* ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ಗೇನಾಗಿದೆ?
* ಕಳೆಗುಂದಿದ ಮುಖ: ಕಿಮ್‌ಜಾಂಗ್ ಆರೋಗ್ಯದ ಬಗ್ಗೆ ಕೊರಿಯಾ ಜನ ಆತಂಕ
* ದೇಹದ ತೂಕ ಇಳಿಸಿಕೊಳ್ಳಲು ಕಿಮ್ ಜಾಂಗ್ ಉನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂಬ ಊಹಾಪೋಹಗ
ಸೋಲ್(ಜೂ.29): ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದೇಹದ ತೂಕ ಇಳಿಸಿಕೊಂಡು ತೆಳ್ಳಗಾಗಿರುವ ಇತ್ತೀಚಿನ ಫೋಟೋವೊಂದು ಬಿಡುಗಡೆ ಆಗಿದೆ.
ದೇಹದ ತೂಕ ಇಳಿಸಿಕೊಳ್ಳಲು ಕಿಮ್ ಜಾಂಗ್ ಉನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂಬ ಊಹಾಪೋಹಗಳ ಬೆನ್ನಲ್ಲೇ, ಫೋಟೋ ಬಿಡುಗಡೆ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ತಮ್ಮ ನಾಯಕನ ಮುಖ ಕಳೆಗುಂದಿರುವುದಕ್ಕೆ ಜನರು ಆತಂಕಗೊಂಡಿದ್ದಾರೆ ಎಂದು ಉತ್ತರ ಕೊರಿಯಾದ ಮಾಧ್ಯಮವೊಂದು ವರದಿ ಮಾಡಿರುವುದು, ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಸುಮಾರು 140 ಕೆ.ಜಿ. ತೂಕ ಇದ್ದ ಕಿಮ್ ಜಾಂಗ್ ಉನ್ 20 ಕೇಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಡಯಟ್‌ನಿಂದಾಗಿ ಕಿಮ್ ತೂಕ ಇಳಿಸಿಕೊಂಡಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಕಾಯಿಲೆಯಿಂದಾಗಿ ತೂಕ ಇಳಿದಿರಬಹುದು ಎಂದು ಊಹಿಸಿದ್ದಾರೆ.