ಜಿರಾಫೆಗೆ ಆಹಾರ ತಿನ್ನಿಸಿದ ಮಹಿಳೆ: ವಿಡಿಯೋ ವೈರಲ್

Published : May 03, 2022, 04:00 PM IST
ಜಿರಾಫೆಗೆ ಆಹಾರ ತಿನ್ನಿಸಿದ ಮಹಿಳೆ: ವಿಡಿಯೋ ವೈರಲ್

ಸಾರಾಂಶ

ಜಿರಾಫೆಗೆ ಆಹಾರ ತಿನ್ನಿಸಿದ ಮಹಿಳೆ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ನೈರೋಬಿಯ ಈ ವಿಡಿಯೋ

ಬೆಕ್ಕು ನಾಯಿ ಹಸು ಕರುಗಳಿಗೆ ಜನ ಆಹಾರ ತಿನ್ನಿಸುವುದು ಸಾಮಾನ್ಯ. ಆದರೆ ಮರದಷ್ಟು ಎತ್ತರ ಇರುವ ಜಿರಾಫೆಗಳಿಗೆ ಆಹಾರ ತಿನ್ನಿಸುವುದು ಹೇಗೆ. ಜಿರಾಫೆಗೆ ಆಹಾರ ತಿನ್ನಿಸಲು ಏಣಿ ಏರಬೇಕಷ್ಟೇ ಎನಿಸುವುದು ಸಾಮಾನ್ಯ ಅಲ್ಲವೇ? ಆದರೆ ಇಲ್ಲೊಬ್ಬರು ಮಹಿಳೆ ಹೊಟೇಲ್‌ನ ಬಾಲ್ಕನಿಯಿಂದ ಮೂರು ಜಿರಾಫೆಗಳಿಗೆ ಆಹಾರ ತಿನ್ನಿಸಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಟ್ಟಿಂಗ್ ಬಿಡನ್‌ ಎಂಬ ಟ್ವಿಟ್ಟರ್‌ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಹೊಟೇಲ್‌ನ ಬಾಲ್ಕನಿಯಲ್ಲಿ ಕುಳಿತು ಮೂರು ಜಿರಾಫೆಗಳಿಗೆ ಆಹಾರ ತಿನ್ನಿಸುತ್ತಿದ್ದಾರೆ. ನೈರೋಬಿಯ (Nairobi) ವಿಡಿಯೋ ಇದಾಗಿದೆ. ಜಿರಾಫೆ ಮ್ಯಾನರ್ ಹೊಟೇಲ್ ಇದಾಗಿದೆ.

ಈ ವಿಡಿಯೋವನ್ನು 2.8  ಲಕ್ಷ ಜನ ವೀಕ್ಷಿಸಿದ್ದು,  18,000 ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಇದಕ್ಕೆ ನೋಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು 6 ವರ್ಷಗಳ ಹಿಂದೆ ಜಿರಾಫೆ ಮ್ಯಾನರ್‌ಗೆ ಹೋಗಿದ್ದೆ. ಅತಿಥಿಗಳು ಜಿರಾಫೆಗಳಿಗೆ ಆಹಾರ ತಿನ್ನಿಸುವ ಸಲುವಾಗಿ ಇಲ್ಲಿ ಈ ಗೋಲಿಗಳ ಕಡಾಯಿಗಳನ್ನು ಇಡಲಾಗಿದೆ. ಜಿರಾಫೆಗಳಿಗೆ ಬೆಳಗ್ಗೆ ಮತ್ತು ಮಧ್ಯಾಹ್ನದ ನಂತರ  ಆಹಾರವನ್ನು ನೀಡಲು ಮತ್ತೊಂದು ಅವಕಾಶವನ್ನು ಪಡೆಯುತ್ತೀರಿ ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ. ಈ ಜಿರಾಫೆಗಳ ವಿಚಿತ್ರ ಹಾಗೂ ವಿಶಿಷ್ಟ ನೋಟದಿಂದ ಜನರು ಇಲ್ಲಿ ಜಿರಾಫೆಗಳನ್ನು ನೋಡಲು ಇಷ್ಟಪಡುತ್ತಾರೆ. 

ಬನ್ನೇರುಘಟ್ಟ; ಆಹಾರ ತಿನ್ನಲು ಹೋದ ಜಿರಾಫೆ ಉಸಿರುಕಟ್ಟಿ ಸಾವು

ಆಹಾರ ತಿನ್ನಲು ಹೋದ ಜಿರಾಫೆ ಉಸಿರುಕಟ್ಟಿ ಸಾವು

ಆಹಾರ ತಿನ್ನಲು ಕುತ್ತಿಗೆಯನ್ನು ಹೊರ  ಹಾಕಿದ್ದ ಜಿರಾಫೆ ಕಬ್ಬಿಣದ ಮೆಶ್‌ ಗೆ ಸಿಲುಕಿ ಮೃತಪಟ್ಟ ಘಟನೆ ಕಳೆದ ವರ್ಷ ನಡೆದಿತ್ತು.  ಕಬ್ಬಿಣದ ಮೆಶ್ ಗೆ ಕತ್ತು ಸಿಲುಕಿ ಜಿರಾಫೆ ಸಾವು ಕಂಡಿತ್ತು. ಬನ್ನೇರುಘಟ್ಟ (Bannerghatta) ಜೈವಿಕ ಉದ್ಯಾನವನದಲ್ಲಿ ದುರ್ಘಟನೆ ಸಂಭವಿಸಿತ್ತು.


ಆಹಾರ ತಿನ್ನಲು ಜಿರಾಫೆ ಕತ್ತು ಹೊರ ಹಾಕಿತ್ತು. 2020ರಲ್ಲಿ ಮೈಸೂರಿನಿಂದ ತರಲಾಗಿದ್ದ ಜಿರಾಫೆ ಯದುನಂದನ್ ಸಾವು ಕಂಡಿತ್ತು ಕಬ್ಬಿಣದ ಮೆಸ್‌ನಲ್ಲಿ ಕತ್ತು ಸಿಲುಕಿ ಉಸಿರಾಟ ಸಾಧ್ಯವಾಗದೆ ಮೂರುವರೆ ವರ್ಷದ ಜಿರಾಫೆ  ಮೃತಪಟ್ಟಿದೆ. ಬನ್ನೇರುಘಟ್ಟದಲ್ಲಿ ಈ ಹಿಂದೆ ಜಿರಾಫೆ ಇರಲಿಲ್ಲ. ಸಾಕಷ್ಟು ಕಷ್ಟ ಪಟ್ಟು ಮೈಸೂರಿನಿಂದ ತರಲಾಗಿತ್ತು. ಜಿರಾಫೆ ಮೇಲ್ವಿಚಾರಣೆ ಹೊಂದಿದ್ದ ವ್ಯಕ್ತಿ ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಕತ್ತು ಹೊರಹಾಕಿದ್ದ ಜಿರಾಫೆ ಆಹಾರ (Food) ತಿನ್ನಲು ಮುಂದಾಗಿದೆ. ಆಗ ಅವಘಡವಾಗಿದೆ. ಎಲ್ಲರೂ ಬಂದು ನೋಡಿದಾಗ ಜಿರಾಫೆ ಮೃತಪಟ್ಟಿತ್ತು. 

ಮೈಸೂರು ಮೃಗಾಲಯದಲ್ಲಿ ಮುದ್ದು ಜಿರಾಫೆ ಮರಿಗಳು

ಕಳೆದ ವರ್ಷ ಜನವರಿಯಲ್ಲಿ ಮೈಸೂರಿನ (Mysore) ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಲಕ್ಷ್ಮೀ (Laxmi) ಹಾಗೂ ಭರತ್ (Bharat) ಹೆಸರಿನ ಜೋಡಿ ಜಿರಾಫೆಗೆ ಗಂಡು ಜಿರಾಫೆ ಮರಿ ಜನಿಸಿತ್ತು. ಹೊಸ ಅತಿಥಿಯ ಆಗಮನದಿಂದಾಗಿ ಮೈಸೂರು ಝೂನಲ್ಲಿ ಹುಟ್ಟಿದ ಜಿರಾಫೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿತ್ತು. ಬುಕ್ ಆಫ್‌ ರೆಕಾರ್ಡ್‌ನಲ್ಲಿಯೂ ಮೈಸೂರು ಝೂ ಜಿರಾಫೆ (giraffe)  ಸಂತಾನೋತ್ಪತ್ತಿ ದಾಖಲಾಗುತ್ತಿದೆ. ಪ್ರಪಂಚದ ಟಾಪ್ 10 ಮೃಗಾಲಯಗಳಲ್ಲಿ ಒಂದಾಗಿರುವ ಮೈಸೂರು (Mysore) ಝೂನಲ್ಲಿ ಪ್ರಾಣಿ ವಿನಿಮಯವೂ ಹೆಚ್ಚಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್