ಶಾಂತಿಗಾಗಿ ಚಾನ್ಸ್ ಕೊಡಿ ಎಂದವರಿಂದ ಸೇಡು ಶತಃಸಿದ್ಧ ಎನ್ನುವ ಬೊಬ್ಬೆ

By Web DeskFirst Published Feb 27, 2019, 10:43 AM IST
Highlights

ಭಾರತ ನಮ್ಮ ನೆಲದ ಮೇಲೆ ದಾಳಿ ನಡೆಸಿದೆ. ಇದಕ್ಕೆ ಸೂಕ್ತಕಾಲದಲ್ಲಿ, ಸೂಕ್ತ ಸ್ಥಳ ಗುರುತಿಸಿ ಪ್ರತೀಕಾರ ತೀರಿಸಿಕೊಳ್ಳಲಿದ್ದೇವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 

ಇಸ್ಲಾಮಾಬಾದ್: ‘ಗಡಿ ನಿಯಂತ್ರಣ ರೇಖೆ ದಾಟಿ ಕದನ ವಿರಾಮ ನಿಯಮ ಉಲ್ಲಂಘಿಸಿ ಭಾರತ ನಮ್ಮ ನೆಲದ ಮೇಲೆ ದಾಳಿ ನಡೆಸಿದೆ. ಇದಕ್ಕೆ ಸೂಕ್ತಕಾಲದಲ್ಲಿ, ಸೂಕ್ತ ಸ್ಥಳ ಗುರುತಿಸಿ ಪ್ರತೀಕಾರ ತೀರಿಸಿಕೊಳ್ಳಲಿದ್ದೇವೆ. ಭಾರತ ಈ ದಾಳಿಯ ಮೂಲಕ ಪಾಕಿಸ್ತಾನದ ಜನತೆಯನ್ನು ಕೆಣಕಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಗಡಿ ನಿವಾಸಿಗಳು ಎಚ್ಚರದಿಂದ ಇರಬೇಕು. ಯಾವುದೇ ಸವಾಲು ಎದುರಿಸಲು ಸಿದ್ಧರಾಗಿ’ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಯಾವುದೇ ಕ್ಷಣದಲ್ಲಿ ಯಾವುದೇ ಬೆಳವಣಿಗೆ ನಡೆಯಬಹುದು. ಪಾಕ್ ಮೇಲೆ ಆಕ್ರಮಣಕಾರಿ ನೀತಿ ಅನುಸರಿಸುತ್ತಿರುವ ಭಾರತದ ವಿರುದ್ಧ ಸೇಡು ತೀರಿಸಕೊಳ್ಳಬೇಕಿದೆ. ಅನಗತ್ಯವಾಗಿ ಪಾಕಿಸ್ತಾನವನ್ನು ಕೆಣಕಲು ಭಾರತ ಮುಂದಾಗುತ್ತಿದೆ. ಜೈಷ್ ಎ-ಮೊಹ್ಮದ್ ಉಗ್ರರ ತಾಣಗಳ ಮೇಲೆ ದಾಳಿ ನಡೆಸಿ, 200 ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಭಾರತ ಹೇಳಿಕೊಳ್ಳುತ್ತಿದೆ. 

ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ: ಪುಲ್ವಾಮಾ ದಾಳಿ ಮರುದಿನವೇ ಪ್ಲ್ಯಾನ್ ರೆಡಿ!

ಆದರೆ, ಈ ಪ್ರದೇಶದಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಆದರೆ, ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿರುವ ಭಾರತದ  ವಿರುದ್ಧ ಸೇಡು ತೀರಿಸಿಕೊಳ್ಳುವುದು ನಿಶ್ಚಿತ ಎಂದು ಇಮ್ರಾನ್ ಗುಡುಗಿದ್ದಾರೆ.

ಟ್ರೋಲ್ ಆಯ್ತು ಪಾಕಿಸ್ತಾನ, ಸಂಭ್ರಮಾಚರಣೆ ನಡುವೆ ನಗುವಿನ ಗುಳಿಗೆ

ದಾಳಿ ನಡೆದು ಕೆಲವೇ ಗಂಟೆಗಳಲ್ಲಿ ಇಮ್ರಾನ್ ಖಾನ್ ತಮ್ಮ ಕಚೇರಿಯಲ್ಲೇ ರಾಷ್ಟ್ರೀಯ ಭದ್ರತಾ ಕಮಿಟಿ ಜತೆ ತುರ್ತು ಸಭೆ ಸೇರಿ ಚರ್ಚಿಸಿದರು. ಸಭೆಯಲ್ಲಿ ವಿದೇಶಾಂಗ ಸಚಿವರು, ರಕ್ಷಣಾ ಮತ್ತು ವಿತ್ತ ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

click me!