ಈತನ ದೇಹದಲ್ಲಿ ಖಾಲಿ ಜಾಗ ಇಲ್ಲ: ಎಲ್ಲೆಲ್ಲಾ ಚುಚ್ಚಿಸಿಕೊಂಡವ್ನೆ ನೋಡಿ

Published : Apr 29, 2022, 07:16 PM IST
ಈತನ ದೇಹದಲ್ಲಿ ಖಾಲಿ ಜಾಗ ಇಲ್ಲ: ಎಲ್ಲೆಲ್ಲಾ ಚುಚ್ಚಿಸಿಕೊಂಡವ್ನೆ ನೋಡಿ

ಸಾರಾಂಶ

ಜಗತ್ತಿನ ಅತೀ ಹೆಚ್ಚು ಚುಚ್ಚಿಸಿಕೊಂಡ ವ್ಯಕ್ತಿ ಅಲ್ಲೂ ಬಿಡದೇ ಎಲ್ಲೆಲ್ಲೂ ಚುಚಿಸಿಕೊಂಡವ ಚುಚಿಸಿಕೊಂಡೆ ವಿಶ್ವ ದಾಖಲೆ ಮಾಡಿದ

ಜರ್ಮನಿಯ ವ್ಯಕ್ತಿಯೊಬ್ಬ ತನ್ನ ದೇಹದ ಯಾವ ಭಾಗವನ್ನು ಬಿಡದೇ ಎಲ್ಲಾ ಕಡೆ ಚುಚಿಸಿಕೊಂಡು ಅದರಿಂದಲೇ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಈತ  ಜನನಾಂಗಗಳ ಮೇಲೆಯೇ ಬರೋಬರಿ 278 ಕಡೆ ಚುಚ್ಚಿಸಿಕೊಂಡಿದ್ದಾನಂತೆ. ಈತ ಈಗ ತನ್ನನ್ನು ನೋಡಿದರೆ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾನೆ. 

62 ವರ್ಷದ ಕಂಪ್ಯೂಟರ್ ವಿಜ್ಞಾನಿಯಾಗಿರುವ (computer scientist) ಜರ್ಮನಿಯ (Germany) ರೋಲ್ಫ್ ಬುಚೋಲ್ಜ್ (Rolf Buchholz) ಅವರು ನೂರಾರು ತಮ್ಮ ದೇಹದಲ್ಲೆಲ್ಲಾ ಚುಚ್ಚಿಸಿಕೊಂಡಿದ್ದು, ದೇಹದ ಪೂರ್ತಿ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಕಣ್ಣುಗಳ ಮೇಲೆ ಹುಬ್ಬಗಳ ಮೇಲೆ ಮೂಗು ಬಾಯಿ ಕಿವಿ ಹೀಗೆ ಇವರು ಚುಚ್ಚಿಸಿಕೊಳ್ಳದ ಜಾಗಗಳೇ ಇಲ್ಲ. ಹೀಗೆ ವಿಚಿತ್ರವಾಗಿ ಚುಚ್ಚಿಸಿಕೊಂಡ ನಂತರ ಜನರು ಅವರನ್ನು ನೋಡುವ ನೋಟ ಬದಲಾಗಿದೆ ಎಂದು ಅವರು ಹೇಳಿದರು. ದೇಹದಲ್ಲಿ 516 ಮಾರ್ಪಾಡುಗಳನ್ನು ಹೊಂದಿರುವ ಅವರು ಇದಕ್ಕಾಗಿಯೇ ಗಿನ್ನೆಸ್‌ ದಾಖಲೆ ಪುಟ ಸೇರಿದ್ದಾರೆ. 

ಮೂಗು, ಕಿವಿ ಚುಚ್ಚೋ ಅಲೋಚನೆ ಮಾಡಿದ್ದೀರಾ? ಈ ವಿಷಯ ನೆನಪಿರಲಿ 

ಅವರು 2010 ರಲ್ಲಿ ತಮ್ಮ ದೇಹದಲ್ಲಿ ಅತೀ ಹೆಚ್ಚು ಚುಚ್ಚಿಸಿಕೊಂಡ ಕಾರಣಕ್ಕೆ  ಗಿನ್ನೆಸ್‌ ವಿಶ್ವ ದಾಖಲೆ (Guinness World Record) ಸಂಸ್ಥೆಯಿಂದ ಪರಿಶೀಲಿಸಲ್ಪಟ್ಟರು ಮತ್ತು ನಂತರ 2012 ರಲ್ಲಿ ದೇಹದ ಮಾರ್ಪಾಡುಗಳಿಗಾಗಿ ವಿಶ್ವ ದಾಖಲೆಯ ಕಿರೀಟವನ್ನು ಪಡೆದರು. ಅವರ ಈ ದಾಖಲೆಯನ್ನು ಇಲ್ಲಿಯವರೆಗೆ ಯಾರೂ ಅಧಿಕೃತವಾಗಿ ಮುರಿದಿಲ್ಲ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ರೋಲ್ಫ್ ಈ ಸಾಧನೆಯು ತನಗೆ 'ವಿಶೇಷ' ಎಂದು ಹೇಳಿದರು. ನನ್ನ ಬಳಿ ದಾಖಲೆ ಇರುವುದರಿಂದ, ಜನರು ನನ್ನ ದೇಹದ ಮಾರ್ಪಾಡುಗಳನ್ನು ಸ್ವಲ್ಪ ವಿಭಿನ್ನವಾಗಿ ಕಾಣುತ್ತಾರೆ, ಏಕೆಂದರೆ ಅವರು ನನ್ನನ್ನು ಪುಸ್ತಕದಲ್ಲಿ ನೋಡುತ್ತಾರೆ ಎಂದು ಅವರು ಹೇಳಿದರು.

ನಾಭಿ ಪಿಯರ್ಸಿಂಗ್ ಸೋಂಕಿಗಾಗಬಹುದು ದಾರಿ! 

ಆದ್ದರಿಂದ ನಾನು ಪ್ರಸಿದ್ಧನಾಗಿದ್ದೇನೆ ಮತ್ತು ಜನರು ನನ್ನ ದೇಹದ ಮಾರ್ಪಾಡುಗಳು (body modifications) ಮೊದಲಿಗಿಂತ ಉತ್ತಮವಾಗಿ ಕಾಣುತ್ತಾರೆ. ಈ ಸಾಧನೆ ನನಗೆ ಖುಷಿ ನೀಡಿದರೂ ದಾಖಲೆ ಮಾಡುವುದಕ್ಕಾಗಿ ನಾನಿದನ್ನು ಮಾಡಿಲ್ಲ ಎಂದು ರೋಲ್ಫ್ ಹೇಳಿದರು. ನಾನು ಅದನ್ನು ದಾಖಲೆಗಾಗಿ ಮಾಡಿಲ್ಲ, ಕೊನೆಯಲ್ಲಿ ನನಗೆ ದಾಖಲೆ ಸಿಕ್ಕಿತು. ಆದರೆ ನಾನು ನನಗಾಗಿ ಮಾರ್ಪಾಡು ಮಾಡಿದ್ದೇನೆ. ನಾನು ಮಾರ್ಪಾಡುಗಳನ್ನು ಇಷ್ಟಪಡುತ್ತೇನೆ, ನಾನು ಅದನ್ನು ಚೆನ್ನಾಗಿ ಕಂಡುಕೊಂಡಿದ್ದೇನೆ ಮತ್ತು ನಾನು ಅದನ್ನು ಮಾಡಿದ್ದೇನೆ ಎಂದರು.

ವೀಕ್ಷಕರಿಗೆ ತನ್ನ ಮಾರ್ಪಾಡುಗಳ ಬಗ್ಗೆ ಪ್ರದರ್ಶಿಸಿದ ರೋಲ್ಫ್ ತನ್ನ ಮೊದಲ ಮಾರ್ಪಾಡು ಹೇಗೆ ತನ್ನ ಎಡ ಕಾಲಿನ ಕೆಳಗಿನ ಭಾಗದಲ್ಲಿ ಹಚ್ಚೆಯಿಂದ ಆರಂಭವಾಯಿತು ಎಂಬುದನ್ನು  ವಿವರಿಸಿದರು. ರೋಲ್ಫ್‌ ದೇಹವು ಈಗ ಸಂಪೂರ್ಣವಾಗಿ ಕಪ್ಪು ಮತ್ತು ಬೂದು ಟ್ಯಾಟೂಗಳ ಸಂಗ್ರಹದಲ್ಲಿ ನಿರ್ಮಾಣದಿಂದ ಮುಚ್ಚಲ್ಪಟ್ಟಿದೆ. ಇಷ್ಟೇ ಅಲ್ಲದೇ ರೋಲ್ಫ್ ತನ್ನ ಬೆರಳ ತುದಿಯಲ್ಲಿ ಆಯಸ್ಕಾಂತಗಳನ್ನು ಸ್ಥಾಪಿಸಿದ್ದಾರೆ, ಆದರೆ ತಂತ್ರಜ್ಞಾನವನ್ನು ಬಳಸುವಾಗ ಇದು ಅನಿರೀಕ್ಷಿತ ಪರಿಣಾಮವನ್ನು ಹೊಂದಿದೆ ಎಂಬುದನ್ನು ಅವರು ಒಪ್ಪಿಕೊಂಡರು. ತಮ್ಮ ಈ ಎಲ್ಲಾ ಸಾಧನೆ ಹಿಂದೆ ಯಾವುದೇ ಸ್ಪೂರ್ತಿ ಇಲ್ಲ. ನಾನು ಇದನ್ನು ಮಾಡಿದ್ದೇನೆ ಎಂದು ತೋರಿಸಲು ಮಾತ್ರ ಇದನ್ನು ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ