ಭಾರತೀಯ ಶ್ರೀಮಂತರು ಗ್ರೀಸ್‌ನಲ್ಲಿ ಆಸ್ತಿ ಖರೀದಿಗೆ ಮುಗಿಬಿದ್ದಿದ್ದೇಕೆ?

By Anusha Kb  |  First Published Sep 19, 2024, 7:54 PM IST

 ಭಾರತೀಯ ಹೂಡಿಕೆದಾರರು ಗ್ರೀಸ್‌ನಲ್ಲಿ ಆಸ್ತಿ ಖರೀದಿಸಲು ಮುಗಿಬಿದ್ದಿದ್ದು, ಗ್ರೀಸ್‌ನಲ್ಲಿ  ಕೇವಲ ಕೆಲ ತಿಂಗಳಲ್ಲಿ ಭಾರತೀಯರು ಆಸ್ತಿ ಖರೀದಿಸುವ ಪ್ರಮಾಣ ಶೇಕಡಾ 37ರಷ್ಟು ಏರಿಕೆ ಆಗಿದೆ ಎಂದು ವರದಿಯಾಗಿದೆ. ಭಾರತೀಯರು ಗ್ರೀಸ್‌ನಲ್ಲಿ ಈ ರೀತಿ ಆಸ್ತಿ ಖರೀದಿಸಲು ಕಾರಣ ಏನು ಇಲ್ಲಿದೆ ಡಿಟೇಲ್ ಸ್ಟೋರಿ.


ಗ್ರೀಸ್: ಭಾರತೀಯ ಹೂಡಿಕೆದಾರರು ಗ್ರೀಸ್‌ನಲ್ಲಿ ಆಸ್ತಿ ಖರೀದಿಸಲು ಮುಗಿಬಿದ್ದಿದ್ದು, ಗ್ರೀಸ್‌ನಲ್ಲಿ  ಕೇವಲ ಕೆಲ ತಿಂಗಳಲ್ಲಿ ಭಾರತೀಯರು ಆಸ್ತಿ ಖರೀದಿಸುವ ಪ್ರಮಾಣ ಶೇಕಡಾ 37ರಷ್ಟು ಏರಿಕೆ ಆಗಿದೆ ಎಂದು ವರದಿಯಾಗಿದೆ. ಭಾರತೀಯರು ಗ್ರೀಸ್‌ನಲ್ಲಿ ಈ ರೀತಿ ಆಸ್ತಿ ಖರೀದಿಸಲು ಕಾರಣ ಏನು ಇಲ್ಲಿದೆ ಡಿಟೇಲ್ ಸ್ಟೋರಿ.

ಗ್ರೀಸ್‌ ದೇಶ ವೀಸಾಗೆ ಅರ್ಹತೆ ಪಡೆಯಲು ಅಗತ್ಯವಾದ ಕನಿಷ್ಠ ಹೂಡಿಕೆಯನ್ನು  ದ್ವಿಗುಣಗೊಳಿಸುವ ದೇಶದ ಗೋಲ್ಡನ್ ವೀಸಾ ಪ್ರೋಗ್ರಾಂನ್ನು ಗ್ರೀಸ್ ಈಗಾಗಲೇ ಜಾರಿಗೆ ತಂದಿದ್ದು, ಅದು ಸೆಪ್ಟೆಂಬರ್‌ 1 ರಿಂದ ಕಾರ್ಯರೂಪಕ್ಕೆ ಬಂದಿದೆ. . ಈ ಹಿನ್ನೆಲೆಯಲ್ಲಿ ಈ ಬದಲಾವಣೆಗೂ ಮೊದಲು ಗ್ರೀಸ್‌ನಲ್ಲಿ ಭಾರತೀಯ ಹೂಡಿಕೆದಾರರು, ಇಷ್ಟೊಂದು ದೊಡ್ಡ ದಾಖಲೆಯ ವೇಗದಲ್ಲಿ ಆಸ್ತಿ ಖರೀದಿಸಿದ್ದಾರೆ ಎಂದು ವರದಿಯಾಗಿದೆ.  ಗ್ರೀಸ್‌ನ ಈ ಗೋಲ್ಡನ್ ವೀಸಾ ಯೋಜನೆಯಡಿ ಭಾರತೀಯರು ತಮ್ಮ ಶಾಶ್ವತವಾದ ಮನೆಯನ್ನು ಸುಭದ್ರಪಡಿಸಿಕೊಳ್ಳುವುದಕ್ಕೆ ಮುಂದಾದ ಹಿನ್ನೆಲೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಭಾರತೀಯರು ಅಲ್ಲಿ ಆಸ್ತಿ ಖರೀದಿಸಿದ್ದಾರೆ. 

Tap to resize

Latest Videos

undefined

2013ರಲ್ಲಿ ಲಾಂಚ್ ಆದ ಈ ಗೋಲ್ಡನ್ ವೀಸಾ ಕಾರ್ಯಕ್ರಮವೂ  ಹೊರಗಿನವರಿಗೆ ಆಸ್ತಿ ಮೇಲೆ ಹೂಡಿಕೆ ಮಾಡುವುದಕ್ಕೆ ಪ್ರತಿಯಾಗಿ ಅಲ್ಲಿನ ನಿವಾಸಿಗಳಾಗುವುದಕ್ಕೆ ಪರವಾನಗಿ ನೀಡುತ್ತದೆ. ಇದು ಯುರೋಪಿಯನ್ನರಲ್ಲದ ನಾಗರಿಕರಿಗೆ ಅಲ್ಲಿನ ನಿವಾಸಿಗಳಾಗಲು ಸಿಗುವ ಒಂದು ಉತ್ತಮ ಆಕರ್ಷಕ ಅವಕಾಶವಾಗಿದೆ. ಇಲ್ಲಿನ ಆರಂಭಿಕ  ಹೂಡಿಕೆ ಮಿತಿ 250,000 ಯುರೋ ಇದ್ದು (2.2 ಕೋಟಿ ಭಾರತೀಯ ರೂಪಾಯಿಗಳು) ಇದು ಯುರೋಪ್‌ನಲ್ಲೇ ಅತ್ಯಂತ ಕಡಿಮೆಯಂತೆ ಹೀಗಾಗಿ ಇದು ಮಹತ್ವದ ಹೂಡಿಕೆಯನ್ನು ತನ್ನತ್ತ ಸೆಳೆದಿದ್ದು, ಅಲ್ಲಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಉತ್ತೇಜಿಸಿದೆ. 

ಆದರೆ ಹೀಗೆ ಹೊರಗಿನವರ ಅತೀಯಾದ ಬೇಡಿಕೆಯಿಂದಾಗಿ ಆಸ್ತಿಯ ದರ ತೀರಾ ದುಬಾರಿಯಾಗಿದೆ. ಅದರಲ್ಲೂ ಅತ್ಯಂತ ಹೆಚ್ಚು ಬೇಡಿಕೆ ಇರುವ ಅಥೆನ್ಸ್‌, ಥಿಸ್ಸಲೊನಿಕಿ, ಮೈಕೊನೊಸ್‌ ಹಾಗೂ ಸಂತೊರ್ನಿ ಮುಂತಾದ ಪ್ರದೇಶಗಳಲ್ಲಿ ಆಸ್ತಿಯ ಬೆಲೆ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಮಾಡುವ ಹೂಡಿಕೆ ಮಿತಿಯನ್ನು ಗ್ರೀಸ್‌ ಸರ್ಕಾರವೂ 800.000 ಯುರೋಗಳಿಗೆ (ಅಂದಾಜು 7 ಕೋಟಿ ಭಾರತೀಯ ರೂಪಾಯಿಗಳು) ಏರಿಸಿದೆ. ಸೆಪ್ಟೆಂಬರ್ 1 ರಿಂದಲೇ ಈ ಪ್ರದೇಶದಲ್ಲಿ ಈ ದರ ಜಾರಿಗೆ ಬಂದಿದೆ. 

ಲೆಪ್ಟೋಸ್ ಎಸ್ಟೇಟ್‌ನ ಗ್ಲೋಬಲ್ ಮಾರ್ಕೆಟಿಂಗ್ ಡೈರೆಕ್ಟರ್ ಸಂಜಯ್ ಸಚ್‌ದೇವ್ ಅವರು, ಇಲ್ಲಿ  ಇತ್ತೀಚಿನ ತಿಂಗಳುಗಳಲ್ಲಿ ಭಾರತೀಯ ಮನೆ ಖರೀದಿದಾರ ಅನಿರೀಕ್ಷಿತ ಏರಿಕೆಯನ್ನು ಗಮನಿಸಿದ್ದಾರೆ. ಭಾರತೀಯ ಮೂಲದ ಈ ಹೂಡಿಕೆದಾರರು,  ಆರರಿಂದ ಹನ್ನೆರಡು ತಿಂಗಳಲ್ಲಿ ಹಸ್ತಾಂತರಿಸಲ್ಪಡುವ ನಿರ್ಮಾಣ ಹಂತದ ಯೋಜನೆಗಳನ್ನು ಖರೀದಿ ಮಾಡಿದ್ದಾರೆ ಎಂದು ಸಂಜಯ್ ಸಚ್‌ದೇವ್ ಹೇಳಿದ್ದಾರೆ. ಬಹುತೇಕರು ನಿರ್ಮಾಣ ಹಂತದಲ್ಲಿರುವ ಆಸ್ತಿಗಳನ್ನು  ಖರೀದಿ ಮಾಡಿದ್ದಾರೆ. ಇವುಗಳನ್ನು ಆರರಿಂದ 12 ತಿಂಗಳಲ್ಲಿ ಪೂರ್ಣಗೊಳಿಸಿ ಖರೀದಿದಾರರಿಗೆ ಹಸ್ತಾಂತರಿಸಲಾಗುತ್ತದೆ. ಹೀಗೆ ವಿಪರೀತವಾಗಿ ಏರಿದ ಬೇಡಿಕೆಯಿಂದಾಗಿ  ಗ್ರೀಸ್‌ನಲ್ಲಿ ಲಭ್ಯವಿರುವ ವಸತಿ ನಿವೇಶನಗಳನ್ನು ಅನ್ನು ಲೆಪ್ಟೋಸ್ ಎಸ್ಟೇಟ್ಸ್ ಮಾರಾಟ ಮಾಡಿದೆ ಎಂದು ಅವರು ಹೇಳಿದ್ದಾರೆ. 

ಭಾರತೀಯ ಕೋಟ್ಯಾಧಿಪತಿಗಳನ್ನು ಸೆಳೆದಿದ್ದೇನು?

  • ಕಡಿಮೆ ಅಭಿವೃದ್ಧಿ ಪ್ರದೇಶದಲ್ಲಿ ನೇರ ಹೂಡಿಕೆಗೆ ಅವಕಾಶ, 
  • ಗ್ರೀಸ್‌ನಲ್ಲಿ ಪ್ರತಿ ವರ್ಷ 3 ರಿಂದ 5 ಶೇಕಡಾದಷ್ಟು ಆಕರ್ಷಕ ಹಣ ಬಾಡಿಗೆಯಿಂದ ಬರುತ್ತದ
  • ಹೀಗಾಗಿ ಇಲ್ಲಿ ಆಸ್ತಿ ಮೇಲೆ ಹೂಡಿಕೆ ಮಾಡುವುದು ಆರ್ಥಿಕವಾಗಿ ಲಾಭದಾಯಕ 
  • ಇಲ್ಲಿ ಹೂಡಿಕೆ ಮಾಡುವವರಿಗೆ ಉನ್ನತ ದರ್ಜೆಯ ಆರೋಗ್ಯ ಯೋಜನೆಯ ಸೌಲಭ್ಯ ಸಿಗುತ್ತದೆ 
  • ಅಲ್ಲದೇ ಅಲ್ಲೇ ಉದ್ಯಮವನ್ನು ಆರಂಭಿಸುವ ಅವಕಾಶ ನೀಡುತ್ತದೆ. 

ಹೀಗಾಗಿ ಸೆಪ್ಟೆಂಬರ್ 1 ರಂದು ಕನಿಷ್ಠ ಹೂಡಿಕೆಯ ಬೆಲೆ ದ್ವಿಗುಣಗೊಳ್ಳುವ ಮೊದಲು ಭಾರತೀಯರು ಇಲ್ಲಿನ ಪ್ರಮುಖ ಪ್ರಸಿದ್ಧ ದ್ವೀಪಗಳಾದ ಪರೋಸ್, ಕ್ರಿಟಿ, ಸಂತೊರಿನಿ ಮುಂತಾದ ಪ್ರದೇಶಗಳಲ್ಲಿ ಆಸ್ತಿ ಖರೀದಿಸಿದ್ದಾರೆ. 

click me!