ಪ್ರಪಂಚದಲ್ಲಿ ಎಂಥೆಂಥಾ ವಿಚಿತ್ರ ಜನಗಳಿರ್ತಾರೆ ನೋಡಿ. ಇಲ್ಲೊಬ್ಬಳಿಗೆ ತಾನು ಗರ್ಭಿಣಿಯಾಗಿದ್ದೆ ಎಂಬುದು ಮಗು ಹೆತ್ತ ಮೇಲೆ ಗೊತ್ತಾಗಿದೆ. ಅದು ಮಧ್ಯ ಆಕಾಶದಲ್ಲಿ ವಿಮಾನದ ಟಾಯ್ಲೆಟ್‌ನಲ್ಲಿ. ಹೌದು ಇಂತಹ ವಿಚಿತ್ರ ಪ್ರಕರಣ ನಡೆದಿರುವುದು ಡಚ್ ಏರ್‌ಲೈನ್ಸ್‌ಗೆ ಸೇರಿದ ಕೆಎಲ್‌ಎಂ ರಾಯಲ್ ಡಚ್ ವಿಮಾನದಲ್ಲಿ.
ಈಕ್ವೆಡಾರ್: ಪ್ರಪಂಚದಲ್ಲಿ ಎಂಥೆಂಥಾ ವಿಚಿತ್ರ ಜನಗಳಿರ್ತಾರೆ ನೋಡಿ. ಇಲ್ಲೊಬ್ಬಳಿಗೆ ತಾನು ಗರ್ಭಿಣಿಯಾಗಿದ್ದೆ ಎಂಬುದು ಮಗು ಹೆತ್ತ ಮೇಲೆ ಗೊತ್ತಾಗಿದೆ. ಅದು ಮಧ್ಯ ಆಕಾಶದಲ್ಲಿ ವಿಮಾನದ ಟಾಯ್ಲೆಟ್‌ನಲ್ಲಿ. ಹೌದು ಇಂತಹ ವಿಚಿತ್ರ ಪ್ರಕರಣ ನಡೆದಿರುವುದು ಡಚ್ ಏರ್‌ಲೈನ್ಸ್‌ಗೆ ಸೇರಿದ ಕೆಎಲ್‌ಎಂ ರಾಯಲ್ ಡಚ್ ವಿಮಾನದಲ್ಲಿ. ಈಕ್ವೆಡಾರ್‌ನ ಗುವಾಕಿಲ್ ವಿಮಾನ ನಿಲ್ದಾಣದಿಂದ ಸ್ಪೇನ್‌ಗೆ ತೆರಳಲು ಮಹಿಳೆ ಕೆಎಲ್‌ಎಂ ರಾಯಲ್ ಡಚ್ ವಿಮಾನ ಏರಿದ್ದಾಳೆ. ಈ ವಿಮಾನವೂ ಅಮಸ್ಟರ್ ಡಾಮ್‌ನಲ್ಲಿ ವಿರಾಮ ಪಡೆದು ನಂತರ ಸ್ಪೇನ್‌ನತ್ತ ಹಾರಾಬೇಕಾಗಿತ್ತು.
ಇನ್ನೇನು ನೆದರ್‌ಲ್ಯಾಂಡ್ ರಾಜಧಾನಿ ಅಮ್‌ಸ್ಟರ್ ಡಾಮ್‌ನಲ್ಲಿ ವಿಮಾನ ಲ್ಯಾಂಡ್ ಆಗಲು ಎರಡು ಗಂಟೆಗಳಿರುವ ವೇಳೆ ಈ ಮಹಿಳೆಗೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಟಾಯ್ಲೆಟ್‌ಗೆ ಓಡಿದ್ದಾಳೆ. ನಂತರ ಆಕೆ ಅಲ್ಲಿಂದ ಹೊರ ಬಂದಿದ್ದು ಮಗುವಿನೊಂದಿಗೆ.. ತನಗೆ ಏನಾಗಿದೆ ಎಂಬುದು ತಿಳಿಯುವ ಮೊದಲೇ ಆಕೆ ವಿಮಾನದ ಟಾಯ್ಲೆಟ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಹೀಗೆ ವಿಮಾನದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಈ ಚೊಚ್ಚಲ ಮಗುವಿನ ತಾಯಿಯನ್ನು ತಾಮರ ಎಂದು ಗುರುತಿಸಲಾಗಿದೆ. ನಂತರ ಆಮಸ್ಟರ್‌ಡ್ಯಾಂನಲ್ಲಿ(Amsterdam) ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ತಾಯಿ ಹಾಗೂ ಮಗು ಇಬ್ಬರನ್ನು ವಿಮಾನಯಾನ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದು, ತಾಯಿ ಮಗು ಇಬ್ಬರು ಕ್ಷೇಮವಾಗಿದ್ದಾರೆ. ಮಗುವಿಗೆ ಮಕ್ಷಿಮಿಲಿನೊ ಎಂದು ಹೆಸರಿಡಲಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
ಹೆರಿಗೆ ಆಸ್ಪತ್ರೆ ಮುಂದೆಯೇ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ
ಇನ್ನು ಈ ವಿಚಿತ್ರ ಘಟನೆ ನಡೆದ ಡಚ್ ಏರ್‌ಲೈನ್ಸ್‌ನಲ್ಲಿ ಇಬ್ಬರು ವೈದ್ಯರು ಹಾಗೂ ಆಸ್ಟ್ರೀಯಾದ ಒಬ್ಬರು ನರ್ಸ್ ಕೂಡ ಇದ್ದು, ಇವರೆಲ್ಲರೂ ಈ ಮಹಾತಾಯಿಯ ನೆರವಿಗೆ ಬಂದಿದ್ದಾರೆ. ಅಲ್ಲದೇ ಕೆಲವರು ಪ್ರಯಾಣಿಕರು ಕೂಡ ಆಕೆಗೆ ಸುಲಭವಾಗಿ ಹೆರಿಗೆಯಾಗಲು ನೆರವಾಗಿದ್ದಾರೆ. ಹೆರಿಗೆ ನಂತರ ಕಾಳಜಿಗಾಗಿ ತಾಯಿ ಮಗು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶೀಘ್ರದಲ್ಲೇ ತಾಯಿ ತಾಮರ (Tamara) ಹಾಗೂ ಮಗು ಮಕ್ಸಿಮಿಲಿನೊ(Maximiliano) ಮ್ಯಾಡ್ರಿಡ್‌ಗೆ (Madrid) ಪ್ರಯಾಣ ಬೆಳೆಸಲಿದ್ದಾರೆ. ಆಸ್ಪತ್ರೆಯ ಹೆರಿಗೆ ವಿಭಾಗದ ತಂಡವು ತಾಯಿ ಮಗು ಇಬ್ಬರ ಕಾಳಜಿ ಮಾಡುತ್ತಿದ್ದು, ಮಗು ಮ್ಯಾಕ್ಸಿಮಿಲಿಯಾನೊಗೆ ಅಗತ್ಯವಾದ ದಾಖಲೆಗಳನ್ನು ಮಾಡುವ ಸಿದ್ಧತೆಯಲ್ಲಿದೆ.
ತಾಯ್ತನದ ಸುಖ ಅನುಭವಿಸಲಿಲ್ಲ, ಹೆರಿಗೆ ನೋವಿಲ್ಲ, ಕೋಮಾದಲ್ಲೇ ಅಮ್ಮನಾದ ಮಹಿಳೆ!