ಮಹಿಳೆ ಮರದಿಂದ ಹೊರಬರುವವರೆಗೂ ಹಕ್ಕಿ ದಾಳಿ ಮಾಡಲು ಪ್ರಾರಂಭಿಸಿತು. ಬಳಿಕ ಕೆಳಕ್ಕೆ ನಿಂತಿದ್ದ ಮಹಿಳೆ ಮೇಲೂ ನವಿಲು ಅಟ್ಯಾಕ್ ಮಾಡಿದೆ.
ನವದೆಹಲಿ (ಏಪ್ರಿಲ್ 18, 2023): ನಮ್ಮ ರಾಷ್ಟ್ರಪಕ್ಷಿ ಅಂದ್ರೆ ಅದು ನವಿಲು. ಈ ವಿಚಾರ ಬಹುತೇಕರಿಗೆ ಗೊತ್ತೇ ಇದೆ ಬಿಡಿ. ಈ ವಿಚಾರ ಈಗ್ಯಾಕಪ್ಪಾ ಅಂತೀರಾ..? ನಮ್ಮ ದೇಶದಲ್ಲಿ ನವಿಲಿಗೆ ಸಾಕಷ್ಟು ಗೌರವ ಇದೆ. ಆದರೆ, ನೀವು ಎಲ್ಲಿ ಹೋದರೂ ಆ ಪಕ್ಷಿಯನ್ನು ಕೆಣಕಲು ಹೋಗ್ಬೇಡಿ. ನೀವು ಓಂದು ವೇಳೆ ನವಿಲನ್ನು ಕೆಣಕೋಕೆ ಹೋದ್ರೆ ಅದು ನಿಮ್ಮನ್ನು ಸುಮ್ಮನೆ ಬಿಡಲ್ಲ ನೋಡಿ. ಇಲ್ಲದಿದ್ದರೆ ಈ ಇಬ್ಬರು ಮಹಿಳೆಯರಿಗೆ ಆದಂತೆ ಆಗುತ್ತದೆ!
ಹೌದು, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ನವಿಲಿನ ಮೊಟ್ಟೆಗಳನ್ನು ಕದಿಯಲು ಹೋದ ಮಹಿಳೆಯರಿಗೆ ತಕ್ಕ ಶಾಸ್ತಿಯಾಗಿದೆ. ಅವರು ಮಾಡಲು ಹೋಗಿದ್ದ ಕೆಲಸ ಎಂತದ್ದು ಎಂಬುದು ಅವರಿಗೆ ನಂತರ ಅರಿವಾಗಿರ್ಬೇಕು. ಇನ್ನು, ಅವರು ತಮ್ಮ ಜೀವನಪರ್ಯಂತ ಮೊಟ್ಟೆಯನ್ನೇ ತಿನ್ನೋಕೆ ಹೋಗಲ್ವೇನೋ! ಹಾಗಾದ್ರೆ, ಅಂತದ್ದೇನಾಯ್ತು ಅಂತೀರಾ..
ಇದನ್ನು ಓದಿ: ಕಸದ ವಿಚಾರಕ್ಕೆ ಜಗಳ: ಪಿಸ್ತೂಲು ಹಿಡಿದು ಬೆದರಿಸಿ ಗಾಳಿಯಲ್ಲಿ ಗುಂಡು ಹಾರಿಸಿದ ಉದ್ಯಮಿ!
ಮರದಿಂದ ನವಿಲಿನ ಮೊಟ್ಟೆಗಳನ್ನು ಕದಿಯೋಕೆ ಇಬ್ಬರು ಮಹಿಳೆಯರು ಪ್ರಯತ್ನಿಸಿದ್ದು, ಈ ಪೈಕಿ ಒಬ್ಬರು ಮಹಿಳೆ ಮರ ಹತ್ತಿದ್ದರು. ಆ ಸಮಯದಲ್ಲಿ ನವಿಲು ಆ ಮೊಟ್ಟೆ ಇಟ್ಟಿದ್ದ ಗೂಡಿನ ಬಳಿ ಇರಲಿಲ್ಲ. ಈ ಹಿನ್ನೆಲೆ ಮೊಟ್ಟೆಗಳನ್ನು ಎತ್ತಿಕೊಂಡು ಆಕೆ ಮತ್ತೊಬ್ಬ ಮಹಿಳೆಗೆ ನೀಡಬೇಕು ಎನ್ನುವಷ್ಟರಲ್ಲಿ ನವಿಲು ಆ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಬಂದಿದೆ ನೋಡಿ. ಹಾರಿಕೊಂಡು ಬಂದ ನವಿಲು ಮೊಟ್ಟೆಗಳನ್ನು ಕೈಯಲ್ಲಿ ಇಟ್ಟುಕೊಂಡು ಇನ್ನೊಬ್ಬ ಮಹಿಳೆಗೆ ನೀಡಲು ಹೋದ ಮಹಿಳೆಯ ಮೇಲೆ ದಾಳಿ ಮಾಡಿದೆ. ಅಷ್ಟೇ ಅಲ್ಲದೆ, ನೆಲದ ಮೇಲೆ ನಿಂತಿದ್ದ ಮತ್ತೊಬ್ಬ ಮಹಿಳೆಯ ಮೇಲೂ ಆ ನವಿಲು ದಾಳಿ ಮಾಡಿದೆ.
ಈ ವಿಡಿಯೋವನ್ನು ದಿ ಫಿಗೆನ್ ಎಂಬ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಈವರೆಗೆ 1 ಲಕ್ಷ 27 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ. ಅಲ್ಲದೆ, ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ, ಕಾಮೆಂಟ್ಸ್‌ಗಳು ಸಹ ಸಿಕ್ಕಿದೆ.
ಇದನ್ನೂ ಓದಿ: ಮಹಿಳಾ ಬ್ರೂಸ್ ಲೀ, ಅನುಚಿತ ವರ್ತನೆ ತೋರಿದ ಗ್ರಾಹಕರಿಗೆ ತಕ್ಕ ಶಾಸ್ತಿ,ವಿಡಿಯೋ ವೈರಲ್!
ಈ ವಿಡಿಯೋ ಇಲ್ಲಿದೆ ನೋಡಿ..
They deserved more! 💪
pic.twitter.com/Pc5rZqhGMa
ಈ ವಿಡಿಯೋವನ್ನು ನೀವು ನೋಡಿದ್ರೆ, ಅದರಲ್ಲಿ ಮಹಿಳೆಯೊಬ್ಬರು ಮರವನ್ನು ಹತ್ತಿ ಗೂಡಿನಿಂದ ಮೊಟ್ಟೆಗಳನ್ನು ಎತ್ತಿಕೊಳ್ಳುತ್ತಿರುವುದನ್ನು ಕಾಣಬಹುದು. ಆಕೆ ಅವುಗಳನ್ನು ಒಂದೊಂದಾಗಿ ಮರದ ಪಕ್ಕದಲ್ಲಿ ನಿಂತಿದ್ದ ಇನ್ನೊಬ್ಬ ಮಹಿಳೆಗೆ ನೀಡಲು ಮುಂದಾದಳು. ಆದರೆ, ಮಹಿಳೆ ಮೊಟ್ಟೆಗಳನ್ನು ಕದಿಯುವುದನ್ನು ಕಂಡ ನವಿಲು ಅವುಗಳನ್ನು ರಕ್ಷಿಸಲು ಹಾರಿಹೋಯಿತು. ಅಲ್ಲದೆ, ಮಹಿಳೆ ಮರದಿಂದ ಹೊರಬರುವವರೆಗೂ ಹಕ್ಕಿ ದಾಳಿ ಮಾಡಲು ಪ್ರಾರಂಭಿಸಿತು. ಬಳಿಕ ಕೆಳಕ್ಕೆ ನಿಂತಿದ್ದ ಮಹಿಳೆ ಮೇಲೂ ನವಿಲು ಅಟ್ಯಾಕ್ ಮಾಡಿದೆ. ಈ ಘಟನೆ ಎಲ್ಲಿ ನಡೆದಿದೆ ಅನ್ನೋದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ಮೊಟ್ಟೆಗಳನ್ನು ಕದಿಯುವ ಈ ಮಹಿಳೆಯರ ಮೇಲೆ ನವಿಲು ಹೇಗೆ ದಾಳಿ ಮಾಡಿದೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಹ ಮೆಚ್ಚಿಕೊಂಡಿದ್ದಾರೆ. ಹಲವರು ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನೂ ಈ ವಿಡಿಯೋಗೆ ನೀಡಿದ್ದಾರೆ ನೋಡಿ..
ಇದನ್ನೂ ಓದಿ: ಭಲೇ ನಾರಿ..ಯುಕೆ ಮ್ಯಾರಥಾನ್‌ನಲ್ಲಿ ಸೀರೆಯುಟ್ಟು ಒಡಿದ ಒಡಿಯಾ ಮಹಿಳೆ!