ಬಾಲ್ಕನಿಯಲ್ಲಿ ಬಟ್ಟೆ ಒಣಗಿಸೋ ಭಾರತೀಯರಿಗೆ ಶಾಕ್ ನೀಡಿದ ಅಬುಧಾಬಿ

Published : Apr 19, 2025, 07:12 PM ISTUpdated : Apr 19, 2025, 07:32 PM IST
ಬಾಲ್ಕನಿಯಲ್ಲಿ ಬಟ್ಟೆ ಒಣಗಿಸೋ ಭಾರತೀಯರಿಗೆ ಶಾಕ್ ನೀಡಿದ ಅಬುಧಾಬಿ

ಸಾರಾಂಶ

ಬಾಲ್ಕನಿಯಲ್ಲಿ ಇನ್ನು ಮುಂದೆ ಕಸಗಳನ್ನು ರಾಶಿ ಹಾಕುವುದು ಅಥವಾ ಬಟ್ಟೆಗಳನ್ನು ನೇತು ಹಾಕಲು ಜಾಗ ಮಾಡಿಕೊಂಡರೆ ಅಂತಹ ಜನರಿಗೆ ಭಾರಿ ದಂಡ ವಿಧಿಸಲು ಸಿದ್ಧತೆ ನಡೆಸಿದೆ.

ಅಬುಧಾಬಿ: ಬಹುತೇಕ ಭಾರತೀಯರು ಮನೆಯ ಹಿಂಬದಿ ಇರುವ ಬಾಲ್ಕನಿಯಲ್ಲಿ ಬಟ್ಟೆಗಳನ್ನು ತೂಗು ಹಾಕುವುದು, ಒಣಗಿಸುವುದು ಬೇಡದ ವಸ್ತುಗಳನ್ನು ಅಲ್ಲಿ ಸ್ಟೋರ್‌ ಮಾಡುವುದು ಸಾಮಾನ್ಯವಾಗಿದೆ. ಹಿಂದೆಲ್ಲಾ ಹಳ್ಳಿಯ ಮನೆಗಳಲ್ಲಿ ಮನೆಯ ಜೊತೆಗೆ ಅಂಟಿಕೊಂಡೆ ಅಥವಾ ಪ್ರತ್ಯೇಕವಾಗಿ ಕೊಟ್ಟಿಗೆಯೊಂದು ಇರುತ್ತಿತ್ತು. ಮನೆಯಲ್ಲಿ ಅಗತ್ಯವಿಲ್ಲದ ವಸ್ತುಗಳನ್ನು ಬೇಡದ ವಸ್ತುಗಳನ್ನು ಅಲ್ಲಿ ಎಸೆದು ಬಿಡುತ್ತಿದ್ದರು. ಟಿವಿಯ ಬಾಕ್ಸ್‌ಗಳು, ಪ್ಲಾಸ್ಟಿಕ್‌ಗಳು ಥರ್ಮಾಕೋಲ್‌ಗಳು ಹಳೆಯ ಪಾತ್ರೆಗಳು ಡಬ್ಬಿಗಳು ಹೀಗೆ ಪ್ರತಿಯೊಂದು ಅಲ್ಲಿ ಸ್ಟೋರ್‌ ಆಗಿ ಧೂಳು ಹಿಡಿದುಕೊಂಡು ಇರುತ್ತಿದ್ದವು. ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದಕ್ಕೂ ಈ ಜಾಗವನ್ನು ಬಳಸಲಾಗುತ್ತಿತ್ತು. ಆದರೆ ನಗರದಲ್ಲಿ ಹಾಗಲ್ಲ, ಇಂಚು ಇಂಚು ಜಾಗಕ್ಕೂ ಸಾವಿರಾರು ರೂ ಬೆಲೆ. ಹೀಗಾಗಿ ಒಂದಿಂಚು ವೇಸ್ಟ್‌ ಆಗದಂತೆ ಬಿಲ್ಡರ್‌ಗಳು ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿರುತ್ತಾರೆ. ಹೀಗಿರುವಾಗ ಈ ಬೇಡದ ವಸ್ತುಗಳನ್ನು ಇಡುವುದಕ್ಕೆ ಜಾಗವಾದರು ಎಲ್ಲಿರುತ್ತದೆ. ಇದೇ ಕಾರಣಕ್ಕೆ ಅಪಾರ್ಟ್‌ಮೆಂಟ್‌ನಲ್ಲಿ ಬಹುತೇಕರು ಮನೆಯ ಹಿಂಬದಿಯ ಬಾಲ್ಕನಿಯನ್ನು ಬಟ್ಟೆ ಒಣಗಿಸುದಕ್ಕೆ ಬೇಡದ ವಸ್ತುಗಳನ್ನು ಇಡುವುದಕ್ಕೆ ಬಳಸುತ್ತಾರೆ. ಆದರೆ ಭಾರತದಲ್ಲಿ ಇದಕ್ಕೆ ಯಾರ ಅಡ್ಡಿಯೂ ಇಲ್ಲ, ಆದರೆ ಇನ್ನು ಮುಂದೆ ಇದೇ ರೀತಿ ನೀವು ಅಬುಧಾಬಿಯಲ್ಲಿ ಮಾಡಲು ಹೋದರೆ ದುಬಾರಿ ದಂಡ ಕಟ್ಟಬೇಕಾಗುತ್ತದೆ. 

ಹೌದು ಗಲ್ಫ್‌ ರಾಷ್ಟ್ರಗಳಲ್ಲಿ ಒಂದಾಗಿರುವ ಅಬುಧಾಬಿ ಈಗ ತನ್ನ ನಗರದಲ್ಲಿ ಸೌಂದರ್ಯ ಕಾಪಾಡಲು ಮುಂದಾಗಿದೆ. ನಗರದ ಗಗನಚುಂಬಿ ಅಪಾರ್ಟ್‌ಮೆಂಟ್‌ಗಳ ಬಾಲ್ಕನಿಯಲ್ಲಿ ಗಾಳಿಪಟದಂತೆ ನೇತು ಹಾಕಿರುವ ಬಟ್ಟೆಗಳು ಬೇಡ ವಸ್ತುಗಳಿಂದ ನಗರದ ಸೌಂದರ್ಯ ಹಾಳಾಗುತ್ತಿದೆ ಎಂಬ ನಿರ್ಧಾರಕ್ಕೆ ಬಂದಿರುವ ಅಬುಧಾಬಿ ಆಡಳಿತವೂ ಈ ಬಾಲ್ಕನಿಯಲ್ಲಿ ಇನ್ನು ಮುಂದೆ ಕಸಗಳನ್ನು ರಾಶಿ ಹಾಕುವುದು ಅಥವಾ ಬಟ್ಟೆಗಳನ್ನು ನೇತು ಹಾಕಲು ಜಾಗ ಮಾಡಿಕೊಂಡರೆ ಅಂತಹ ಜನರಿಗೆ ಭಾರಿ ದಂಡ ವಿಧಿಸಲು ಸಿದ್ಧತೆ ನಡೆಸಿದೆ. ಮೊದಲಿಗೆ 500 ರೂ ದಿರ್ಹಮ್‌ ಹಾಕಲಿರುವ ಅಬುಧಾಬಿ ನಂತರ ಈ ಕೃತ್ಯವನ್ನು ಮತ್ತೆ ಮತ್ತೆ ಮುಂದುವರಿಸಿದರೆ 2000 ದಿಹ್ರಮ್‌ ದಂಡ ವಿಧಿಸಲಿದೆ.  ಸುಸ್ಥಿರ ನಗರ ಪರಿಸರವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲು ಅಬುಧಾಬಿ ಮುಂದಾಗಿದೆ. ಆದರೆ 500 ದಿಹ್ರಮ್ ಎಂದರೆ 500 ರೂಪಾಯಿ ಅಲ್ಲ, ಸರಿಸುಮಾರು ಭಾರತದ ರೂಪಾಯಿ ಲೆಕ್ಕದಲ್ಲಾದರೆ 11,627 ರೂಪಾಯಿಗಳು ಹಾಗೂ 2000 ಎಂದರೂ ಬರೀ 2 ಸಾವಿರ ರೂಪಾಯಿಯಲ್ಲ, 46,509 ರೂಪಾಯಿಗಳು ಹೀಗಾಗಿ ಮನೆ ಹೊರಗೆ ಬಾಲ್ಕನಿಯಲ್ಲಿ ಬಟ್ಟೆ ಒಣಗಿಸಿ ಅಭ್ಯಾಸವಿರುವ ಭಾರತೀಯರೇನಾದರೂ ಈ ಕೃತ್ಯವೆಸಗಿದರೆ ಅವರ ಪಾಲಿಗೆ ದುಬಾರಿ ಹಣ  ಗೋತಾ ಆಗಲಿದೆ.

ಆರೈಕೆಯಲ್ಲಿದ್ದ ಮಗು ಸಾವು; ಯುಎಇಯಲ್ಲಿ ಮರಣದಂಡನೆ ಪಡೆದಿದ್ದ ಭಾರತೀಯ ಮಹಿಳೆಗೆ ಗುಂಡು ಹಾರಿಸಿ ಶಿಕ್ಷೆ!

ಏಕೆಂದರೆ ಅಬುಧಾಬಿಯೂ ಸೇರಿದಂತೆ ಗಲ್ಫ್‌ ರಾಷ್ಟ್ರಗಳಲ್ಲಿ ಉದ್ಯೋಗ ಮಾಡುತ್ತಿರುವ ಲಕ್ಷಾಂತರ ಭಾರತೀಯರಿದ್ದಾರೆ. ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಹೋಗಿರುವ ಇವರು ಅಭ್ಯಾಸ ಬಲದಿಂದ ಏನಾದರೂ ಬಾಲ್ಕನಿಯಲ್ಲಿ ಚಡ್ಡಿ, ಟವೆಲ್, ಬಟ್ಟೆ ಅಂತ ಒಣಗಿಸಲು ಹೋದರೆ ದುಡಿದಿದ್ದೆಲ್ಲವನ್ನು ಅಲ್ಲಿ ಕಟ್ಟಬೇಕಾದಂತಹ ದುಸ್ಥಿತಿ ಬರುವುದಂತು ಪಕ್ಕಾ. ಈ ಬಗ್ಗೆ ನೀವೇನಂತಿರಿ ಕಾಮೆಂಟ್ ಮಾಡಿ. 

ಶೀಘ್ರದಲ್ಲೇ ಅಬುಧಾಬಿಯಲ್ಲಿ ವಿಶ್ವದ ಮೊದಲ ಸಂಪೂರ್ಣ AI ಚಾಲಿತ ಸರ್ಕಾರ
 ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕುರಿತು ಹಲವು ಚರ್ಚೆಗಳು ನಡೆಯುತ್ತಿದೆ. ಪರ ವಿರೋಧಗಳು, ಕೆಲಸ ಕಳೆದುಕೊಳ್ಳುವ ಭೀತಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದೆ. ಇದರ ನಡುವೆ ಅಬುಧಾಬಿ ವಿಶ್ವವನ್ನೇ ಚಕಿತಗೊಲಿಸಿದೆ. 2027ರ ವೇಳೆಗೆ ಅಬುಧಾಬಿ ಸಂಪೂರ್ಣ ಎಐ ಚಾಲಿತ ಸರ್ಕಾರ ದೇಶವಾಗಲಿದೆ ಎಂದು ಘೋಷಿಸಿದೆ. ಇದಕ್ಕಾಗಿ 2025-27ರ ರೋಡ್‌ಮ್ಯಾಪ್ ಬಹಿರಂಗಪಡಿಸಿದೆ. ಅಬುಧಾಬಿ ಮಹತ್ವದ ಡಿಜಿಟಲ್ ಸ್ಟ್ರಾಟರ್ಜಿ 2025-27 ಪ್ಲಾನ್ ಘೋಷಿಸಿದೆ. ಇದಕ್ಕಾಗಿ ಬರೋಬ್ಬರಿ AED 13 ಬಿಲಿಯನ್ ಮೊತ್ತವನ್ನು ಮೀಲಿಟ್ಟಿದೆ. ಇದು ಸರ್ಕಾರದ ದಕ್ಷತೆ ಹೆಚ್ಚಿಸಲು ಮಾಡಿರುವ ಯೋಜನೆಯಲ್ಲ, ಇದರ ಜೊತೆಗೆ ಇದು ಭವಿಷ್ಯದ ಪ್ಲಾನ್. ಜಗತ್ತು ಎಐ ಚಾಲಿತ ಸರ್ಕಾರಕ್ಕೆ ಹೊರಳುವಾಗ ಅಬುಧಾಬಿ ಎಲ್ಲರಿಗಿಂತ ಮುಂಚೆ ದಕ್ಷ, ಪಾರದರ್ಶಕ ಹಾಗೂ ಸ್ವಚ್ಚ ಆಡಳಿತ ಎಐ ಮೂಲಕ ನೀಡಲಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ