
ಟೆಲ್ ಅವಿವ್ (ಸೆ.25): ಪರಿಸರ ರಕ್ಷಣೆ ಉದ್ದೇಶದಿಂದ ವಿಶ್ವದ ವಿವಿಧ ಮಹಾನಗರಗಳು ಪರಿಸರಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳತ್ತ ಮುಖ ಮಾಡುತ್ತಿದ್ದರೆ, ಇಸ್ರೇಲ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಅತ್ಯಂತ ವಿನೂತನವಾದ, ವಿಶ್ವದ ಮೊದಲ ಎಲೆಕ್ಟ್ರಿಕ್ ರಸ್ತೆಯನ್ನು ನಿರ್ಮಾಣ ಮಾಡಿದೆ.
ಸಾರ್ವಜನಿಕ ಸಾರಿಗೆ ವಾಹನವಾಗಿರುವ ಬಸ್‌ಗಳು ಚಲಿಸುತ್ತಿರುವಾಗಲೇ ಈ ರಸ್ತೆ ಮೂಲಕ ಚಾಜ್‌ರ್ ಆಗಲಿವೆ. ಹೀಗಾಗಿ ಚಾರ್ಜಿಂಗ್ ಸಮಯ ಉಳಿಯಲಿದೆ.
ಬಾಹ್ಯಾಕಾಶದಲ್ಲೂ ಭಾರತದ ಮೇಲೆ ದಾಳಿಗೆ ಚೀನಾ ವಿಫಲ ಯತ್ನ!
ಟೆಲ್ ಅವಿವ್- ಯಾಫೋ ನಗರಪಾಲಿಕೆಯು ಎಲೆಕ್ಟ್ರಿಯೋನ್ ಎಂಬ ಎಲೆಕ್ಟ್ರಿಕ್ ವಾಹನಗಳ ಕಂಪನಿ ಹಾಗೂ ಡ್ಯಾನ್ ಬಸ್ ಕಂಪನಿ ಜತೆಗೂಡಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದೆ. ಟೆಲ್ ಅವಿವ್‌ನ 1.2 ಮೈಲಿ ಉದ್ದದ ರಸ್ತೆಯೊಂದನ್ನು ಆಯ್ಕೆ ಮಾಡಿಕೊಂಡು ಅಲ್ಲಿ 0.37 ಮೈಲಿ ಉದ್ದದ ರಸ್ತೆಯನ್ನು ಎಲೆಕ್ಟ್ರಿಕ್ ಪಥವಾಗಿ ನಿರ್ಮಾಣ ಮಾಡಲಾಗಿದೆ. ಈ ರಸ್ತೆಯಲ್ಲಿ ಪರೀಕ್ಷೆ, ಪರೀಕ್ಷಾರ್ಥ ಸಂಚಾರವನ್ನು ನಡೆಸಲು ಭರದ ಸಿದ್ಧತೆ ನಡೆಯುತ್ತಿದೆ.
ಹೇಗೆ ಕೆಲಸ ಮಾಡುತ್ತೆ?
- ಟಾರ್ ರಸ್ತೆಯ ಕೆಳಭಾಗದಲ್ಲಿ ತಾಮ್ರದ ತಂತಿ ಅಳವಡಿಸಿರಲಾಗುತ್ತದೆ
- ಬಸ್‌ಗಳ ಕೆಳಭಾಗದಲ್ಲಿ ರಿಸೀವರ್ ಅಳವಡಿಕೆಯಾಗಿರುತ್ತದೆ
- ವಿದ್ಯುತ್ ಗ್ರಿಡ್‌ನಿಂದ ರಸ್ತೆ ಕೆಳಭಾಗದ ತಾಮ್ರಕ್ಕೆ ವಿದ್ಯುತ್ ಹರಿಸಲಾಗುತ್ತದೆ
- ವಾಹನದಲ್ಲಿರುವ ರಿಸೀವರ್ ಆ ವಿದ್ಯುಚ್ಛಕ್ತಿಯನ್ನು ಬ್ಯಾಟರಿಗೆ ವರ್ಗಾಯಿಸುತ್ತದೆ
- ವಾಹನ ಚಾಲನೆಯಲ್ಲಿರುವಾಗಲೇ ಈ ಪ್ರಕ್ರಿಯೆ ನಡೆಯುತ್ತದೆ. ಬಸ್ ಚಲಿಸುತ್ತದೆ
ಎಲ್ಲಿದೆ ಈ ರಸ್ತೆ?
ಇಸ್ರೇಲ್‌ನ ಟೆಲ್ ಅವಿವ್‌ನ ವಿಶ್ವವಿದ್ಯಾಲಯ ರೈಲು ನಿಲ್ದಾಣದಿಂದ ರಮಾತ್ ಅವಿವ್‌ನಲ್ಲಿರುವ ಕ್ಲಾಟ್‌್ಜಕಿನ್ ಟರ್ಮಿನಲ್‌ವರೆಗೆ 1.2 ಮೈಲುದ್ದದ ರಸ್ತೆ ಇದೆ. ಆ ಪೈಕಿ 0.37 ಮೈಲಿ ರಸ್ತೆಯನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ