5 ವರ್ಷದ ಮಗಳ ಹಿಡಿದು ಈಜಾಡುತ್ತಿದ್ದ ತಾಯಿ ಮೇಲೆ ಶಾರ್ಕ್ ದಾಳಿ, ತಬ್ಬಲಿಯಾದ ಕಂದ!

Published : Dec 04, 2023, 10:05 PM ISTUpdated : Dec 04, 2023, 10:13 PM IST
5 ವರ್ಷದ ಮಗಳ ಹಿಡಿದು ಈಜಾಡುತ್ತಿದ್ದ ತಾಯಿ ಮೇಲೆ ಶಾರ್ಕ್ ದಾಳಿ, ತಬ್ಬಲಿಯಾದ ಕಂದ!

ಸಾರಾಂಶ

ಸಮುದ್ರ ತೀರದಲ್ಲಿ ಹಾಯಾಗಿ ಈಜಾಡುತ್ತಿದ್ದ ತಾಯಿ ಹಾಗೂ 5 ವರ್ಷದ ಪುಟ್ಟ ಮಗಳಿಗೆ ಶಾರ್ಕ್ ಮೀನು ಆಘಾತ ನೀಡಿದೆ. ಮಗಳ ಹಿಡಿದು ಈಜಾಡುತ್ತಿರುವಾಗಲೇ ಶಾರ್ಕ್ ಮೀನು ದಾಳಿ ನಡೆಸಿದೆ. ಮೀನಿನ ದಾಳಿಗೆ ತಾಯಿ ಮೃತಪಟ್ಟಿದ್ದಾರೆ.  

ಮೆಕ್ಸಿಕೋ(ಡಿ.04) ಸಮುದ್ರ ತೀರದಲ್ಲಿ ರಜೆಯ ಸವಿ ಅನುಭವಿಸುತ್ತಿದ್ದ ತಾಯಿ ಹಾಗೂ 5 ವರ್ಷದ ಮಗಳ ಮೇಲೆ ಶಾರ್ಕ್ ಮೀನು ದಾಳಿ ನಡೆಸಿದೆ. ಮೆಕ್ಸಿಕೋದ ಮಲೆಕ್ಯೂ ಬೀಚ್‌ನಲ್ಲಿ ಈ ಘಟನೆ ನಡೆದಿದೆ. ಶಾರ್ಕ್ ಮೀನಿನ ದಾಳಿಗೆ ತಾಯಿ ಮೃತಪಟ್ಟಿದ್ದರೆ, 5 ವರ್ಷದ ಮಗಳನ್ನು ರಕ್ಷಿಸಲಾಗಿದೆ. ಇದೀಗ ಮಲೆಕ್ಯೂ ಬೀಚ್‌ಗೆ ಯಾರೂ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.  ಭೀಕರ ಘಟನೆ ವಿಡಿಯೋ ಇದೀಗ ವೈರಲ್ ಆಗಿದೆ.

26 ವರ್ಷದ ಮಹಿಳೆ ತನ್ನ 5 ವರ್ಷದ ಮಗಳೊಂದಿಗೆ ಸಮುದ್ರ ತೀರದಲ್ಲಿ ಈಜಾಡುತ್ತಿದ್ದರು. ಪ್ಲೋಟಿಂಗ್ ಪ್ಲೇ ಮೇಲೆ ಮಗಳನ್ನು ಕೂರಿಸಿ ಈಜಾಡುವ ಪ್ರಯತ್ನದಲ್ಲಿರುವಾಗಲೇ ಶಾರ್ಕ್ ಮೀನು ದಾಳಿ ಮಾಡಿದೆ. ತಾಯಿ ಮಗಳ ಪಕ್ಕದಲ್ಲಿ ಹಾಗೂ ಕೆಲ ದೂರದಲ್ಲಿ ಹಲವು ಪ್ರವಾಸಿಗರು ಈಜಾಡುತ್ತಿದ್ದರು. ಆದರೆ ಹೊಂಚು ಹಾಕಿದ್ದ ಶಾರ್ಕ್ ಮೀನು ನೇರವಾಗಿ 26 ವರ್ಷದ ಮಹಿಳೆಯ ಕಾಲನ್ನು ಕಚ್ಚಿ ಹಿಡಿದೆಳೆದಿದೆ. 

 

ಕ್ಷಣದಲ್ಲಿ ಖಲಾಸ್‌: ಶಾರ್ಕ್ ಮೀನಿಗೆ ಆಹಾರವಾದ ರಷ್ಯನ್ ಪ್ರವಾಸಿ: ಸಾವಿನ ಕ್ಷಣ ವೈರಲ್

ಶಾರ್ಕ್ ಮೀನಿನ ದಾಳಿಯಿಂದ ಇವರ ಪಕ್ಕದಲ್ಲಿ ಈಜಾಡುತ್ತಿದ್ದ ಹಲವರು ಭಯಬೀತರಾಗಿದ್ದಾರೆ. ತಕ್ಷಣವೆ ಕೋಸ್ಟಲ್ ಗಾರ್ಡ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಶಾರ್ಕ್ ಮೀನಿನ ಬಾಯಿಂದ ಹೊರತೆಗೆದಿದ್ದಾರೆ. ಇತ್ತ ಪ್ಲೋಟಿಂಗ್ ಪ್ಲೇನಲ್ಲಿ ಕುಳಿತಿದ್ದ ಮಗುವನ್ನು ರಕ್ಷಿಸಲಾಗಿದೆ. ಮಗುವಿಗೆ ಯಾವುದೇ ಗಾಯವಾಗಿಲ್ಲ. ಆದರೆ ತೀವ್ರವಾಗಿ ಗಾಯಗೊಂಡ ಮಹಿಳೆ ಮೃತಪಟ್ಟಿದ್ದಾರೆ.

 

 

ಶಾರ್ಕ್ ಮೀನಿನ ಭೀಕರ ದಾಳಿಯಿಂದ  ಮಹಿಳೆ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಈ ಘಟನೆ ಬೆನ್ನಲ್ಲೇ ಕೋಸ್ಟಲ್ ಗಾರ್ಡ್ ಅಧಿಕಾರಿಗಳು ಮಲೆಕ್ಯೂ ಬೀಚ್ ಸಂಪೂರ್ಣವಾಗಿ ಮುಚ್ಚಿದ್ದಾರೆ. ಯಾವುದೇ ಪ್ರವಾಸಿಗರು ಪ್ರವೇಶಿಸದಂತೆ ನಿರ್ಬಂಧ ವಿದಿಸಿದ್ದಾರೆ. 

 

WWE ಲೆಜೆಂಡ್ ಅಂಡರ್‌ಟೇಕರ್ ನೋಡಿ ಬೆಚ್ಚಿಬಿದ್ದ ಡೇಂಜರಸ್ ಶಾರ್ಕ್‌..! ವಿಡಿಯೋ ವೈರಲ್

ಮೆಕ್ಸಿಕೋದ ಹಲವು ಸಮುದ್ರ ಕಿನಾರೆಗಳಲ್ಲಿ ಶಾರ್ಕ್ ಮೀನು ದಾಳಿ ನಡೆಸಿದ ಘಟನೆಗಳು ವರದಿಯಾಗಿದೆ. ಹೀಗಾಗಿ ದಕ್ಷಿಣ ಕರಾವಳಿ ಬೀಚ್‌ಗಳಲ್ಲಿ ಪ್ರವಾಸಿಗರು ತೀವ್ರ ಮುನ್ನಚ್ಚೆರಿಕೆವಹಿಸುವಂತೆ ಸೂಚಿಸಲಾಗಿದೆ. ಶಾರ್ಕ್ ಮೀನು ದಾಳಿಗೆ ಮಹಿಳೆ ಮೃತಪಟ್ಟ ದುರಂತ ಘಟನೆ ನೋವು ತಂದಿದೆ. ಪ್ರವಾಸಿಗರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಾಕಿಸ್ತಾನ ಸೇನೆಯಲ್ಲಿರುವ ಮಹಿಳಾ ಸೇನಾಧಿಕಾರಿಗಳ ಸಂಖ್ಯೆ ಎಷ್ಟು?
ಲಂಡನ್ ಬೀದಿಗಳಲ್ಲಿ ಗುಟ್ಕಾ ಕಲೆ; 'ಬಾಯಲ್ಲಿ ಕೇಸರಿ' ಹೇಳಿದ ಭಾರತೀಯರ ವಿಡಿಯೋ ವೈರಲ್ ಮಾಡಿ ಅವಮಾನಿಸಿದ ಪತ್ರಕರ್ತೆ!