ನ.19ಕ್ಕೆ ಏರಿಂಡಿಯಾದಲ್ಲಿ ಪ್ರಯಾಣ ಮಾಡದಿರಿ: ಖಾಲಿಸ್ತಾನ್ ಉಗ್ರನಿಂದ ಸಿಖ್ಖರಿಗೆ ಎಚ್ಚರಿಕೆ

Published : Nov 05, 2023, 11:23 AM IST
ನ.19ಕ್ಕೆ ಏರಿಂಡಿಯಾದಲ್ಲಿ ಪ್ರಯಾಣ  ಮಾಡದಿರಿ: ಖಾಲಿಸ್ತಾನ್ ಉಗ್ರನಿಂದ ಸಿಖ್ಖರಿಗೆ ಎಚ್ಚರಿಕೆ

ಸಾರಾಂಶ

ನ.19ರಂದು ಏರಿಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡಿದರೆ ನಿಮ್ಮ ಪ್ರಾಣಕ್ಕೆ ಅಪಾಯವೊದಗಲಿದೆ ಎಂದು ಖಲಿಸ್ತಾನಿ ಉಗ್ರ ಗುರುಪಂತ್ ಸಿಂಗ್ ಪನ್ನೂ ಎಚ್ಚರಿಕೆ ನೀಡಿದ್ದಾನೆ.

ನವದೆಹಲಿ: ನ.19ರಂದು ಏರಿಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡಿದರೆ ನಿಮ್ಮ ಪ್ರಾಣಕ್ಕೆ ಅಪಾಯವೊದಗಲಿದೆ ಎಂದು ಖಲಿಸ್ತಾನಿ ಉಗ್ರ ಗುರುಪಂತ್ ಸಿಂಗ್ ಪನ್ನೂ ಎಚ್ಚರಿಕೆ ನೀಡಿದ್ದಾನೆ.

ಕೆಲ ದಿನಗಳ ಹಿಂದಷ್ಟೇ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯ ನಡೆಯಲಿರುವ ಗುಜರಾತ್‌ನ ಅಹಮದಾಬಾದ್ ಸ್ಟೇಡಿಯ೦ಗೆ (Ahmedabad stadium) ನುಗ್ಗುವುದಾಗಿ ಬೆದರಿಕೆ ಹಾಕಿದ್ದ ಇದೇ ಪನ್ನೂ ಇದೀಗ ವಿಶ್ವಕಪ್ ಫೈನಲ್ (World Cup cricket)ನಡೆಯುವ ದಿನದಂದು ಭಾರೀ ಅನಾಹುತದ ಎಚ್ಚರಿಕೆ ನೀಡಿದ್ದಾನೆ.

ರಾಜತಾಂತ್ರಿಕ ಬಿಕ್ಕಟ್ಟಿನ ನಂತರ ಕೆನಡಾ ಜನರಿಗೆ ವೀಸಾ ಸೇವೆ ಮರು ಆರಂಭಿಸಿದ ಭಾರತ

ಈ ಕುರಿತಾಗಿ ಪನ್ನು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, 'ನ.19ರಂದು ಸಿಖ್ಖರು ಯಾವುದೇ ಕಾರಣಕ್ಕೂ ಏರಿಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡಬೇಡಿ, ಮಾಡಿದರೆ ನಿಮ್ಮ ಪ್ರಾಣಕ್ಕೆ ತೊಂದರೆಯಾಗಬಹುದು. ನ.19ರಂದು ಜಾಗತಿಕವಾಗಿ ಏರಿಂಡಿಯಾ ಮೇಲೆ ಮುತ್ತಿಗೆ ಹಾಕಲಾಗುತ್ತದೆ' ಎಂದು ಹೇಳಿದ್ದಾನೆ.

ಯಾರು ಈ ಪನ್ನು?

ಈತ ನಿಷೇಧಿತ ಸಿಖ್ಸ್‌ ಫಾರ್ ಜಸ್ಟೀಸ್ ಸಂಘಟನೆಯ (Sikhs for Justice organization) ಮುಖ್ಯಸ್ಥ, ಕೆನಡಾ ವಾಸಿ, ಈತನ ವಿರುದ್ಧದೇಶ ದ್ರೋಹ ಸೇರಿದಂತೆ 22ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣ ಗಳಿವೆ. ಭಾರತದ ವಿರೋಧಿ ಕೃತ್ಯಗಳಲ್ಲಿ ಈತ ಸಕ್ರಿಯ. 1985ರಲ್ಲಿ ಕೆನಡಾದಿಂದ ಭಾರತಕ್ಕೆ ಬರುತ್ತಿದ್ದ ಏರಿಂಡಿಯಾ (Air India) ವಿಮಾನದಲ್ಲಿ ಬಾಂಬ್ ಸ್ಫೋಟಿಸಿ, 24 ಭಾರತೀಯರು ಸೇರಿದಂತೆ 320 ಜನರ ಸಾವಿಗೆ ಖಲಿಸ್ತಾನಿ ಉಗ್ರರು ಕಾರಣವಾಗಿದ್ದರು. ಜೊತೆಗೆ 1981ರಲ್ಲಿ ಏರಿಂಡಿಯಾ ವಿಮಾನ ಹೈಜಾಕ್ ಮಾಡಿದ್ದರು.

ನಿಜ್ಜರ್ ಹತ್ಯೆಯ ಸಾಕ್ಷ್ಯ ಭಾರತಕ್ಕೆ ಕೊಡಲ್ಲ ಕೋರ್ಟಿಗೆ ಕೊಡೇವೆ: ಕೆನಡಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ