ಹುಲಿಯ ಖಾಸಗಿ ಅಂಗಕ್ಕೆ ಕೈ ಹಾಕಿದ ಯುವತಿ/ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟೀಕೆ/ ಥೈಲಾಂಡ್ ಜೂನಲ್ಲಿಯ ಘಟನೆ/ ಯುವತಿ ವಿರುದ್ಧ ಕ್ರಮ ತೆಗೆದುಕೊಳ್ಳಿ
ಬ್ಯಾಂಕಾಕ್ (ಸೆ.02) ಇವಳಿಗೆ ಅದೆ ಏನು ಬಂದಿತ್ತೋ ಕೇಡುಕಾಲ. ಹುಲಿಯ ಖಾಸಗಿ ಅಂಗಕ್ಕೆ ಕೈ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗಿಯೇ ಬೈಸಿಕೊಳ್ಳುತ್ತಿದ್ದಾಳೆ. ಥಾಯ್ಲೆಂಡ್ನ ಪ್ರವಾಸಿಗಳೊಬ್ಬಳು ಹುಲಿಯ ಜನನೇಂದ್ರಿಯ ಸ್ಪರ್ಶ ಮಾಡಿದ್ದಾಳೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಿನ್ನ ಭಿನ್ನ ಪ್ರತಿಕ್ರಿಯೆ ಬರುತ್ತಲೇ ಇದೆ.
ಉತ್ತರ ಥಾಯ್ಲೆಂಡ್ನ ಚೈಯಾಂಗ್ ಮೈ ನಗರದಲ್ಲಿರುವ ಟೈಗರ್ ಕಿಂಗ್ಡಮ್ ಜೂಗೆ ಪ್ರವಾಸಿಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಪ್ರಸಂಗ ಜರುಗಿದೆ. ಹುಲಿಯ ವೃಷಣಗಳಿಗೆ ಕೈಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಟೀಕೆಗೆ ಗುರಿಯಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಯುವತಿಯ ಮೈ-ಕೈ ಮುಟ್ಟಿದ ಮುದುಕ
ಆಗಸ್ಟ್ 26ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು ಯುವತಿಯನ್ನು ವಾರಸ್ಚಯ ಅಕ್ಕರಾಚೈಯಪಸ್ ಎಂದು ಗುರುತಿಸಲಾಗಿದ್ದು ನೆಟ್ಟಿಗರು ಈಕೆ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.
ಥೈಲಾಂಡಿನ ಟೈಗರ್ ಕಿಂಗ್ ಡಮ್ ಜೂದಲ್ಲಿ ಹುಲಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಇದೆ. ಆದರೆ ಈ ಯುವತಿ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ಟೈಗರ್ ಕಿಂಗ್ ಡಮ್ ಮುಖ್ಯಸ್ಥ ಜೂಕ್ ಪೀಯರ್ ಸಹ ಘಟನೆ ಬಗ್ಗೆ ಕಮೆಂಟ್ ಮಾಡಿದ್ದು, ಈ ರೀತಿ ವೃಷಣಗಳನ್ನು ಸ್ಪರ್ಶ ಮಾಡಲು ನಮ್ಮಲ್ಲಿ ಅವಕಾಶ ಇಲ್ಲ, ಇನ್ನು ಮುಂದೆ ಇಂಥ ಘಟನೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
ಯುವತಿ ಸಹ ಪ್ರತಿಕ್ರಿಯೆ ನೀಡಿದ್ದು ನಾನೊಬ್ಬಳು ಪ್ರಾಣಿ ಪ್ರಿಯೆ, ಹುಲಿಗೆ ಹಿಂಸೆ ನೀಡಲು ಹೀಗೆಲ್ಲ ಮಾಡಿಲ್ಲ ಎಂದಿದ್ದಾರೆ.
เจหวงพุง 🤓🥴🐯💓
Posted by on Wednesday, 26 August 2020