಾಬ್ದಾರಿಯನ್ನು ಅವನು ವಹಿಸಿಕೊಂಡಿದ್ದಾನೆ ಎಂಬುದು ಭಾರತದ ತನಿಖಾ ಸಂಸ್ಥೆಗಳ ಆರೋಪವಾಗಿದೆ.

ನವದೆಹಲಿ: ಪಂಜಾಬ್‌ನಾದ್ಯಾಂತ ನಡೆದ 14ಕ್ಕೂ ಹೆಚ್ಚು ಗ್ರೇನೆಡ್ ದಾಳಿಗಳಲ್ಲಿ ಭಾಗಿಯಾದ ಹ್ಯಾಪಿ ಪ್ಯಾಸಿಯಾ ಅಲಿಯಾಸ್ ಹರ್‌ಪ್ರೀತ್‌ ಸಿಂಗ್‌ನನ್ನು ಅಮೆರಿಕದಲ್ಲಿ ಎಫ್‌ಬಿಐ ಬಂಧಿಸಿದೆ. ಪ್ಯಾಸಿಯಾ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದು, ಎನ್‌ಐಎ ನ್ಯಾಯಾಲಯದ ಮುಂದೆ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಮತ್ತೊಬ್ಬ ಪಾತಕಿ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಜೊತೆಗೆ ಈತನ ಹೆಸರು ಕೂಡ ಇದೆ.

ಹ್ಯಾಪಿ ಪ್ಯಾಸಿಯಾ ಯಾರು?
ಈಗ ಅಮೆರಿಕಾದಲ್ಲಿ ಬಂಧಿತನಾಗಿರುವ ಹರ್ಪೀತ್ ಸಿಂಗ್ ಪಂಜಾಬ್‌ನ ಅಮೃತಸರ ಜಿಲ್ಲೆಯ ಪ್ಯಾಸಿಯಾ ಗ್ರಾಮದವನಾಗಿದ್ದು, ಹಲವಾರು ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳ ನಿರ್ಮೂಲನಾ ಕಾಯ್ದೆ (ಯುಎಪಿಎ), ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (ಎನ್‌ಡಿಪಿಎಸ್) ಕಾಯ್ದೆಯೂ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆತ ಪೊಲೀಸರಿಗೆ ಬೇಕಾಗಿದ್ದಾನೆ.

ಪ್ಯಾಸಿಯಾ ಭಾರತಕ್ಕೆ ಬೇಕಾಗಿರುವ (most wanted) ಅಪರಾಧಿಗಳಲ್ಲಿ ಒಬ್ಬನಾಗಿದ್ದು, ಈತನ ತಲೆಗೆ ಭಾರತ ಸರ್ಕಾರ ₹5ಲಕ್ಷ ಬಹುಮಾನವನ್ನು ಘೋಷಿಸಿದೆ. ಈ ವರ್ಷದ ಜನವರಿಯಲ್ಲಿ, ಹಲವಾರು ಗ್ರೆನೇಡ್ ದಾಳಿಗಳಲ್ಲಿ ಅವನು ಭಾಗಿಯಾಗಿದ್ದಾನೆ ಎಂಬ ಆರೋಪದ ಮೇಲೆ ಎನ್‌ಐಎ ಆತನ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನವನ್ನು ಘೋಷಿಸಿತು. ಭಾರತದಲ್ಲಿ ನಡೆದ ಹಲವಾರು ಇಂತಹ ದಾಳಿಗಳ ಜವಾಬ್ದಾರಿಯನ್ನು ಅವನು ವಹಿಸಿಕೊಂಡಿದ್ದಾನೆ ಎಂಬುದು ಭಾರತದ ತನಿಖಾ ಸಂಸ್ಥೆಗಳ ಆರೋಪವಾಗಿದೆ. 

ಮುಂಬೈ ದಾಳಿ ಬಗ್ಗೆ ಬಾಯ್ಬಿಡದ ಉಗ್ರ ತಹಾವೂರ್ ರಾಣಾ, NIAನಿಂದ ಸತತ 3 ಗಂಟೆ ವಿಚಾರಣೆ । Tahawwur Rana

2024 ರ ಸೆಪ್ಟೆಂಬರ್ 11ರಂದು ಇಬ್ಬರು ಯುವಕರು ಪಂಜಾಬ್‌ನಲ್ಲಿ ಸೆಕ್ಟರ್ 10 ರ ಮನೆಯ ಮೇಲೆ ಹ್ಯಾಂಡ್ ಗ್ರೆನೇಡ್ ಎಸೆದಿದ್ದರು. ಹ್ಯಾಪಿ ಪಾಸಿಯಾ  ಸೂಚನೆಗಳ ಮೇರೆಗೆಯೇ ಈ ಯುವಕರು ಕಾರ್ಯನಿರ್ವಹಿಸಿದರು ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ,  ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಸ್ಕಿರತ್ ಸಿಂಗ್ ಚಾಹಲ್ ಅವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿತ್ತು. ಜಸ್ಕಿರತ್ ಸಿಂಗ್ ಚಾಹಲ್ ಅವರು 1986 ರಲ್ಲಿ ನಕೋದರ್‌ನಲ್ಲಿ ಸ್ಟೇಷನ್ ಹೌಸ್ ಆಫೀಸರ್ (SHO) ಆಗಿ ಸೇವೆ ಸಲ್ಲಿಸಿದ್ದರು. ಈ ಸಮಯದಲ್ಲಿ ನಾಲ್ವರು ಸಿಖ್ ಪ್ರತಿಭಟನಾಕಾರರು ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದರು. ಇದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳಲು ಈ ದಾಳಿ ನಡೆದಿತ್ತು. ಇದಲ್ಲದೇ ಡಿಸೆಂಬರ್ 2023 ರಲ್ಲಿ ಪಂಜಾಬ್ ಪೊಲೀಸರು ಹ್ಯಾಪಿ ಪಾಸಿಯಾ ಮತ್ತು ಶಂಶೇರ್ ಅಲಿಯಾಸ್ ಹನಿ ನಿರ್ವಹಿಸುತ್ತಿದ್ದ ಭಯೋತ್ಪಾದಕ ಯೋಜನೆಯೊಂದನ್ನು ಭೇದಿಸಿದರು, ಬಟಾಲಾ ಮತ್ತು ಗುರುದಾಸ್ಪುರದಲ್ಲಿ ಪೊಲೀಸರ ಗುರಿಯಾಗಿಸಿ ರೂಪಿಸಿದ್ದ ಗ್ರೇನೇಡ್ ದಾಳಿ ಅದಾಗಿತ್ತು. 

ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?

ಈ ಹ್ಯಾಪಿ ಪಾಸಿಯಾ ಪಾಕಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಜೊತೆ ಹಾಗೂ ಖಲಿಸ್ತಾನಿ ಉಗ್ರಗಾಮಿ ಗುಂಪಾದ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಜೊತೆಗೂ ಸಂಪರ್ಕ ಹೊಂದಿದ್ದಾನೆ. ಅವನಿಗೆ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ನಿಂದ ಬೆಂಬಲ ಸಿಗುತ್ತಿದೆ ಎಂಬ ವರದಿ ಇದೆ. ರಿಂಡಾ ಜೊತೆಗಿನ ಅವನ ಸಂಬಂಧ 2013 ರಿಗಿಂತಲೂ ಹಿಂದಿನದ್ದಾಗಿದೆ. ಇವರಿಬ್ಬರು  ಪಂಜಾಬ್‌ನಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ ಹ್ಯಾಪಿ
2021 ರಲ್ಲಿ, ಪ್ಯಾಸಿಯಾ ಮಾನವ ಕಳ್ಳಸಾಗಣೆ ಜಾಲದ ಸಹಾಯದಿಂದ ಮೆಕ್ಸಿಕೋ ಗಡಿಯ ಮೂಲಕ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ.ಕೆಲ ದಿನಗಳ ಹಿಂದಷ್ಟೇ ಅಮೆರಿಕಾದ ತನಿಖಾ ಸಂಸ್ಥೆಗಳು ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಂಡ್ ಉಗ್ರ, 26/11 ಮುಂಬೈ ದಾಳಿಯ ಆರೋಪಿ ತಹಾವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡಿದ್ದು, ಪ್ರಸ್ತುತ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ ಆತನ ವಿಚಾರಣೆ ನಡೆಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ
ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ