ಯುಎಸ್‌ ಯುದ್ಧನೌಕೆ ಸೇರಿ ಹಲವಾರು ಹಡಗುಗಳ ಮೇಲೆ ಕೆಂಪು ಸಮುದ್ರದಲ್ಲಿ ಮಾರಣಾಂತಿಕ ದಾಳಿ

By Gowthami K  |  First Published Dec 4, 2023, 10:40 AM IST

ಅಮೆರಿಕದ ಯುದ್ಧನೌಕೆ ಮತ್ತು ಅನೇಕ ವಾಣಿಜ್ಯ ಹಡಗುಗಳು ಭಾನುವಾರ ಕೆಂಪು ಸಮುದ್ರದಲ್ಲಿ ಮಾರಣಾಂತಿಕ ದಾಳಿಗೆ ಒಳಗಾಗಿದೆ. ಯಾರು ದಾಳಿ ನಡೆಸಿದ್ದಾರೆಂದು ಈವರೆಗೆ ಪತ್ತೆಯಾಗಿಲ್ಲ.


ಅಮೆರಿಕದ ಯುದ್ಧನೌಕೆ ಮತ್ತು ಅನೇಕ ವಾಣಿಜ್ಯ ಹಡಗುಗಳು ಭಾನುವಾರ ಕೆಂಪು ಸಮುದ್ರದಲ್ಲಿ ಮಾರಣಾಂತಿಕ ದಾಳಿಗೆ ಒಳಗಾಗಿದೆ. ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿರುವ ಮಧ್ಯಪ್ರಾಚ್ಯದಲ್ಲಿ ಕಡಲ ದಾಳಿಗೆ ತುತ್ತಾಗಿದ್ದು,  ಸರಣಿ ದಾಳಿಯಿಂದ ಪೆಂಟಗನ್ ನಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. 

ಯುಕೆ ಗುಪ್ತಚರ ವರದಿಯ ಪ್ರಕಾರ, ಯುಎಸ್ ಯುದ್ಧನೌಕೆಯನ್ನು ಗುರಿಯಾಗಿರಿಸಿಕೊಂಡು  ಸರಣಿ ಡ್ರೋನ್ ದಾಳಿ ಮಾಡಲಾಗಿದೆ. ಸದ್ಯ ದಾಳಿಕೋರರ ಗುರುತು ಪತ್ತೆಯಾಗಿಲ್ಲ.

Tap to resize

Latest Videos

ಏಷ್ಯಾದ ಅತ್ಯಂತ ದುಬಾರಿ ನಗರಗಳಿವು, ಭಾರತದ ಯಾವ ನಗರ ಲಿಸ್ಟ್‌ನಲ್ಲಿದೆ?

ಯುಎಸ್ಎಸ್ ಕಾರ್ನಿ ಮತ್ತು ಕೆಂಪು ಸಮುದ್ರದಲ್ಲಿನ ವಾಣಿಜ್ಯ ಹಡಗುಗಳ ಮೇಲಿನ ದಾಳಿಯ ಬಗ್ಗೆ ನಮಗೆ ತಿಳಿದಿದೆ. ವರದಿ ಲಭ್ಯವಾದಂತೆ ಮಾಹಿತಿಯನ್ನು ನೀಡುತ್ತೇವೆ, ಎಂದು ಯುಎಸ್ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ  ಪೆಂಟಗನ್ ಹೇಳಿದೆ. 

ಕೆಂಪು ಸಮುದ್ರದಲ್ಲಿ ಶಂಕಿತ ಡ್ರೋನ್ ದಾಳಿ ಮತ್ತು ಸ್ಫೋಟವನ್ನು ಬ್ರಿಟಿಷ್ ಮಿಲಿಟರಿ ಈ ಹಿಂದೆ ವರದಿ ಮಾಡಿತ್ತು. ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿದ ಮಧ್ಯಪ್ರಾಚ್ಯದಲ್ಲಿ  ಕಡಲ ದಾಳಿ ಹೆಚ್ಚುತ್ತಿದ್ದು, ಈ ದಾಳಿಯನ್ನು ಕೂಡ ಯುದ್ದಕ್ಕೆ ಹೋಲಿಕೆ ಮಾಡಿ ನೋಡಲಾಗುತ್ತದೆ. ಈ ದಾಳಿಯಲ್ಲಿ ಯೆಮೆನ್ ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ.

ಬೆಂಕಿ ಎಲ್ಲಿಂದ ಬಂತು ಎಂದು ಪೆಂಟಗನ್ ಗುರುತಿಸಲಿಲ್ಲ. ಆದಾಗ್ಯೂ, ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ಸರಣಿ ದಾಳಿಗಳನ್ನು ಪ್ರಾರಂಭಿಸುತ್ತಿದ್ದಾರೆ, ಜೊತೆಗೆ ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ಯುದ್ಧ ನಡೆಸುತ್ತಿರುವಾಗ ಇಸ್ರೇಲ್ ಅನ್ನು ಗುರಿಯಾಗಿಟ್ಟುಕೊಂಡು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸುತ್ತಿದ್ದಾರೆ.

70ರ ಇಳಿ ವಯಸಲ್ಲಿ ಅವಳಿಗೆ ಜನ್ಮವಿತ್ತ ಉಗಾಂಡಾದ ಮಹಿಳೆ

ಯೆಮೆನ್‌ನ ಸನಾದಲ್ಲಿ ಬೆಳಿಗ್ಗೆ 10 ಗಂಟೆಗೆ ದಾಳಿ ಪ್ರಾರಂಭವಾಯಿತು ಮತ್ತು ಐದು ಗಂಟೆಗಳ ಕಾಲ ನಡೆಯಿತು. ದಾಳಿಯ ಸಮಯದಲ್ಲಿ ಕಾರ್ನಿ ಕನಿಷ್ಠ ಒಂದು ಡ್ರೋನ್ ಅನ್ನು ತಡೆಹಿಡಿದಿದೆಎಂದು ಯುಎಸ್ ಅಧಿಕಾರಿಯೊಬ್ಬರು  ಹೇಳಿದ್ದಾರೆ.

ಇನ್ನು ಹೌತಿ ಬಂಡುಕೋರರಿಂದ ತಕ್ಷಣವೇ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೂ ಹೌತಿ ಮಿಲಿಟರಿ ವಕ್ತಾರರು "ಪ್ರಮುಖ" ಹೇಳಿಕೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.

ಯೆಮೆನ್ ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ  ದಾಳಿ ನಡೆಸುತ್ತಿರುವುದು ನಿರಂತರವಾಗಿದೆ. ಇಸ್ರೇಲ್ ದೇಶವನ್ನು ಗುರಿಯಾಗಿಸಿಕೊಂಡು ಬಂಡುಕೋರರು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹಾರಿಸುತ್ತಿದ್ದಾರೆ. ಯೆಮೆನ್ ಈ ಹಿಂದೆ ಕೆಂಪು ಸಮುದ್ರದಲ್ಲಿ ಹಲವಾರು ದಾಳಿಗಳನ್ನು ನಡೆಸಿದೆ. ಹಮಾಸ್ ಗೆ ಬೆಂಬಲವಾಗಿ ಯೆಮೆನ್ ಇಸ್ರೇಲ್ ವಿರುದ್ಧ ಯುದ್ಧ ನಡೆಸುತ್ತಿದೆ. ಪ್ರಸ್ತುತ, ಅಮೆರಿಕ ಈ ದಾಳಿಯನ್ನು ಪತ್ತೆಹಚ್ಚುವಲ್ಲಿ ತೊಡಗಿದೆ.  

click me!