ಮಗನ ಶಾಲೆ ಫೀಸ್ ಸೇರಿದಂತೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಡೆಲಿವರಿ ಎಜೆಂಟ್ ಸತತ 18 ಗಂಟೆ ಕೆಲಸ ಮಾಡಿ ಬಳಲಿದ ಕಾರಣ ಬೈಕ್‌ನಲ್ಲೇ ನಿದ್ದಿಗೆ ಜಾರಿದ್ದಾರೆ. ಆದರೆ ಮತ್ತೆ ಮೇಲೇಳಲೇ ಇಲ್ಲ. ಬೈಕ್‌ನಲ್ಲಿ ಡೆಲಿವರಿ ಎಜೆಂಟ್ ದುರಂತ ಅಂತ್ಯ ಇದೀಗ ಹಲವ ಕಣ್ಣಾಲಿ ತೇವಗೊಳಿಸಿದೆ.
ಬೀಜಿಂಗ್(ಸೆ.19) ಇಬ್ಬರು ಮಕ್ಕಳ ಶಾಲೆ ಫೀಸ್, ಆರೋಗ್ಯ ಸಮಸ್ಯೆ, ಕುಟುಂಬ ನಿರ್ವಹಣೆಗೆ ಆರ್ಥಿಕ ಸಮಸ್ಯೆಯಿಂದ ಹೆಣಗಾಡುತ್ತಿದ್ದ ಡೆಲಿವರಿ ಎಜೆಂಟ್ ಓವರ್ ಟೈಮ್ ಕೆಲಸ ಮಾಡಿ ಇದೀಗ ದುರಂತ ಅಂತ್ಯ ಕಂಡ ಘಟನೆ ನಡೆದಿದೆ. ಡೆಲಿವರಿ ವೇಳೆ ಬೈಕ್ ಅಪಘಾತದಿಂದ ಗಾಯಗೊಂಡು ಹೆಚ್ಚು ದಿನ ವಿಶ್ರಾಂತಿ ಪಡೆಯದೇ ಕೆಲಸಕ್ಕೆ ಮರಳಿದ್ದ 55 ವರ್ಷದ ಡೆಲಿವರಿ ಎಜೆಂಟ್, ಇದೀಗ ಹಿರಿಯ ಮನಗ ಶಾಲಾ ಶುಲ್ಕ ಕಟ್ಟಲು ಅಂತಿಮ ದಿನ ಸಮೀಪಿಸಿದ ಕಾರಣ ಸತತ 18 ಗಂಟೆ ಕೆಲಸ ಮಾಡಿ ಬಳಲಿ ಬೈಕ್‌ನಲ್ಲೇ ನಿದ್ದಿಗೆ ಜಾರಿದ್ದಾನೆ. ಆದರೆ ನಿದ್ದೆಯಲ್ಲೇ ಡೆಲಿವರಿ ಎಜೆಂಟ್ ಮೃತಪಟ್ಟ ಘಟನೆ ಚೀನಾದಲ್ಲಿ ನಡೆದಿದೆ.
55 ವರ್ಷದ ಡೆಲಿವರಿ ಎಜೆಂಟ್ ಯೂಆನ್ ಓವರ್ ಟೈಮ್ ಕೆಲಸ ಮಾಡಿ, ನಿದ್ದೆ, ವಿಶ್ರಾಂತಿ ಇಲ್ಲದೆ ಬಳಲಿದ್ದಾರೆ. ಇದರ ಪರಿಣಾಮ ಕುಟುಂಬದ ಜೀವನಾಧಾರವೇ ಇಲ್ಲವಾಗಿದೆ. ಚೀನಾದ ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಎಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಯೂಆನ್, ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಕಳೆದ ತಿಂಗಳು ಯೂಆನ್ ಡೆಲಿವರಿ ಮಾಡುವ ವೇಳೆ ಅಪಘಾತಕ್ಕೀಡಾಗಿದ್ದರು.
ಕೊಂಚ ತಡವಾದ ಕಾರಣಕ್ಕೆ ಮಹಿಳೆಯ ಬೈಗುಳ, ಬದುಕು ಅಂತ್ಯಗೊಳಿಸಿದ ಡೆಲಿವರಿ ಬಾಯ್!
ಬೈಕ್‌ನಲ್ಲಿ ಡೆಲಿವರಿ ಮಾಡುವಾಗ ಸಂಭವಿಸಿದ ಅಪಘಾತದಲ್ಲಿ ಕಾಲಿಗೆ ತೀವ್ರ ಗಾಯವಾಗಿತ್ತು. ಇದರ ಜೊತೆಗೆ ಕೆಲ ಸಣ್ಣಗಾಯಗಳಾಗಿತ್ತು. ವೈದ್ಯರು ಕನಿಷ್ಠ 25 ದಿನ ವಿಶ್ರಾಂತಿಗೆ ಸೂಚಿಸಿದ್ದರು. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ನೆಟ್ಟಗಿಲ್ಲದ ಕಾರಣ ಕೇವಲ 10 ದಿನದಲ್ಲಿ ಅಂದರೆ 5 ದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ಇನ್ನುಳಿದ 5 ದಿನ ಮನೆಯಲ್ಲಿ ವಿಶ್ರಾಂತಿ ಪಡೆದು ಕೆಲಸಕ್ಕೆ ಮರಳಿದ್ದರು.
ಈ ಅಪಘಾತದಲ್ಲಿ ಸರಿಯಾಗಿ ವಿಶ್ರಾಂತಿ ಪಡೆಯದೆ ಯೂಆನ್ ಜೀವನ ನಿರ್ವಹಣೆ ಮತ್ತೆ ಕೆಲಸಕ್ಕೆ ಹಾಜರಾಗಿದ್ದರು. ಹಿರಿಯ ಮಗನ ಶಾಲೆ ಶುಲ್ಕ ಕಟ್ಟಲು ಅಂತಿಮ ದಿನಾಂಕ ಸಮೀಪಿಸಿತ್ತು. ಹೀಗಾಗಿ ಶಾಲಾ ಶುಲ್ಕ ಕಟ್ಟಲು ಡೆಲಿವರಿ ಎಜೆಂಟ್ ಸತತವಾಗಿ 18 ಕೆಲಸ ಮಾಡಿದ್ದಾನೆ. ಹೆಚ್ಚುವರಿ ಹಣದಿಂದ ಮಗನ ಶಾಲೆ ಫೀಸ್ ಕಟ್ಟಲು ಸಾಧ್ಯವಾಗಲಿದೆ ಅನ್ನೋ ದೃಷ್ಟಿಯಿಂದ ಹೆಚ್ಚುವರಿ ಕೆಲಸ ಮಾಡಿದ್ದಾರೆ. ಆದರೆ ಸತತ 18 ಗಂಟೆ ಕೆಲಸದಿಂದ ದೇಹ ಸಂಪೂರ್ಣ ದಣಿದಿದೆ. ಹೀಗಾಗಿ ಬೈಕ್ ಮೇಲೆ ಸ್ವಲ್ಪ ಹೊತ್ತ ನಿದ್ದೆ ಮಾಡಿ ಮತ್ತೆ ಡೆಲಿವರಿ ಮುಂದುವರಿಸಲು ನಿರ್ಧರಿಸಿದ ಎಜೆಂಟ್ ಮಲಗಿದ್ದಲ್ಲೇ ಪ್ರಾಣ ಬಿಟ್ಟಿದ್ದಾರೆ. ಬೈಕ್ ಮೇಲಿಂದ ಕುಸಿದು ಕೆಳಕ್ಕೆ ಬೀಳುತ್ತಿದ್ದಂತೆ ಪಾರ್ಕಿಂಗ್ ಸ್ಲಾಟ್‌ನಲ್ಲಿದ್ದ ಕೆಲವರು ಡೆಲಿವರಿ ಎಜೆಂಟ್‌ನ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಅದಕ್ಕೂ ಮೊದಲೇ ಡೆಲಿವರಿ ಎಜೆಂಟ್ ಪ್ರಾಣ ಪಕ್ಷಿ ಹಾರಿಹೋಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಕೆಲಸ ಕಳೆದುಕೊಂಡು ಡೆಲಿವರಿ ಬಾಯ್ ಆದ ಟೆಕ್ಕಿ, ಬೀದಿಗೆ ಬಿದ್ದು ಬೀದಿಯಿಂದ ಕಟ್ಟಿದ ಜೀವನ ನೆನೆದು ಭಾವುಕ!
ಇದೀಗ ಓವರ್ ಟೈಮ್, ಒತ್ತಡದ ಕೆಲಸ ಕುರಿತು ಭಾರಿ ಚರ್ಚೆಗಳಾಗುತ್ತಿದೆ. ಉದ್ಯೋಗ ಕಡಿತ, ಜೀವನ ನಿರ್ವಹಣೆ ಸೇರಿದಂತೆ ಹಲವು ಕಾರಣಗಳಿಂದ ಸಂಸ್ಥೆಗಳು ಉದ್ಯೋಗಿಗಳನ್ನು ಹೆಚ್ಚು ಕೆಲಸ ಮಾಡಿಸುತ್ತಿದೆ ಅನ್ನೋ ಚರ್ಚಗಳು ಜೋರಾಗುತ್ತಿದೆ. ಇದಕ್ಕೆ ಇತ್ತೀಚೆಗೆ ನಡೆದ ಉದ್ಯೋಗಿ ತೀವ್ರ ಕೆಲಸದ ಒತ್ತಡದಿಂದ ಬದುಕು ಅಂತ್ಯಗೊಳಿಸಿದ ಘಟನೆಯೂ ಸೇರಿಕೊಂಡಿದೆ.