ಶಾಪಿಂಗ್ ಮಾಲ್‌ನ ಅಕ್ವೇರಿಯಂ ಟ್ಯಾಂಕ್‌ನಲ್ಲಿ ಬಾಲ ಸಿಲುಕಿಕೊಂಡು ಚಡಪಡಿಸಿದ ಮತ್ಸ್ಯಕನ್ಯೆ: ವೀಡಿಯೋ

Published : Dec 04, 2023, 01:17 PM ISTUpdated : Dec 04, 2023, 02:00 PM IST
ಶಾಪಿಂಗ್ ಮಾಲ್‌ನ ಅಕ್ವೇರಿಯಂ ಟ್ಯಾಂಕ್‌ನಲ್ಲಿ ಬಾಲ ಸಿಲುಕಿಕೊಂಡು  ಚಡಪಡಿಸಿದ ಮತ್ಸ್ಯಕನ್ಯೆ:  ವೀಡಿಯೋ

ಸಾರಾಂಶ

Shopping Mallನ ಆಕ್ವೇರಿಯಂ ಒಂದರಲ್ಲಿ ವೀಕ್ಷಕರಿಗೆ ಮನೋರಂಜನೆ ನೀಡುತ್ತಿದ್ದ ಮತ್ಸ್ಯಕನ್ಯೆ (mermaid) ರೂಪದಲ್ಲಿದ್ದ ಯುವತಿಯೊಬ್ಬಳ ಬಾಲ ಅಕ್ವೇರಿಯಂನ ಕೆಳಭಾಗದಲ್ಲಿ ಸಿಲುಕಿಕೊಂಡು ಯುವತಿ ಭಾರಿ ಚಡಪಡಿಸಿ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳಲ್ಲಿ ನೀವು ದೊಡ್ಡ ದೊಡ್ಡ ಗಾತ್ರದ ಟ್ಯಾಂಕ್‌ಗಳ ಅಕ್ವೇರಿಯಂ ಇರುವುದನ್ನು ನೋಡಿರಬಹುದು. ಮಾಲ್‌ಗಳಿಗೆ ಭೇಟಿ ನೀಡುವ ಗ್ರಾಹಕರನ್ನು ಖುಷಿ ಪಡಿಸುವುದಕ್ಕಾಗಿ ಮಾಲ್‌ನ ಆಡಳಿತ ಮಂಡಳಿ ಮನೋರಂಜನೆಗಾಗಿ ಈ ಮತ್ಸ್ಯಕನ್ಯೆಯರನ್ನು ನೇಮಕ ಮಾಡಿರುತ್ತಾರೆ. ಅಕ್ವೇರಿಯಂನ ಟ್ಯಾಂಕ್ ಒಳಗೆ ಮೀನಿನಂತೆ ಓಡಾಡುತ್ತಾ ಮನೋರಂಜನೆ ಮಾಡುವುದು ಇವರ ಕೆಲಸ. ಆದರೆ ಇಂತಹ ಆಕ್ವೇರಿಯಂ ಒಂದರಲ್ಲಿ ವೀಕ್ಷಕರಿಗೆ ಮನೋರಂಜನೆ ನೀಡುತ್ತಿದ್ದ ಮತ್ಸ್ಯಕನ್ಯೆ (mermaid) ರೂಪದಲ್ಲಿದ್ದ ಯುವತಿಯೊಬ್ಬಳ ಬಾಲ ಅಕ್ವೇರಿಯಂನ ಕೆಳಭಾಗದಲ್ಲಿ ಸಿಲುಕಿಕೊಂಡು ಯುವತಿ ಭಾರಿ ಚಡಪಡಿಸಿ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಬಿಸಿ ನ್ಯೂಸ್ ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದಾರೆ. ವೃತ್ತಿಪರ ಮತ್ಸ್ಯಕನ್ಸೆಯೊಬ್ಬರು ತಾವು ಧರಿಸಿದ್ದ ಮತ್ಸ್ಯಕನ್ಸೆ ಧಿರಿಸಿನ ಬಾಲ ಅಕ್ವೇರಿಯಂ ಟ್ಯಾಂಕ್‌ನ ಕೆಳಭಾಗದಲ್ಲಿರುವ ಬಂಡೆಗೆ ಸಿಲುಕಿ ಅವರು ಉಸಿರಾಡುವುದಕ್ಕೆ ಹೆಣಗಾಡಿದ ಆತಂಕಕಾರಿ ಘಟನೆ ಮಾಲ್‌ಗೆ ಬಂದ ಗ್ರಾಹಕರ ಮುಂದೆಯೇ ನಡೆಯಿತು. ಸ್ವಲ್ಪ ಹೊತ್ತು ಬಾಲವನ್ನು ಬಿಡಿಸಿಕೊಳ್ಳಲು ಹೆಣಗಾಡಿದ ಆಕೆ ಕೂಡಲೇ ತನ್ನ ಬಾಲವನ್ನು ಕಳಚಿ ಮೇಲ್ಭಾಗಕ್ಕೆ ಈಜಿ  ಅಕ್ವೇರಿಯಂನಿಂದ ಹೊರಹೋಗುವ ಮೂಲಕ ಜೀವ ಉಳಿಸಿಕೊಂಡಿದ್ದಾಳೆ ಎಂದು ಈ ವೀಡಿಯೋ ಪೋಸ್ಟ್ ಮಾಡಿ ಬರೆಯಲಾಗಿದೆ.

ಮತ್ಸ್ಯಕನ್ಯೆಯಂತೆ ಬಾಡಿಕಾನ್‌ ಡ್ರೆಸ್‌ನಲ್ಲಿ ಫೋಸ್‌ ಕೊಟ್ಟ ಉಪ್ಪೇನಾ ನಟಿ, ಯಮ್ಮೀ ಫಿಶ್ ಅನ್ನೋದಾ ಫ್ಯಾನ್ಸ್‌!

ವೀಡಿಯೋ ನೋಡಿದ ಜನ ಹಲವು ಪ್ರತಿಕ್ರಿಯ ನೀಡಿದ್ದಾರೆ. ದಕ್ಷಿಣ ಆಫ್ರಿಕಾದ (South Africa) ಶಾಪಿಂಗ್ ಮಾಲೊಂದರಲ್ಲಿ (Shopping mall) ಈ ಘಟನೆ ನಡೆದಿದೆ ಎನ್ನಲಾಗಿದ್ದು, ವೀಡಿಯೋದಲ್ಲಿ ಕಾಣಿಸುವಂತೆ Mermaid ಅಥವಾ ಮತ್ಸ್ಯಕನ್ಯೆ ವೇಷ ಧರಿಸಿರುವ ಯುವತಿ ಮಾಲ್ ಒಳಗೆ ಇರುವ ದೊಡ್ಡದಾದ ಅಕ್ವೇರಿಯಂನಲ್ಲಿ ಈಜಾಡುತ್ತಾ ವೀಕ್ಷಕರನ್ನು ಮನರಂಜಿಸುತ್ತಿದ್ದು, ವೀಕ್ಷಕರು  ಆಕೆಯನ್ನು ನೋಡಿ ಖುಷಿಯಿಂದಲೇ ಆಕೆಯ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ (SmartPhone) ವೀಡಿಯೋ ಮಾಡುತ್ತಿದ್ದಾರೆ. ಅಷ್ಟರಲ್ಲಿ ಅಕ್ವೇರಿಯಂನ ಕೆಳಭಾಗದಲ್ಲಿದ್ದ ಬಂಡೆಗೆ ಆಕೆಯ ಬಾಲ ಸಿಲುಕಿಕೊಂಡಿದೆ. ಕೂಡಲೇ ಆಕೆ ಬಿಡಿಸಿಕೊಳ್ಳಲು ಸ್ವಲ್ಪ ಪ್ರಯತ್ನ ಮಾಡುತ್ತಾಳೆ. ಆದರೆ ಸಾಧ್ಯವಾಗದೇ ಇಡೀ ಕೆಳಭಾಗದ ಬಾಲದ ಧಿರಿಸನ್ನು ಅಕ್ವೇರಿಯಂನಲ್ಲೇ ಕಳಚಿ ಆಕೆ ಅಲ್ಲಿಂದ ಹೊರ ಹೋಗುತ್ತಾಳೆ.  

ಸಸ್ಯಾಹಾರದ ಪ್ರಚಾರಕ್ಕೆ ಮತ್ಸ್ಯಕನ್ಯೆಯಾದ ಪಾಲಕ್​: ಸೈಫ್​ ಅಲಿ ಪುತ್ರಂಗೂ ನಾನ್​ವೆಜ್​ ಬಿಡಿಸುವೆಯಾ ಅಂದ ಫ್ಯಾನ್ಸ್​!

ದಕ್ಷಿಣ ಆಫ್ರಿಕಾ ರಾಂಡ್ಬರ್ಗ್‌ನಲ್ಲಿದ್ದ ಮಾಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ವೀಡಿಯೋ ನೋಡಿದ ಅನೇಕರು ಆಕೆಯ ಬಗ್ಗೆ ಖುಷಿ ವ್ಯಕ್ತಪಡಿಸಿದ್ದು, ಸದ್ಯ ಆಕೆ ಆ ಅಪಾಯಕಾರಿ ಸ್ಥಿತಿಯಲ್ಲಿ ಬುದ್ಧಿವಂತಿಕೆ ಬಳಸಿ ಜೀವ ಉಳಿಸಿಕೊಂಡಿದ್ದಾಳೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಮತ್ಸ್ಯಕನ್ಯೆಯರು (mermaid) ಅಸ್ತಿತ್ವದಲ್ಲಿ ಇಲ್ಲ, ಇದನ್ನು ನಾವು ನಮ್ಮ ಮಕ್ಕಳಿಗೆ ತಿಳಿಸಿ ಹೇಳಬೇಕಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಒಟ್ಟಿನಲ್ಲಿ ಹೊಟ್ಟೆಪಾಡಿಗಾಗಿ ಮಾಡುವ ಈ ಶೋಕಿಗಳು ಕೆಲವೊಮ್ಮೆ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಗ್ರರಿಗೆ ಹೆದರಿ ಹೊಸ ವರ್ಷಾಚರಣೆಯೇ ರದ್ದು
ಬಾಂಗ್ಲಾ ಹಿಂದು ವ್ಯಕ್ತಿ ಹತ್ಯೆ : 7 ಮಂದಿ ಸೆರೆ