ಮಹಿಳೆಯೊಬ್ಬಳು ಬೆಳಿಗ್ಗೆ ಎದ್ದಾಗ ಹಾಸಿಗೆಯಲ್ಲಿ ಹೆಬ್ಬಾವು ನೋಡಿ ಬೆಚ್ಚಿಬಿದ್ದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಜನರು ಆಶ್ಚರ್ಯ ಮತ್ತು ಭಯದಿಂದ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಮುದ್ದಾದ ಸಾಕು ಪ್ರಾಣಿಗಳಾದ ಬೆಕ್ಕು ನಾಯಿ ಮುಂತಾದವುಗಳನ್ನು ನೋಡಿಕೊಂಡು ಮುಂಜಾನೆ ಎಚ್ಚರಗೊಳ್ಳುವುದು ಹೆಚ್ಚಿನ ಪ್ರಾಣಿ ಪ್ರಿಯರು ಹೊಂದಿರುವ ಇಷ್ಟದ ಹವ್ಯಾಸ. ಇನ್ನು ಕೆಲವರು ದೇವರ ಫೋಟೋಗಳನ್ನು, ತಮ್ಮದೇ ಕೈಗಳನ್ನು ತಮಗೆ ಇಷ್ಟವಾದ ಮನೆಯ ಸದಸ್ಯರನ್ನು ಬೆಳಗ್ಗೆ ಎದ್ದ ತಕ್ಷಣ ನೋಡಿ ಖುಷಿ ಪಡುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ಮುಂಜಾನೆ ನಿದ್ದೆಯಿಂದ ಎದ್ದವಳು ಬೆಡಲ್ಲಿದ್ದ ಜೀವವನ್ನು ನೋಡಿ ತನ್ನ ಜೀವ ಬಿಡುವುದೊಂದು ಬಾಕಿ. ಹಾಗಿದ್ರೆ ಬೆಡಲ್ಲಿದ್ದಿದ್ದೇನು ಬುಸ್ ಬುಸ್ ಹಾವು.
ಹೌದು, ಮಹಿಳೆಯೊಬ್ಬಳು ಹಾಸಿಗೆಯಲ್ಲಿ ಇದೇನು ಇದ್ದಕ್ಕಿದ್ದಂತೆ ತಣ್ಣನೆ ಅನಿಸುತ್ತಿದೆ ಎಂದು ಧುತ್ತನೇ ಎದ್ದು ಕುಳಿತಿದ್ದಾಳೆ. ಹಾಗೆ ಎದ್ದು ಕೂತುವಳಿಗೆ ಅಲ್ಲಿ ಕಂಡಿದ್ದು ಬೃಹತ್ ಗಾತ್ರದ ಹೆಬ್ಬಾವು. ಹಾಸಿಗೆಯಿಂದ ಧುತ್ತನೇ ಎದ್ದವಳೇ ಹಾವನ್ನು ನೋಡಿ ಭಯಗೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಹಾವು ಮಾತ್ರ ಹಾಸಿಗೆಯಿಂದ ಮೆಲ್ಲನೆ ತೆವಳುತ್ತಾ ಕೆಳಗಿಳಿದು ಬೇರೆಡೆ ಹೋಗಿದೆ. ಟ್ವಿಟ್ಟರ್‌ನಲ್ಲಿ ಅಮೇಜಿಂಗ್ ನೇಚರ್ ಎಂಬ ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವಿಡಿಯೋ ನೋಡಿದ ಅನೇಕರು ಭಯದಿಂದ ಅಚ್ಚರಿಗೊಂಡಿದ್ದಾರೆ. 19 ಸೆಕೆಂಡ್‌ಗಳ ವಿಡಿಯೋದಲ್ಲಿ ಮಹಿಳೆ ಮೆಲ್ಲನೆ ತಲೆ ಹೊರಳಿಸುತ್ತಾ ಹಾವಿನಂತೆ ನೋಡುತ್ತಾಳೆ. ಕೂಡಲೇ ಆಕೆಗೆ ಏನೋ ಅಪಾಯಕಾರಿಯಾಗಿರುವುದರ ಅರಿವಾಗಿದ್ದು, ಧುತ್ತನೇ ಎದ್ದು ಕುಳಿತುಕೊಂಡಿದ್ದಾಳೆ.
ಹಾವನ್ನು ಹಗ್ಗದಂತೆ ಬಳಸಿ ಸ್ಕಿಪ್ಪಿಂಗ್ ಆಡಿದ ಮಕ್ಕಳು: ಬೈಕೊಳಗೆ ನುಗ್ಗಿದ ಹಾವನ್ನು ಹಿಡಿದೆಳೆದ ಬಾಲಕಿ: ವೀಡಿಯೋ
ವೀಡಿಯೋ ಶೇರ್ ಮಾಡಿದ ಅಮೇಜಿಂಗ್ ನೇಚರ್, ನೀವು ಮುಂಜಾನೆ ಎದ್ದಾಗ ಇದನ್ನು ನೋಡಿದರೆ ಹೇಗನಿಸಬಹುದು ಎಂದು ಪ್ರಶ್ನೆ ಮಾಡಿದ್ದಾರೆ. ನಿನ್ನೆಯಷ್ಟೇ ಪೋಸ್ಟ್ ಮಾಡಿದ ಈ ವೀಡಿಯೋವನ್ನು ಈಗಾಗಲೇ ಒಂದು ಮಿಲಿಯನ್ ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅನೇಕರು ಈ ವಿಡಿಯೋವನ್ನುಎಐ ಎಂದು ಹೇಳಿದ್ದಾರೆ. ಈ ತಮಾಷೆಯ ಹಿಂದೆ ಯಾರಿದ್ದಾರೆ ಎಂಬುದು ನನ್ನ ಪ್ರಶ್ನೆ ಎಂದು ಒಬ್ಬ ಬಳಕೆದಾರರು ಕೇಳಿದ್ದಾರೆ. 'ಇದು ವಿಷಕಾರಿಯಲ್ಲ, ಆದ್ದರಿಂದ ನಾನು ನನ್ನ ಫೋನ್ ಅನ್ನು ಹೊರತೆಗೆದು ಅದನ್ನು ಚಿತ್ರೀಕರಿಸುವುದನ್ನು ಊಹಿಸಿಕೊಳ್ಳುತ್ತೇನೆ, ನಂತರ ಈ ಸೌಂದರ್ಯವನ್ನು ನೋಡಿಕೊಳ್ಳಲು ನನ್ನ ಹಾವು ಹಿಡಿಯುವ ಸ್ನೇಹಿತನಿಗೆ ಕರೆ ಮಾಡುತ್ತೇನೆ. ಆದರೆ.. ವಾಸ್ತವದಲ್ಲಿ.. ನಾನು ಮಾಡುವ ಮೊದಲ ಕೆಲಸವೆಂದರೆ ಓಡುವುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಅಂದಹಾಗೆ ಈ ವಿಡಿಯೋ ನೋಡಿದ ನಿಮಗೆ ಏನನಿಸಿತು. ನೀವು ಈ ಸ್ಥಿತಿಯಲ್ಲಿದ್ರೆ ಏನು ಮಾಡಬಹುದು ಕಾಮೆಂಟ್ ಮಾಡಿ.
ಅಪರೂಪಕ್ಕೆ ಎಸಿ ಕೂಲರ್ ಆನ್ ಮಾಡಿದವನಿಗೆ ಆಘಾತ: ಒಳಗಿತ್ತು ಹಾವಿನ ದೊಡ್ಡ ಸಂಸಾರ
ವೈರಲ್ ವಿಡಿಯೋ ಇಲ್ಲಿದೆ ನೋಡಿ
What would you do if you wake up to this?😱 pic.twitter.com/GkgV5Hr1ui
— Nature is Amazing ☘️ (@AMAZlNGNATURE)