ಇಸ್ರೇಲ್ ತನ್ನ ಎದುರಾಳಿಗಳನ್ನು ಮಣಿಸಲು ನವೀನ ವಿಧಾನಗಳನ್ನು ಬಳಸುತ್ತಿದೆ. ಬುಕ್ ಬಾಂಬ್‌ಗಳಿಂದ ಹಿಡಿದು ವಿಷಪೂರಿತ ಟೂತ್‌ಪೇಸ್ಟ್‌ಗಳವರೆಗೆ, ಅವರ ಕಾರ್ಯಗಳು ಧೈರ್ಯ ಮತ್ತು ವಿವಾದ ಎರಡನ್ನೂ ಹುಟ್ಟುಹಾಕುತ್ತವೆ.
ಬೆಂಗಳೂರು (ಸೆ.18): ವಿರೋಧಿಗಳ ಮೇಲೆ ಇಸ್ರೇಲ್ ಮತ್ತೊಂದು ಡೆಡ್ಲಿ ಅಟ್ಯಾಕ್ ಮಾಡಿದೆ. ಪ್ಯಾಲೆಸ್ತೇನಿಯನ್ನರ ಕಿರುಕುಳ ಜಾಸ್ತಿ ಆದಾಗ ಹಮಾಸ್‌ನ ಕ್ರಿಮಿಗಳನ್ನು ಪ್ಯಾಲಿಸ್ತೇನ್‌ನ ಗಲ್ಲಿಗಲ್ಲಿಗಳಲ್ಲಿ ಹುಡುಕಿ ಹೊಸಕಿ ಹಾಕಿದ್ದ ಇಸ್ರೇಲ್‌ಗೆ ಪಕ್ಕದ ಲೆಬನಾನ್‌ನಿಂದ ಪ್ರತಿರೋಧ ವ್ಯಕ್ತವಾಗಿತ್ತು. ಪ್ಯಾಲೆಸ್ತೇನ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದನ್ನೇ ನೆಪವಾಗಿಸಿಕೊಂಡ ಲೆಬನಾನ್ ತನ್ನ ಹಿಜ್ಬೊಲ್ಲಾ ಉಗ್ರ ಸಂಘಟನೆಯ ಮೂಲಕ ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡಲು ಆರಂಭ ಮಾಡಿತು. ಇದಕ್ಕೆ ಇರಾನ್‌ನ ನೆರವು ಕೂಡ ಇದ್ದಿದ್ದು ಸಾಬೀತಾಗಿತ್ತು. ಇಲ್ಲಿಯ ತನಕ ಹೆಚ್ಚೂ ಕಡಿಮೆ ಸುಮ್ಮನಿದ್ದ ಇಸ್ರೇಲ್, ಈಗ ಏಕಾಏಕಿ ಲೆಬನಾನ್‌ನ ಹಿಜ್ಬೊಲ್ಲಾ ಉಗ್ರರ ಮೇಲೆ ಬಾಂಬ್ ದಾಳಿ ಮಾಡಿದೆ. ಹಾಗಂತ, ತನ್ನ ಯುದ್ಧ ವಿಮಾನಗಳ ಮೂಲಕ ಈ ದಾಳಿ ಮಾಡಿಲ್ಲ. ಬದಲಾಗಿ, ಅವರು ಬಳಸುತ್ತಿದ್ದ ಪೇಜರ್‌ಗಳನ್ನೇ ಇಸ್ರೇಲ್ ಬಾಂಬ್ ಆಗಿ ಪರಿವರ್ತನೆ ಮಾಡಿದೆ. ಇದು ವಿಶ್ವದ ಆತಂಕಕ್ಕೂ ಕಾರಣವಾಗಿದೆ. ಹಾಗಂತ ತನ್ನ ಎದುರಾಳಿಗಳನ್ನು ಮಣಿಸಲು ಇನೋವೇಟಿವ್ ಆದ ಐಡಿಯಾಗಳನ್ನು ಇಸ್ರೇಲ್ ಬಳಸಿದ್ದು ಇದು ಮೊದಲೇನಲ್ಲ.
ಬುಕ್ ಬಾಂಬ್ ರೆಡಿ ಮಾಡಿತ್ತು ಇಸ್ರೇಲ್: 1970ರಲ್ಲಿ ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್‌ನ್ನು ಕೊಲ್ಲಲೇಬೇಕು ಎಂದು ಅಮೆರಿಕ ಪಣ ತೊಟ್ಟಿತ್ತು. ಅದಕ್ಕಾಗಿ ಇಸ್ರೇಲ್‌ನ ಸಹಾಯ ಕೋರಿತ್ತು. ಇಸ್ರೇಲ್ ಸದ್ದಾಂ ಹುಸೇನ್‌ನನ್ನು ಕೊಲ್ಲುವ ಸಲುವಾಗಿ ಬುಕ್ ಬಾಂಬ್‌ಅನ್ನು ರೆಡಿ ಮಾಡಿತ್ತು. ಸದ್ದಾಂ ಹುಸೇನ್ ಬಳಸುವ ಬುಕ್‌ನಲ್ಲಿ ಬಾಂಬ್ ಇಟ್ಟಿತ್ತು. ಆದರೆ, ಅಂದು ಆ ಬುಕ್‌ಅನ್ನು ಸದ್ದಾಂ ತೆರೆದಿರಲಿಲ್ಲ. ಅಂದು ಬುಕ್ ಬಾಕ್ಸ್ ತೆರೆದಿದ್ದ ಇರಾಕ್ ಅಧಿಕಾರಿಯೊಬ್ಬರು ದುರ್ಮರಣ ಕಂಡಿದ್ದರು.
undefined
ಟೂಥ್ಪೇಸ್ಟ್ನಲ್ಲಿ ವಿಷವಿಟ್ಟದ್ದ ಇಸ್ರೇಲ್: 1978ರಲ್ಲಿ ಪ್ಯಾಲಿಸ್ತೇನ್ ಟೆರರ್ ವಾದಿ ಹದ್ದಾದ್ಗೆ ಟೂಥ್ಪೇಸ್ಟ್ನಲ್ಲಿ ವಿಷ ಇಟ್ಟು ಸಾಯಿಸಲಾಗಿತ್ತು. ಹಲವು ದಿನಗಳವರೆಗೆ ಇದೇ ಟೂಥ್‌ಪೇಸ್ಟ್ ಅನ್ನು ವಾದಿ ಹದ್ದಾದ್ ಬಳಕೆ ಮಾಡಿದ್ದ. ಆ ಬಳಿಕ ಹೊಟ್ಟೆ ನೋವು ಆರಂಭವಾಗಿದ್ದಲ್ಲದೆ, ದೇಹತೂಕ ಏಕಾಏಕಿ ಕಡಿಮೆಯಾಗಿತ್ತು. ವಾದಿ ಹದ್ದಾದಿಗೆ ಏನಾಗಿದೆ ಎಂದು ತಿಳಿಯದೇ ಬಾಗ್ದಾದ್‌ನ ವೈದ್ಯರು ಪರದಾಟ ನಡೆಸಿದ್ದರು. ಕೊನೆಗೆ 1978ರ ಮಾರ್ಚ್ 29 ರಂದು ಬಾಗ್ದಾದ್‌ನ ಆಸ್ಪತ್ರೆಯಲ್ಲಿ ಹದ್ದಾದ್ ಸಾವು ಕಂಡಿದ್ದ.ಈತ ಪಾಪುಲರ್ ಫ್ರಂಟ್ ಲಿಬರೇಷನ್ ಪ್ಯಾಲಿಸ್ತೇನ್ ಸಂಘಟನೆಯ ನಾಯಕನಾಗಿದ್ದ.
ಇಸ್ರೇಲಿಂದ ಹೊಸ ರೀತಿ ದಾಳಿ?: ಎರಡು ದೇಶಗಳಲ್ಲಿ ಸಾವಿರಾರು ಪೇಜರ್ ಬಾಂಬರ್‌ಗಳ ಸ್ಫೋಟ..!
ಪ್ಯಾರಾಲೈಸ್ ಡ್ರಗ್: ವಿಶೇಷ ರೀತಿಯ ಪ್ಯಾರಾಲೈಸ್ ಡ್ರಗ್ ಮೂಲಕ ಹಮಾಸ್‌ನ ಶಸ್ತ್ರಾಸ್ತ್ರ ಪೂರೈಕೆದಾನ ಕಥೆಯನ್ನು ಮೊಸಾದ್ ಏಜೆಂಟ್ ಮುಗಿಸಿದ್ದ. 2010ರಲ್ಲಿ ಮೊಹ್ಮದ್ ಆಲ್ ಮಾಬೌಹ್ಗೆ ಪ್ಯಾರಾಲೈಸ್ ಡ್ರಗ್ ನೀಡಿ ಹತ್ಯೆ ಮಾಡಲಾಗಿತ್ತು. ಮೊಹ್ಮದ್ ಉಳಿದುಕೊಂಡಿದ್ದ ಹೋಟೆಲ್ನಲ್ಲಿ ಮೊಸಾದ್ ಏಜೆಂಟ್ ಉಳಿದುಕೊಂಡಿದ್ದ. ಹತ್ಯೆಗೆ ದುಬೈ, ಯುರೋಪಿಯನ್ ರಾಷ್ಟ್ರಕ್ಕೂ ಮೊಸಾದ್ ಏಜೆಂಟ್ ಹೋಗಿದ್ದ. ಟೆನ್ನಿಸ್ ಆಟಗಾರನಂತೆ ವರ್ತಿಸಿ ಪ್ಯಾರಾಲೈಸ್ ಡ್ರಗ್ ನೀಡಿ ಮೊಹ್ಮದ್‌ನನ್ನು ಕೊಲೆ ಮಾಡಲಾಗಿತ್ತು.
ಇಸ್ರೇಲ್ ಜೊತೆ ಉತ್ತಮ ಸಂಬಂಧ, ಸೌದಿ ರಾಜನಿಗೆ ಶುರುವಾಯ್ತು ಜೀವಭಯ!