ಮಕ್ಕಳಿಗೆ ಸಿಹಿ ಹಂಚಲು ಹೋದ ಸಾಂತಾಗೆ 6,000 ರೂಪಾಯಿ ಫೈನ್!

By Suvarna NewsFirst Published Dec 14, 2022, 4:57 PM IST
Highlights

ಕ್ರಿಸ್ಮಸ್ ಹಬ್ಬದ ತಯಾರಿ ನಡೆಯುತ್ತಿದೆ. ಇದೀಗ ಸಾಂತಾ ಕ್ಲಾಸ್ ಸಿಹಿ ಹಿಡಿದು ಹಂಚುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಹೀಗೆ ಮಕ್ಕಳಿಗೆ ಸಿಹಿ ಹಂಚಲು ಹೋದ ಸಾಂತಾ ಕ್ಲಾಸ್‌ಗೆ ಪೊಲೀಸರು 6,132 ರೂಪಾಯಿ ದಂಡ ಹಾಕಿದ್ದಾರೆ.

ಲಂಡನ್(ಡಿ.14): ಕ್ರಿಸ್ಮಸ್ ಆಚರಣೆಗೆ ಕೆಲ ದಿನಗಳು ಮಾತ್ರ ಬಾಕಿ. ಈಗಾಗಲೇ ಹಬ್ಬದ ಆಚರಣೆಗೆ ತಯಾರಿ ನಡೆಯುತ್ತಿದೆ. ಕೇಕ್ ತಯಾರಿಕೆ, ಸಾಂತಾ ಕ್ಲಾಸ್ ಸಿಹಿ ಹಿಡಿದು ಹಂಚುತ್ತಿರುವ ದೃಶ್ಯಗಳು ಬಹುತೇಕ ಕಡೆಗಳಲ್ಲಿ ಕಂಡು ಬರುತ್ತಿದೆ. ಹೀಗೆ ಮಕ್ಕಳಿಗೆ ಸಿಹಿ ಹಂಚಲು ಹೋದ ಸಾಂತಾ ಕ್ಲಾಸ್‌ಗೆ ಪೊಲೀಸರು 6,132 ರೂಪಾಯಿ ದಂಡ ಹಾಕಿದ್ದಾರೆ. ಮಕ್ಕಳಿಗೆ ಸಿಹಿ ಹಂಚುತ್ತಿದ್ದ ಸಾಂತಾಗೆ ದಂಡ ಹಾಕಿದ್ದು ಯಾಕೆ? ಅಂತೀರಾ...ಸಾಂತಾ ಶೂನ್ಯ ಟಾಫ್ರಿಕ್ ವಲಯದ ಪಾದಾಚಾರಿ ಮಾರ್ಗದಲ್ಲಿ ತನ್ನ ಮೂರು ಚಕ್ರದ ಬೈಕ್ ಚಲಾಯಿಸಿದ್ದ. ನಿಯಮ ಉಲ್ಲಂಘಿಸಿದ ಕಾರಣಕ್ಕೆ ಸಾಂತಾಗೆ ದಂಡ ಹಾಕಲಾಗಿದೆ. ಈ ಘಟನೆಇಂಗ್ಲೆಂಡ್‌ನ ಮ್ಯಾಸಾಚುಸೆಟ್ಸ್‌ನ ವೊರ್ಸೆಸ್ಟರ್ ನಗರದಲ್ಲಿ ನಡೆದಿದೆ. 

75 ವರ್ಷದ ಮಿಕ್ಕಿ ವೊರಲ್ ಸಾಂತಾ ಡ್ರೆಸ್ ಹಾಕಿ ಸಿಹಿ ಹಂಚಲು ಮುಂದಾಗಿದ್ದರು. ಈ ಮೂಲಕ ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಪ್ಲಾನ್ ಹಾಕಿಕೊಂಡಿದ್ದರು.  ಇದಕ್ಕಾಗಿ ಮೂರು ಚಕ್ರದ ವಿಶೇಷ ಬೈಕ್ ಮೂಲಕ ಚಾಕೋಲೇಟ್ ಹಿಡಿದು  ವೊರ್ಸೆಸ್ಟರ್ ಸಿಟಿಗೆ ಆಗಮಿಸಿದ್ದರು. ಮಕ್ಕಳು ಹೆಚ್ಚಾಗಿರುವ ವೋರ್ಸೆಸ್ಟರ್ ಸಿಟಿ ಪಾರ್ಕ್ ಬಳಿಗೆ ತೆರಳಿ ಸಿಹಿ ಹಂಚಲು ಮಿಕ್ಕಿ ಮುಂದಾಗಿದ್ದಾರೆ. 

 

Christmas : ಈ ದೇಶದಲ್ಲಿಲ್ಲ ಕ್ರಿಸ್ಮಸ್ ಸಂಭ್ರಮಾಚರಣೆ

ಇದಕ್ಕಾಗಿ ಪಾದಾಚಾರಿ ರಸ್ತೆ ಮೂಲಕ ತನ್ನ ಮೂರು ಚಿಕ್ರದ ಬೈಕ್ ಒಡಿಸುತ್ತಾ ಮಕ್ಕಳಿಗೆ ಸಿಹಿ ಹಂಚಲು ಮುಂದಾಗಿದ್ದಾನೆ. ಪಾದಾಚಾರಿ ರಸ್ತೆ ಮೂಲಕ ಸಾಗಿ ಪಾರ್ಕ್ ಒಳಗೆ ಪ್ರವೇಶಿಸಿದ ಸಾಂತಾ ಮಕ್ಕಳಿಗೆ ಸಿಹಿ ಹಂಚಿದ್ದಾನೆ. ಬಳಿಕ ಪೊಷಕರಿಗೆ ಡೋನೇಶನ್ ಸ್ವೀಕರಿಸಿ ಸ್ವೀಕೃತಿ ಪತ್ರ ನೀಡಿದ ಮಿಕ್ಕಿ, ಹಿಂತಿರುಗಿ ಬರುವಾಗ ಪೊಲೀಸರು ದಂಡ ಹಾಕಿದ್ದಾರೆ. 

ಪಾದಾಚಾರಿ ರಸ್ತೆಯಲ್ಲಿ ವಾಹನ ಚಲಾಯಿಸಿ, ಬಳಿಕ ಶೂನ್ಯ ಟಾಫ್ರಿಕ್ ಜೋನ್‌ನಲ್ಲಿ ವಾಹನ ಪಾರ್ಕ್ ಮಾಡಿದ ಕಾರಣಕ್ಕೆ 60 ಪೌಂಡ್ ಅಂದರೆ 6,132 ರೂಪಾಯಿ ದಂಡ ಹಾಕಿದ್ದಾರೆ. ತಾನು ಪಾದಾಚಾರಿ ರಸ್ತೆ ಮೂಲಕ ಸಾಗಲು ಹಾಗೂ ವಾಹನ ಪಾರ್ಕ್ ಮಾಡಲು ಮೊದಲೇ ಪೊಲೀಸರ ಬಳಿಯಿಂದ ಅನುಮತಿ ಪಡೆದಿದ್ದೇನೆ. ಹೀಗಾಗಿ ದಂಡ ಪಾವತಿಸುವುದಿಲ್ಲ ಎಂದು ಸಾಂತಾ ಕ್ಲಾಸ್ ಹಾಕಿದ್ದ ಮಿಕ್ಕಿ ಹೇಳಿದ್ದಾರೆ. ನಾನು ಕೋರ್ಟ್‌ಗೆ ಹೋಗಿ ನ್ಯಾಯ ಪಡೆಯುತ್ತೇನೆ. ಆದರೆ ದಂಡ ಪಾವತಿಸುವುದಿಲ್ಲ. ಉತ್ತಮ ಉದ್ದೇಶಕ್ಕಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಚಾರಿಟಿಗಾಗಿ ಹಣ ಸಂಗ್ರಹಿಸುತ್ತಿದ್ದೇನೆ. ಈ ರೀತಿ ಅಡ್ಡಿಪಡಿಸುವುದು ಸರಿಯಲ್ಲ ಎಂದು ಸಾಂತಾ ಕ್ಲಾಸ್ ಹೇಳಿದ್ದಾರೆ.

Cyber Crimes: ಕ್ರಿಸ್ಮಸ್, ಹೊಸ ವರ್ಷದ ರಜಾ ಅವಧಿಯಲ್ಲಿ ಸೈಬರ್ ವಂಚಕರು ಸಕ್ರಿಯ, ಹುಷಾರ್

ದಂಡದ ಪ್ರಕರಣದಿಂದ ನಾನು ವಿಚಲಿತನಾಗಿಲ್ಲ. ಮತ್ತಷ್ಟು ನಗರಗಳಿಗೆ ತೆರಳಿ ಕ್ರಿಸ್ಮಸ್ ಹಬ್ಬದ ಸವಿಯನ್ನು ಉಣಬಡಿಸುತ್ತೇನೆ ಎಂದು ಮಿಕ್ಕಿ ಹೇಳಿದ್ದಾರೆ. ಪ್ರತಿ ವರ್ಷ ಇದೇ ರೀತಿ ಅನುಮತಿ ಪಡೆದು ಕ್ರಿಸ್ಮಸ್ ಹಬ್ಬಕ್ಕೆ ಸಿಹಿ ಹಂಚಿದ್ದೇನೆ. ಇದೇ ರಸ್ತೆಗಳ ಮೂಲಕ ಸಾಗಿದ್ದೇನೆ. ಇಷ್ಟು ವರ್ಷ ದಂಡ ಹಾಕಿಲ್ಲ. ಇದೇ ಮೊದಲ ಬಾರಿಗೆ ದಂಡ ಹಾಕಿದ್ದಾರೆ ಎಂದು ಮಿಕ್ಕಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಕ್ರಿಸ್ಮಸ್ ತಯಾರಿ
ಮೈಸೂರು ನಗರದ ಬನ್ನಿಮಂಟಪದಲ್ಲಿರುವ ಸೆಂಟ್‌ ಫಿಲೋಮಿನಾ ಕಾಲೇಜಿನಲ್ಲಿ ಪ್ರವಾಸೋದ್ಯಮ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್‌ ವಿಭಾಗದ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಕೇಕ್‌ ಮಿಕ್ಸಿಂಗ್‌ ಸಮಾರಂಭ ನಡೆಯಿತು. ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ಕಾಲೇಜು ಆವರಣದಲ್ಲಿ ಸಾಂಪ್ರದಾಯಿಕ ಹಬ್ಬದ ಸಮಾರಂಭ ಆಯೋಜಿಸಿತ್ತು.ಸೆಂಟ್‌ ಫಿಲೋಮಿನಾ ಕಾಲೇಜಿನ ಫಾ. ಬರ್ನಾರ್ಡ್‌ ಪ್ರಕಾಶ್‌ ಬಾರ್ನಿಸ್‌ ಪ್ರವಾಸೋದ್ಯಮ ಮತ್ತು ಹೋಟೆಲ… ನಿರ್ವಹಣಾ ಇಲಾಖೆ ಕೈಗೊಂಡ ಉಪಕ್ರಮವನ್ನು ಶ್ಲಾಘಿಸಿ ಮಾತನಾಡಿ, ಕೇಕ್‌ ಮಿಕ್ಸಿಂಗ್‌ ಸಮಾರಂಭವು ಯಾವಾಗಲೂ ಕ್ರಿಸ್‌ಮಸ್‌ ಹಬ್ಬದ ಉತ್ಸಾಹವನ್ನು ತರುತ್ತದೆ ಎಂದರು.
 

click me!