ವರ್ಕ್ ಫ್ರಂ ಹೋಮ್ ; ದೊಡ್ಡ ಗುಟ್ಟು ಹೇಳಿದ ಬಿಲ್ ಗೇಟ್ಸ್

By Suvarna NewsFirst Published Sep 24, 2020, 4:05 PM IST
Highlights

ಕೊರೋನಾ ಮುಗಿದರೂ ವರ್ಕ್ ಫ್ರಂ ಹೋಂ ಮುಂದುವರಿಯಲಿದೆ/ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲೇನಿಯರ್ ಬಿಲ್ ಗೇಟ್ಸ್ ಅಭಿಪ್ರಾಯ/ ಸಾಫ್ಟವೇರ್ ಕಂಪನಿಗಳೀಗೆ ಲಾಭದಾಯಕವಾಗಿದೆ

ಮುಂಬೈ( ಸೆ. 24)  ಕೊರೋನಾ ಕಾರಣಕ್ಕೆ ಅನಿವಾರ್ಯವಾಗಿ ಜಾರಿಯಾದ ವರ್ಕ್ ಫ್ರಂ ಹೋಂ ಕಂಪನಿಗಳಿಗೆ ಲಾಭದಾಯಕವಾಗಿ ಪರಿಣಮಿಸಿದ್ದು ಕೊರೋನಾ ರಣಕೇಕೆ ಮುಗಿದ ನಂತರವೂ ಮುಂದುವರಿಯಲಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲೇನಿಯರ್ ಬಿಲ್ ಗೇಟ್ಸ್ ಅಭಿಪ್ರಾಯ ಪಟ್ಟಿದ್ದಾರೆ. 

ವಿಶ್ವದ ಹಲವು ಭಾಗದಲ್ಲಿ ಇಂದಿಗೂ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಲ್ಲಿದೆ.  ಅತ್ಯುತ್ತಮ ರೀತಿಯಲ್ಲಿ ವರ್ಕ್ ಫ್ರಂ ಹೋಂ ಕೆಲಸ ಮಾಡುತ್ತಿದೆ ಎಂದು ಗೇಟ್ಸ್ ಹೇಳಿದ್ದಾರೆ.

ಕ್ಯಾಮರಾ ಮುಂದೆ ಬೆತ್ತಲೆ ಓಡಾಡ..ವರ್ಕ್ ಫ್ರಾಂ ಹೋಂ ಎಡವಟ್ಟು

ಕೊರೋನಾ ರಣಕೇಕೆ ಮುಗಿದ ಮೇಲೆ ಸಿಬ್ಬಂದಿ ಕಚೇರಿಯಲ್ಲಿ ಎಷ್ಟು ಸಮಯ ಕಳೆಯಬೇಕು ಎಂಬುದನ್ನು ಮತ್ತೊಮ್ಮೆ ಆಲೋಚನೆ ಮಾಡಬೇಕಲಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.  20..30..40  ಶೇ ಸಮಯವೋ ? ಅಥವಾ ಕಂಪನಿಗಳು ಶೇ. 50 ರಷ್ಟು ಕಾಲವನ್ನು ಮೀಸಲಿಡಲು ಹೇಳುತ್ತವೆಯೋ? ನೋಡಬೇಕು ಎಂದಿದ್ದಾರೆ.

ಸಾಫ್ಟವೇರ್ ಇಂಜಿನಿಯರಿಂಗ್ ಹಿಂದೆಂದಿಗಿಂತಲೂ ಜಾಸ್ತಿ ಬೆಳವಣಿಗೆ ಕಂಡಿದೆ.  ಮಕ್ಕಳು ಮನೆಯಲ್ಲಿ ಇದ್ದರೆ ಬೇರೆ ಬೇರೆ ಸವಾಲುಗಳು ಎದುರಾಗುತ್ತವೆ. ಮಹಿಳೆಯರ ವಿಚಾರದಲ್ಲಿಯೂ ಸವಾಲುಗಳಿವೆ ಎಂದಿದ್ದಾರೆ.

ಇನ್ನೊಂದು ಕಡೆ ಅಜೀಂ ಪ್ರೇಂಜಿ, ಟಾಟಾದಂಥವರು ಫೀಲ್ಡ್ ನಲ್ಲಿ ಕೆಲಸ ಮಾಡಬೇಕಾಗಿದ್ದು ಡ್ಯಾಮೇಜ್ ಕಂಟ್ರೋಲ್ ಗೆ ಕ್ರಮ ತೆಗೆದುಕೊಂಡಿದ್ದಾರೆ ಎಂಬುದನ್ನು ಉಲ್ಲೇಖ ಮಾಡಿದ್ದಾರೆ. 

click me!