ವಿಮಾನ ಮಿಸ್ ಆಯ್ತು ಅಂತ ರನ್‌ವೇಲಿ ಓಡಿದ ಮಹಿಳೆ: ವೀಡಿಯೋ ವೈರಲ್, ಮಹಿಳೆ ಅಂದರ್‌

Published : Nov 05, 2023, 02:42 PM IST
ವಿಮಾನ ಮಿಸ್ ಆಯ್ತು ಅಂತ ರನ್‌ವೇಲಿ ಓಡಿದ ಮಹಿಳೆ: ವೀಡಿಯೋ ವೈರಲ್, ಮಹಿಳೆ ಅಂದರ್‌

ಸಾರಾಂಶ

ಬಸ್‌ ಮಿಸ್ ಆಯ್ತು ಅಂತ ರೈಲು ಮಿಸ್ ಆಯ್ತು ಅಂತ ಅವುಗಳ ಹಿಂದೆ ಜನ ಓಡುವುದನ್ನು ನೀವು ನೋಡಿರಬಹುದು. ಆದರೆ ವಿಮಾನ ಮಿಸ್ ಆಯ್ತು  ಅಂತ ಯಾರಾದರೂ ಓಡುವುದನ್ನು ನೋಡಿದ್ದೀರಾ?  ಆ ಘಟನೆಯೂ ಈಗ ನಡೆದು ಹೋಗಿದೆ.

ಬಸ್‌ ಮಿಸ್ ಆಯ್ತು ಅಂತ ರೈಲು ಮಿಸ್ ಆಯ್ತು ಅಂತ ಅವುಗಳ ಹಿಂದೆ ಜನ ಓಡುವುದನ್ನು ನೀವು ನೋಡಿರಬಹುದು. ಆದರೆ ವಿಮಾನ ಮಿಸ್ ಆಯ್ತು  ಅಂತ ಯಾರಾದರೂ ಓಡುವುದನ್ನು ನೋಡಿದ್ದೀರಾ?  ಆ ಘಟನೆಯೂ ಈಗ ನಡೆದು ಹೋಗಿದೆ.  ಆಸ್ಟ್ರೇಲಿಯಾದಲ್ಲಿ (Australia) ಈ ಘಟನೆ ನಡೆದಿದ್ದು ಭದ್ರತಾ ಲೋಪ ಎದುರಾಗಿದೆ. ಅದರ ವೀಡಿಯೋ ಈಗ ವೈರಲ್ ಆಗಿದೆ. 

ವಿಮಾನದಲ್ಲಿ ಹೋಗುವುದು ಎಂದಾದರೆ ಕನಿಷ್ಟ ಒಂದು ಗಂಟೆಯಾದರೂ ವಿಮಾನ ನಿಲ್ದಾಣಕ್ಕೆ ಮೊದಲೇ ತಲುಪಿರಬೇಕು. ಆದರೆ ಇಲ್ಲೊಬ್ಬಳು ಮಹಿಳೆ ವಿಮಾನ ಇನ್ನೇನು ಟೇಕಾಫ್ ಆಗಬೇಕು ಅನ್ನುವಷ್ಟರಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಬಳಿಕ ವಿಮಾನದ ಕೆಳೆಗೆ ರನ್‌ವೇಯಲ್ಲಿ ಓಡುವ ಮೂಲಕ ಈಗ ಕಂಬಿ ಎಣಿಸುತ್ತಿದ್ದಾಳೆ. 

ಒಳಗೆ ಜೀವಂತ ಹುಳು ತುಂಬಿಸಿ ಮಾಡಿದ ಮೊಮೊಸ್ : ವಾಂತಿ ಬರಿಸುವ ವೀಡಿಯೋ ಸಖತ್ ವೈರಲ್‌

ಆಸ್ಟ್ರೇಲಿಯಾದ ಕ್ಯಾನ್‌ಬೆರ್ರಾದಲ್ಲಿ (Canberra Airport) ಮಹಿಳೆಯೊಬ್ಬರು ವಿಮಾನ ನಿಲ್ದಾಣಕ್ಕೆ (Airport) ವಿಳಂಬವಾಗಿ ಬಂದಿದ್ದಾರೆ. ಮಹಿಳೆ ವಿಮಾನ ಇರುವ ಜಾಗ ತಲುಪುವಷ್ಟರಲ್ಲಿ ವಿಮಾನದ ಡೋರ್‌ಗಳು ಬಂದ್ ಆಗಿದ್ದು, ಹಾರಲು ಸಿದ್ಧವಾಗಿವೆ.  ಈ ವೇಳೆ ಮಹಿಳೆ ವಿಮಾನ ನಿಂತ ಜಾಗದತ್ತ ಡಾಂಬರು ಹಾಕಿದ ರನ್‌ವೇಯಲ್ಲಿ ಅಸಹಾಯಕತೆಯಿಂದ ಓಡುವ ದೃಶ್ಯ ವೈರಲ್ ಆಗಿದೆ. 

ಟ್ರಾಫಿಕ್‌ನಲ್ಲಿ ಸಿಲುಕಿದವರಿಗೆ ಸಂಗೀತಾ ರಸದೌತಣ ನೀಡಿದ ಆಟೋ ಚಾಲಕ: ವೈರಲ್ ವೀಡಿಯೋ

ರನ್‌ವೇಯಲ್ಲಿ ಓಡಿದ ಆಕೆ ಜನ ಬಸ್‌ ನಿಲ್ಲಿಸಲು ಕೈ ತೋರಿಸುವಂತೆ  ವಿಮಾನಕ್ಕೆ ಕೈ ತೋರಿಸಿದ್ದಾಳೆ. ಆದರೆ ವಿಮಾನ ಇನ್ನು ಟೇಕಾಫ್‌ ಆಗದಿದ್ದರೂ ಆಕೆಯನ್ನು ವಿಮಾನದೊಳಗೆ ಸೇರಿಸಿಕೊಂಡಿಲ್ಲ. ಈ ವಿಚಾರವೀಗ ಭದ್ರತಾ ಲೋಪದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕ್ವಾಂಟಾಸ್ಲಿಂಕ್ ಎಂಬ ಈ ವಿಮಾನ ಕ್ಯಾನ್‌ಬೆರ್ರಾದಿಂದ ಆಡಿಲೇಡ್‌ಗೆ (Adelaide) ಹೊರಟಿತ್ತು.  ಆದರೆ ಈಕೆ ವಿಮಾನ ನಿಲ್ದಾಣಕ್ಕೆ ವಿಳಂಬವಾಗಿ ಆಗಮಿಸಿದ ಕಾರಣ ಈ ಅವಾಂತರ ನಡೆದಿದೆ.

ವೀಡಿಯೋದಲ್ಲಿ ಮಹಿಳೆಯು ವಿಮಾನ ನಿಲ್ದಾಣದ ಭದ್ರತೆಯನ್ನು ದಾಟಿ,  ರನ್‌ವೇಯಲ್ಲಿ ಸಾಗಿ ಬಂದು ಟೇಕಾಫ್ ಆಗಲು ಸಿದ್ಧವಾದ ವಿಮಾನವನ್ನು ಹತ್ತುವುದಕ್ಕಾಗಿ ಪೈಲಟ್‌ಗೆ ಸನ್ನೆ ಮಾಡುವುದನ್ನು ಕಾಣಬಹುದಾಗಿದೆ.  ಆದರೆ ಈ ಘಟನೆಯ ಬಳಿಕ ಆಸ್ಟ್ರೇಲಿಯಾದ ಫೆಡರಲ್ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಅಲ್ಲದೇ ಆಕೆಗೆ ನ್ಯಾಯಾಲಯ ಜಾಮೀನು ನಿರಾಕರಿಸಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಈ ಮಹಿಳೆ ವಿಮಾನದ ಕೆಳಗೆ ಓಡುವ ಮೂಲಕ ಭದ್ರತಾ ಲೋಪವೆಸಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?