ನೀರೊಳಗೆ ಬ್ಯೂಟಿಯ ಕ್ಯಾಟ್‌ವಾಕ್‌... ವಿಡಿಯೋ ಸಖತ್‌ ವೈರಲ್

Published : Sep 05, 2022, 03:02 PM ISTUpdated : Sep 05, 2022, 03:08 PM IST
ನೀರೊಳಗೆ ಬ್ಯೂಟಿಯ ಕ್ಯಾಟ್‌ವಾಕ್‌... ವಿಡಿಯೋ ಸಖತ್‌ ವೈರಲ್

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬರು ನೀರಿನ ಮೇಲೆ ಹೈಹೀಲ್ಡ್ ತೊಟ್ಟು ವಾಕ್ ಮಾಡುತ್ತಿದ್ದಾರೆ. 

ವೈಭವೋಪೇತವಾದ ವೇದಿಕೆ, ಫ್ಯಾಷನ್‌ ಲೋಕದ ನೂರಾರು ಗಣ್ಯರು, ಝಗಮಗಿಸುವ ಲೈಟಿಂಗ್ಸ್‌, ಈ ಎಲ್ಲಾ ಸೌಂದರ್ಯಗಳ ಸೆರೆ ಹಿಡಿಯಲು ಸಾಲುಗಟ್ಟಿ ನಿಂತ ಕ್ಯಾಮರಾಗಳು, ಇವೆಲ್ಲದರ ನಡುವೆ ಬಿನ್ನಾಣದೊಂದಿಗೆ ಬಳುಕುತ್ತಾ ನಡೆದುವ ಬರುವ ಬೆಡಗಿಯರು. ಇದು ಸಾಮಾನ್ಯವಾಗಿ ಫ್ಯಾಷನ್‌ ಲೋಕದಲ್ಲಿ ನಡೆಯುವ ರಾಂಪ್ ವಾಕ್‌ನಲ್ಲಿ ಕಂಡು ಬರುವ ದೃಶ್ಯಗಳು. ನೋಡುಗರ ಕಣ್ಣಿಗೆ ಫ್ಯಾಷನ್ ಪ್ರಿಯರಿಗೆ ಅದೊಂದು ಅದ್ಭುತ ಲೋಕ. ಇಂತಹ ಫ್ಯಾಷನ್‌ ಕ್ಯಾಟ್‌ವಾಕ್‌ಗಳನ್ನು ನೀವು ಟಿವಿಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಆದರೆ ನೀರೊಳಗೆ ಕ್ಯಾಟ್‌ವಾಕ್ ಮಾಡಿದ್ದನ್ನು ಎಂದಾದರು ನೋಡಿದ್ದೀರಾ. ನೋಡಿಲ್ಲವೆಂದಾದರೆ ಇಲ್ಲಿದೆ ನೋಡಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬರು ನೀರಿನ ಮೇಲೆ ಹೈಹೀಲ್ಡ್ ತೊಟ್ಟು ವಾಕ್ ಮಾಡುತ್ತಿದ್ದಾರೆ. 

ಇನ್ಸ್ಟಾಗ್ರಾಮ್‌ನಲ್ಲಿ (Instagram) ಕ್ರಿಸ್ಟಿಮಕುಶ ಎಂಬ ಖಾತೆಯಿಂದ ಈ ವಿಡಿಯೋ ಪೋಸ್ಟ್‌ ಆಗಿದೆ.ವಿಡಿಯೋದಲ್ಲಿ ಕಾಣಿಸುವಂತೆ ಮಹಿಳೆಯೊಬ್ಬರು ನೀರಿನಲ್ಲಿ ಹೈ ಹೀಲ್ಡ್ (High heel)ಜೊತೆ ಸ್ವಿಮ್‌ಸೂಟ್ ತೊಟ್ಟು ಕ್ಯಾಟ್‌ವಾಕ್ ಮಾಡುತ್ತಿದ್ದಾರೆ. ನೀರಿನ ತಳದಲ್ಲಿ ಬ್ಯಾಗ್‌ನ್ನು ಇರಿಸಲಾಗಿದ್ದು, ನೀರಲ್ಲೇ ತಲೆಕೆಳಗಾಗಿ ತಳದಲ್ಲಿದ್ದ ಬ್ಯಾಗ್‌ನ್ನು ಅವರು ಎತ್ತಿಕೊಂಡು ತೋಳಿನಲ್ಲಿ ಸಿಕ್ಕಿಸಿಕೊಳ್ಳುತ್ತಾರೆ. ಈ ಇನ್ಸ್ಟಾ ಖಾತೆಯ ಬಯೋದಲ್ಲಿ ಇರುವಂತೆ ಕ್ರಿಸ್ಟಿನಾ ಮಕುಶೆಂಕೊ (Kristina Makushenko) ನಾಲ್ಕು ಬಾರಿ ವಿಶ್ವ ಈಜು ಚಾಂಪಿಯನ್ ಆಗಿದ್ದಾರೆ.

 

ಕ್ರಿಸ್ಟಿನಾ ಮಕುಶೆಂಕೊ ಅವರು ಹೈ ಹೀಲ್ಡ್ ಧರಿಸಿ, ನೀರಿನೊಳಗೆ ನೆಲದ ಮೇಲೆ ನಡೆದಂತೆ ನಡೆಯುತ್ತಿದ್ದು, ಜೊತೆಗೆ ನೀರಿನೊಳಗೆ ಒಂದು ಬಾರಿ 360 ಡಿಗ್ರಿ ಟರ್ನ್‌ ಆಗುತ್ತಾರೆ. ಅಲ್ಲದೇ ಈಜುಕಪಳದ ಆಳದಲ್ಲಿದ್ದ ಬ್ಯಾಗ್‌ನ್ನು ಎತ್ತಿಕೊಂಡು ಹೆಗಲಿಗೇರಿಸಿ ಮತ್ತೆ ನೇರವಾಗಿ ನಡೆಯುತ್ತಾರೆ. ಜುಲೈನಲ್ಲಿಯೇ ಈ ವಿಡಿಯೋ ಶೇರ್ ಆಗಿದ್ದರೂ ಈಗ ಹೆಚ್ಚು ವೈರಲ್ ಆಗಿದ್ದು, 54.1 ಮಿಲಿಯನ್ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಜೊತೆಗೆ 1.7 ಮಿಲಿಯನ್‌ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಕ್ರಿಸ್ಟಿನಾ ಮಕುಶೆಂಕೊ ಪ್ರತಿಭೆಗೆ ಬೆರಗಾಗಿದ್ದಾರೆ.

10 ಸಾವಿರಕ್ಕಾಗಿ ನೀರಿಗೆ ಹಾರಿದ ನಿರ್ದೇಶಕ ಸಿಂಪಲ್ ಸುನಿ; ವಿಡಿಯೋ ವೈರಲ್!

ಕ್ರಿಸ್ಟಿನಾ ಮಕುಶೆಂಕೊ ಅವರು ಸಾಮಾಜಿಕ ಜಾಲತಾಣದಲ್ಲಿ 6.8 ಲಕ್ಷ ಇನ್ಸ್ಟಾಗ್ರಾಮ್‌ ಫಾಲೋವರ್‌ಗಳನ್ನು ಹೊಂದಿದ್ದಾರೆ. ಅವರು ತಮ್ಮ ಖಾತೆಯಲ್ಲಿ ಆಗಾಗ ತಮ್ಮ ಈಜುಗಾರಿಕೆಯ ಹಲವು ವಿಡಿಯೋಗಳನ್ನು ಹಾಕುತ್ತಿರುತ್ತಾರೆ.
ಧುತ್ತನೇ ತೆರೆದುಕೊಂಡು ಓರ್ವನ ಬಲಿ ಪಡೆದ ಈಜುಕೊಳದ ಸಿಂಕ್‌ಹೊಲ್: Terrible video 

ಪೂಲ್‌ನಲ್ಲಿ ರಾಗಿಣಿ ಕೂಲ್ ಕೂಲ್

ನಟಿ ರಾಗಿಣಿ ಸ್ವಿಮಿಂಗ್ ಪೂಲ್‌ನಲ್ಲಿ ಕೂಲ್ ಆಗುತ್ತಿರುವ ಫೋಟೋಗಳನ್ನು ಕೆಲ ದಿನಗಳ ಹಿಂದೆ ಶೇರ್ ಮಾಡಿದ್ದರು. ರಾಗಿಣಿಯ ಈ ಫೋಟೋಗಳು ಪಡ್ಡೆಯುವಕರ ನಿದ್ದೆ ಗೆಡಿಸಿದ್ದವು. ಕಪ್ಪು ಬಣ್ಣದ ಸ್ವಿಮ್ ಸೂಟ್‌ನಲ್ಲಿ ಮಿಂಚಿರುವ ರಾಗಿಣಿ ಫೋಟೋಗಳಿಗೆ ಅಭಿಮಾನಿಗಳಿಂದ ಲೈಕ್ಸ್ ಮತ್ತು ಕಾಮೆಂಟ್ಸ್  ಹರಿದು ಬಂದಿವೆ. ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಧ್ಯಕ್ಷ ಇನ್ ಅಮೆರಿಕಾ ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದ ರಾಗಿಣಿ ಇದೀಗ ಮತ್ತೆ ನಟನೆಯಲ್ಲಿ ನಿರತರಾಗಿದ್ದಾರೆ. ಲಾಕ್ ಡೌನ್ ಬಳಿಕ ರಾಗಿಣಿ ನಟನೆಯ ಯಾವುದೇ ಸಿನಿಮಾ ಇನ್ನು ರಿಲೀಸ್ ಆಗಿಲ್ಲ. ಗಾಂಧಿಗಿರಿ ಸಿನಿಮಾ ಇನ್ನು ರಿಲೀಸ್‌ ಆಗಬೇಕಿದೆ. ಜೊತೆಗೆ ಸಾರಿ ಕರ್ಮ ರಟರ್ನ್ ಸಿನಿಮಾ ಕೂಡ ರಾಗಿಣಿ ಬಳಿ ಇದೆ. ಸಾರಿ: ಕರ್ಮ ರಿಟರ್ನ್ಸ್‌ ಸಿನಿಮಾದಲ್ಲಿ ತುಪ್ಪದ ಹುಡುಗಿ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈ ಸಿನಿಮಾ ಮೂಲಕ ಸಾರಿ ಮತ್ತು ಥ್ಯಾಂಕ್ಸ್‌ ಪದದ ಮಹತ್ವ ಸಾರಲು ಮುಂದಾಗಿದ್ದಾರೆ ರಾಗಿಣಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ
ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ