ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ

Published : Dec 10, 2025, 04:59 PM IST
woman got severe health issues After Taking Weight Loss Injections

ಸಾರಾಂಶ

dangers of slimming injections: ತೂಕ ಇಳಿಕೆ ಮಾಡುವುದಕ್ಕಾಗಿ ಇಂಜೆಕ್ಷನ್ ಮೊರೆ ಹೋದ ಮಹಿಳೆಯೊಬ್ಬರು ತೂಕದ ಜೊತೆಗೆ ತಮ್ಮ ಆರೋಗ್ಯವನ್ನು ಕೂಡ ಕಳೆದುಕೊಂಡಿದ್ದು, ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಘಟನೆ ನಡೆದಿದೆ. 

ತೂಕ ಇಳಿಕೆಯ ಇಂಜೆಕ್ಷನ್ ಪಡೆದವಳಿಗೆ ತೂಕದ ಜೊತೆಗೆ ಆರೋಗ್ಯವೂ ಹೋಯ್ತು:

ತೂಕ ಇಳಿಕೆ ಮಾಡಿಕೊಂಡು ಸ್ಲಿಮ್ ಆಗಿ ಕಾಣಬೇಕು ಎಂಬುದು ಹಲವು ಹೆಣ್ಣು ಮಕ್ಕಳ ಬಯಕೆ. ಇದಕ್ಕಾಗಿ ಈ ಹರೆಯದ ಹುಡುಗಿಯರು ಮಾಡದ ಡಯಟ್‌ಗಳಿಲ್ಲ ಸೌಂದರ್ಯ ಹಾಗೂ ಆರೋಗ್ಯ ಪ್ರಜ್ಞೆ ಹೆಚ್ಚು ಇರುವ ಅನೇಕರು ಹಲವು ರೀತಿಯ ಡಯಟ್‌ಗಳನ್ನು ಮಾಡುತ್ತಾರೆ. ವಿವಿಧ ರೀತಿಯ ಜ್ಯೂಸ್‌ಗಳನ್ನು ಮಾಡಿ ಕೊಡಿಯುತ್ತಾರೆ. ಅನ್ನವನ್ನೇ ತಿನ್ನದೇ ಬರೀ ಚಪಾತಿ, ಮಿಲೆಟ್ಸ್, ರಾಗಿ ಮಾತ್ರವನ್ನೇ ತಿನ್ನುತ್ತಾರೆ. ಹೀಗೆ ಕೆಲವರು ವೈದ್ಯರ ಸಲಹೆ ಪಡೆದು ಮತ್ತೆ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಬರುವ ವೀಡಿಯೋಗಳ ಮಾಹಿತಿ ಪಡೆದು ಡಯಟ್ ಮಾಡುತ್ತಾರೆ. ಇನ್ನೂ ಕೆಲವರು ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗುತ್ತಾರೆ. ಆದರೆ ಚೀನಾದಲ್ಲಿ ಒಬ್ಬರು ಮಹಿಳೆ ತೂಕ ಇಳಿಕೆಗಾಗಿ ಚುಚ್ಚುಮದ್ದನ್ನು ಪಡೆದಿದ್ದಾರೆ. ಆದರೆ ಈ ಚುಚ್ಚುಮದ್ದು ಅಥವಾ ಇಂಜೆಕ್ಷನ್ ಪಡೆದ ನಂತರ ಅವರ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದ್ದು, ತೀವ್ರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಚೀನಾದ, ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದ್ದು, ಚೀನಾದ 28 ವರ್ಷದ ಮಹಿಳೆಯೊಬ್ಬರು ತೂಕ ಇಳಿಗೆ ಇಂಜೆಕ್ಷನ್ ಪಡೆದುಕೊಂಡಿದ್ದು, ಇದಕ್ಕಾಗಿ ಅವರು ಪ್ರತಿ ಚುಚ್ಚುಮದ್ದಿನಿಂದ 3.5 ಕೆಜಿ ತೂಕ ಇಳಿಸುವ ಭರವಸೆ ನೀಡಲಾಗಿತ್ತು. ಈ ತೂಕ ಇಳಿಸುವ ಚಿಕಿತ್ಸಾ ಪ್ಯಾಕೇಜ್‌ಗಾಗಿ ಅವರು $130 ಯುಎಸ್ ಡಾಲರ್ ಪಾವತಿ ಮಾಡಿದ್ದರು. ಆದರೆ ಇಂಜೆಕ್ಷನ್ ತೆಗೆದುಕೊಂಡ ನಂತರ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿದೆ. ಅವರಿಗೆ ರಕ್ತ ವಾಂತಿ ಸೇರಿದಂತೆ ತೀವ್ರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಜಿಯಾಂಗ್ಸು ಪ್ರಾಂತ್ಯದ ಸುಝೌವಿನ ನಿವಾಸಿ ಚೆನ್ ಎಂಬುವವರೇ ಹೀಗೆ ತೂಕ ಇಳಿಕೆಗೆ ಇಂಜೆಕ್ಷನ್ ಪಡೆದ ಬಳಿಕ ಅನಾರೋಗ್ಯಕ್ಕೆ ತುತ್ತಾದ ಮಹಿಳೆ. ಈಕೆ ತನ್ನ ಸ್ನೇಹಿತೆಯ ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮ ಪೋಸ್ಟ್‌ನಲ್ಲಿ ತೂಕ ಇಳಿಕೆಯ ಚುಚ್ಚುಮದ್ದಿನ ಜಾಹೀರಾತನ್ನು ಗಮನಿಸಿದ್ದಾಳೆ. ನಂತರ ಅವಳು ಮೂರು ಇಂಜೆಕ್ಷನ್‌ಗಳಿಗೆ 900 ಯುವಾನ್ (US $130) ಹಣವನ್ನು ಪಾವತಿಸಿದ್ದಾಳೆ, ಅದು ಸಂಪೂರ್ಣ ಚಿಕಿತ್ಸಾ ಪ್ಯಾಕೇಜ್ ಆಗಿತ್ತು.

ಇದನ್ನೂ ಓದಿ: ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ

ವರದಿಯ ಪ್ರಕಾರ, ಅವರಿಗೆ ಶಿಫಾರಸು ಮಾಡಿದ ಅರ್ಧದಷ್ಟು ಪ್ರಮಾಣದ ಔಷಧಿಯನ್ನು ಮಾತ್ರ ಇಂಜೆಕ್ಟ್ ಮಾಡಲಾಗಿತ್ತು. ಅಷ್ಟರಲ್ಲೇ ಅವರು ಅದರ ಅಡ್ಡಪರಿಣಾಮವನ್ನು ಅನುಭವಿಸಿದರು. ನಾಲ್ಕು ದಿನಗಳಲ್ಲಿ ಅವರು 5 ಕೆಜಿ ತೂಕ ಕಳೆದುಕೊಂಡಿದ್ದು, ಅದರ ಜೊತೆಗೆ ಶೀಘ್ರದಲ್ಲೇ ಹಸಿರು ಮತ್ತು ಹಳದಿ ಬಣ್ಣದ ವಾಂತಿಯಾಗುವುದು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಯ ಲಕ್ಷಣಗಳು ಕಾಣಿಸಿಕೊಂಡವು, ಈ ವಾಂತಿಯೂ ದೇಹದ ಪಿತ್ತರಸ ಮತ್ತು ಹೊಟ್ಟೆಯ ಒಳಪದರಕ್ಕಾದ ಹಾನಿಯನ್ನು ಸೂಚಿಸುತ್ತದೆ.

ಚೆನ್ ಅವರ ಸ್ಥಿತಿ ನಂತರದಲ್ಲಿ ಮತ್ತಷ್ಟು ಹದಗೆಟ್ಟಿದ್ದು, ಅವರು ರಕ್ತವಾಂತಿ ಮಾಡುವುದಕ್ಕೆ ಶುರು ಮಾಡಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಅಲ್ಲಿ ತಪಾಸಣೆ ಮಾಡಿದ ವೈದ್ಯರು ಅವರ ಆರೋಗ್ಯಕ್ಕೆ ತೀವ್ರ ಹಾನಿಯಾಗಿದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೇ ಒಂದು ವೇಳೆ ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ಬಯಸಿದ್ದಲ್ಲಿ ಮುಂದಿನ ಒಂದು ವರ್ಷದವರೆಗೂ ಅದಕ್ಕಾಗಿ ಕಾಯುವಂತೆ ಸೂಚಿಸಿದ್ದಾರೆ.

ಮೊದಲ ಮೂರು ದಿನಗಳಲ್ಲಿ, ನಾನು ನಿಜವಾಗಿಯೂ ದಿನಕ್ಕೆ ಒಂದು ಕಿಲೋ ಗ್ರಾಂ ತೂಕ ಇಳಿಸಿಕೊಂಡೆ. ಕೇವಲ ನಾಲ್ಕು ದಿನಗಳಲ್ಲಿ ನಾನು ಒಟ್ಟು 5 ಕೆಜಿ ತೂಕ ಇಳಿಸಿಕೊಂಡೆ. ಆದರೆ 4ನೇ ದಿನ, ನಾನು ಹಸಿರು ಮತ್ತು ಹಳದಿ ದ್ರವಗಳನ್ನು ವಾಂತಿ ಮಾಡಲು ಪ್ರಾರಂಭಿಸಿದೆ. ಆಸ್ಪತ್ರೆಯಲ್ಲಿ, ಅವರು ನನಗೆ ಪಿತ್ತರಸದ ಸಮಸ್ಯ ಎಂದರು ಆದರೆ ನನ್ನ ಹೊಟ್ಟೆಯ ಒಳಪದರವು ಈಗಾಗಲೇ ಸುಟ್ಟುಹೋಗಿತ್ತು. ಎಲೆಕ್ಟ್ರೋಕಾರ್ಡಿಯೋಗ್ರಾಮ್‌ಗಾಗಿ ಮಲಗಿದ್ದಾಗ, ಇದ್ದಕ್ಕಿದ್ದಂತೆ ರಕ್ತ ವಾಂತಿ ಮಾಡಿಕೊಂಡೆ. ನನ್ನ ಜೀರ್ಣಾಂಗ ವ್ಯವಸ್ಥೆ ಸಂಪೂರ್ಣ ಹಾನಿಗೊಳಗಾಗಿತ್ತು ಮತ್ತು ಈಗಾಗಲೇ ರಕ್ತಸ್ರಾವವಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ

ಆ ಸಮಯದಲ್ಲಿ, ನನ್ನ ನಾಡಿಮಿಡಿತ ನಿಂತುಹೋಗಿತ್ತು. ನನಗೆ ನನ್ನ ದೇಹದಿಂದ ರಕ್ತ ತೆಗೆದಿದ್ದು,ನಂತರದ ತುರ್ತು ಕಾರ್ಯವಿಧಾನಗಳು ಮತ್ತು ಹೃತ್ಕರ್ಣದ ಕಂಪನ ಚಿಕಿತ್ಸೆ(atrial fibrillation treatment)ನೀಡಿದ್ದು, ಇದು ಯಾವುದರ ಬಗ್ಗೆಯೂ ತಿಳಿದಿರಲಿಲ್ಲ. ಪ್ರಜ್ಞೆ ಮರಳಿದ ನಂತರವೇ ನನಗೆ ಅದರ ಬಗ್ಗೆ ತಿಳಿಯಿತು. ನಾನು ಬಹಳ ಗಂಭೀರ ಆರೋಗ್ಯ ಸ್ಥಿತಿಯ ಸ್ವೀಕರಿಸಲು ತುಂಬಾ ಹತ್ತಿರ ಬಂದಿದ್ದೇನೆ ಎಂದು ನನ್ನ ಬಾಯ್‌ಫ್ರೆಂಡ್ ನನಗೆ ಹೇಳಿದನು ಎಂದು ಆಕೆ ಹೇಳಿಕೊಂಡಿದ್ದಾಳೆ.

ವರದಿಯ ಪ್ರಕಾರ, ತೂಕ ಇಳಿಸುವ ಚುಚ್ಚುಮದ್ದುಗಳು ಅನಿಯಂತ್ರಿತವಾಗಿದ್ದು, ಅಕ್ರಮವಾಗಿ ಸೆಮಾಗ್ಲುಟೈಡ್ ಅನ್ನು ಒಳಗೊಂಡಿವೆ ಎಂದು ಕಂಡುಬಂದಿದೆ. ಯುವತಿ ಮಾಡಿದ ಪೋಸ್ಟ್ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಇಂತಹ ಉತ್ಪನ್ನಗಳ ಬಗ್ಗೆ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಒಟ್ಟಿನಲ್ಲಿ ತೂಕ ಇಳಿಕೆ ಮಾಡಲು ಹೋಗಿ ಯುವತಿಯ ಆರೋಗ್ಯವೇ ಹೋಗಿದ್ದು, ಏನೋ ಮಾಡುವುದಕ್ಕೆ ಹೋಗಿ ಇದ್ದಿದ್ದನ್ನು ಕಳೆದುಕೊಂಡಂತಾಗಿದೆ. ತೂಕ ಇಳಿಕೆ ಮಾಡುವುದಕ್ಕೆ ಅಪಾಯಕಾರಿ ಸಾಹಸ ಮಾಡುವ ಅನೇಕರಿಗೆ ಈ ಘಟನೆಯೊಂದು ಎಚ್ಚರಿಕೆಯ ಉದಾಹರಣೆಯಾಗಿದೆ. ದಪ್ಪವಿದ್ದರೂ ಸರಿಯಾದ ಆರೋಗ್ಯವಿದ್ದರೆ ಅದಕ್ಕಿಂತ ದೊಡ್ಡ ಆಸ್ತಿ ಬೇರೆ ಇಲ್ಲ. ಆರೋಗ್ಯದ ಮೌಲ್ಯ ಏನು ಎಂದು ತಿಳಿಯಬೇಕಾದರೆ ಆಸ್ಪತ್ರೆಯಲ್ಲಿ ಎರಡು ದಿನ ಕಳೆದು ನೋಡಿ. ಅದರ ಬದಲು ಇರುವ ಇಲ್ಲದ ಸಾಹಸ ಮಾಡಲು ಹೋಗಿ ಇರುವ ಆರೋಗ್ಯವನ್ನು ಕಳೆದುಕೊಂಡರೆ ಜೀವಮಾನ ಪೂರ್ತಿ ವ್ಯಥೆ ಪಡಬೇಕಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ ನೆರೆಹೊರೆಯಲ್ಲಿ ಯುದ್ಧದ ಭೀತಿ, ರಷ್ಯಾ-ಚೀನಾ ಪರ; ಯುಎಸ್‌ನಿಂದ B-52 ಬಾಂಬರ್‌ ಹಾರಾಟ!
ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ