ಹಣೆ ಮೇಲೆ ಈತ ಕ್ಯೂಆರ್ ಕೋಡ್ ಹಾಕಿಕೊಂಡ ವ್ಯಕ್ತಿ, ಕಾರಣ ಕೇಳಿದ್ರೆ ದಂಗಾಗ್ತೀರಾ!

By Suvarna News  |  First Published Feb 29, 2024, 12:15 PM IST

ಜನರು ವಿಚಿತ್ರ ಪ್ರಯೋಗ ಮಾಡ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅದ್ರ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಈಗ ಮತ್ತೊಬ್ಬ ವ್ಯಕ್ತಿಯ ಹುಚ್ಚಾಟ ಸುದ್ದಿ ಮಾಡಿದೆ. ಆತನ ಹಣೆ ಮೇಲೆ ಕ್ಯೂಆರ್ ಕೋಡ್ ಮಿಂಚುತ್ತಿದೆ. 
 


ಟ್ಯಾಟೂ ಪ್ರೇಮಿಗಳ ಸಂಖ್ಯೆ ಕಿಂಚಿತ್ತೂ ಕಡಿಮೆ ಆಗಿಲ್ಲ. ಹಳೆ ಟ್ಯಾಟೂ ಸ್ಟೈಲ್ ಗೆ ಗುಡ್ ಬೈ ಹೇಳಿ ಜನರು ಹೊಸ ಟ್ಯಾಟೂ ಹಾಕಿಸಿಕೊಳ್ತಿದ್ದಾರೆ. ಟ್ಯಾಟೂದಲ್ಲಿ ಈಗ ಸಾಕಷ್ಟು ವೆರೈಟಿಗಳನ್ನು ನಾವು ನೋಡ್ಬಹುದು. ತಮ್ಮ ಪ್ರೇಮಿಗಳ ಹೆಸರು, ಚಿಹ್ನೆ ಹಾಕಿಸಿಕೊಂಡವರು ಐದರಲ್ಲಿ ಒಬ್ಬರು ಸಿಗ್ತಾರೆ. ಮೈಮೇಲೆ ಹಚ್ಚೆ ಇಲ್ಲ ಎನ್ನುವ ಜನರು ಸಿಗೋದೇ ಬಹಳ ಅಪರೂಪ ಎನ್ನುವಂತಾಗಿದೆ. ಕೆಲವರು ಸೇಡು ತೀರಿಸಿಕೊಳ್ಳಲು ತಮ್ಮ ಪ್ರೇಮಿಗಳ ಹೆಸರನ್ನು ಕಾಲು, ಹೊಟ್ಟೆ ಕೆಳಭಾಗದಲ್ಲಿ ಹಾಕಿಸಿಕೊಂಡು ಸುದ್ದಿ ಮಾಡಿದ್ದಿದೆ. 

ಭಾರತ (India) ಸೇರಿದಂತೆ ವಿಶ್ವದಾದ್ಯಂತ ಟ್ಯಾಟೂ (Tattoo) ಜನಪ್ರಿಯತೆ ಹೆಚ್ಚಿದೆ. ಇಡೀ ದೇಹಕ್ಕೆ ಟ್ಯಾಟೂ ಹಾಕಿಸಿಕೊಂಡವರಿದ್ದಾರೆ. ಅದ್ರಲ್ಲಿ ದಾಖಲೆ ಬರೆಯಲು ದಿನಕ್ಕೊಂದು ಪ್ರಯೋಗ ನಡೆಯುತ್ತಿರುತ್ತದೆ. ಈಗ ಅಂಥಹದ್ದೇ ಒಂದು ಪ್ರಯೋಗ ವೈರಲ್ ಆಗಿದೆ.

Latest Videos

undefined

ಸದ್ಯ ಕ್ಯೂಆರ್ ಕೋಡ್ (QR Code) ಚರ್ಚೆಯಲ್ಲಿರುವಂತಹದ್ದು. ನಿಮಗೆ ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ಆನ್ಲೈನ್ ಖಾತೆ ತೆರೆಯುವವರೆಗೂ ಕ್ಯೂಆರ್ ಕೋಡ್ ಕಾಣಿಸುತ್ತದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಬರಿ ಹಣ ವರ್ಗಾವಣೆ ಮಾಡೋದು ಮಾತ್ರವಲ್ಲ, ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಹೊಟೇಲ್ ಮೆನ್ಯು, ಇನ್ಸ್ಟಾ, ವಾಟ್ಸ್ ಅಪ್ ನಂತಹ ಸಾಮಾಜಿಕ ಜಾಲತಾಣಗಳು ತೆರೆದುಕೊಳ್ತವೆ. ಇದನ್ನೇ ವ್ಯಕ್ತಿಯೊಬ್ಬ ಭಿನ್ನವಾಗಿ ಬಳಸಿದ್ದಾನೆ. ಕ್ಯೂ ಆರ್ ಕೋಡ್ ಸೆಂಡ್ ಮಾಡೋದು ಅಥವಾ ಬೋರ್ಡ್ ಹಿಡಿದು ತಿರುಗೋದು ಏಕೆ ಅಂತ ತನ್ನ ಹಣೆ ಮೇಲೆ ಕ್ಯೂಆರ್ ಕೋಡ್ ಹಚ್ಚೆ ಹಾಕಿಸಿಕೊಂಡಿದ್ದಾನೆ.  

ಸಾವಿನ ಮನೆಯಲ್ಲೂ ಸೆಲ್ಫಿ ಕೇಳಿದ ಫ್ಯಾನ್: ಮುಜುಗರಕ್ಕೊಳಗಾದರು ತಾಳ್ಮೆ ವಹಿಸಿದ ವಿದ್ಯಾ ಬಾಲನ್

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹಣೆ ಮೇಲೆ ಕ್ಯೂ ಆರ್ ಕೋಡ್ ಹಚ್ಚೆ ಹಾಕಿಸಿಕೊಂಡ ವ್ಯಕ್ತಿಯನ್ನು ನೀವು ನೋಡ್ಬಹುದು. Unilad ಹೆಸರಿನ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬ ಆರಂಭದಲ್ಲಿ ಮಲಗಿರುವುದನ್ನು ನೀವು ನೋಡ್ಬಹುದು. ಆತನ ಹಣೆಗೆ ಕ್ಯೂಆರ್ ಕೋಡ್ ಚಿತ್ರವನ್ನು ಅಂಟಿಸಲಾಗುತ್ತದೆ. ನಂತ್ರ ಅದ್ರ ಮೇಲೆ ಹಚ್ಚೆ ಹಾಕುವ ಸೂಜಿಯಿಂದ ಚುಚ್ಚಲಾಗುತ್ತದೆ. ಟ್ಯಾಟೂ ಹಾಕಿಸಿಕೊಳ್ತಿರುವ ವ್ಯಕ್ತಿಗೆ ನೋವಾಗ್ತಿದೆ ಎಂಬುದನ್ನು ಆತನ ಮುಖ ನೋಡಿದ್ರೆ ನೀವು ಪತ್ತೆ ಮಾಡಬಹುದು. ಕ್ಯೂಆರ್ ಕೋಡ್ ಟ್ಯಾಟೂ ಆಗುವವರೆಗೂ ನೋವು ನುಂಗಿಕೊಂಡಿದ್ದ ವ್ಯಕ್ತಿ ಮುಖದಲ್ಲಿ ಕೊನೆಯಲ್ಲಿ ನಗು ಬರುತ್ತದೆ.

ಕ್ಯೂ ಆರ್ ಕೋಡ್  ಹಚ್ಚೆ ಹಾಕಿದ ಟ್ಯಾಟೂ ಆರ್ಟಿಸ್ಟ್ ಎಲ್ಲ ಮುಗಿದ ಮೇಲೆ ವ್ಯಕ್ತಿ ಹಣೆ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡ್ತಾನೆ. ಆತ ಸ್ಕ್ಯಾನ್ ಮಾಡಿದ ತಕ್ಷಣ, ವ್ಯಕ್ತಿಯ ಇನ್ಸ್ಟಾಗ್ರಾಮ್ ಖಾತೆ ತೆರೆದುಕೊಳ್ಳುತ್ತದೆ.

ನನ್ನ ಇನ್ಸ್ಟಾಗ್ರಾಮ್ ಖಾತೆ ಹೆಸರು ಇದು, ಪ್ಲೀಸ್ ಸಬ್ಸ್ಕ್ರೈಬ್ ಮಾಡಿ ಎಂದು ಸ್ನೇಹಿತರು, ಆಪ್ತರಿಗೆ ರಿಕ್ವೆಸ್ಟ್ ಮಾಡುವ ಬದಲು ಇದು ಒಳ್ಳೆ ಐಡಿಯಾ ಎಂದು ಕೆಲವರು ಹೇಳುತ್ತಿದ್ದಾರೆ. ನಿಮ್ಮ ಖಾತೆ ಹೆಸರು ಅಥವಾ ಲಿಂಕ್ ಕಳುಹಿಸುವ ಅವಶ್ಯಕತೆ ಇದರಲ್ಲಿಲ್ಲ. ಹಣೆ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಂದ್ರೆ ಆಯ್ತು. ಆತನ ಇನ್ಸ್ಟಾ ಖಾತೆ ಹೆಚ್ಚಿನ ಕೆಲಸವಿಲ್ಲದೆ ತೆರೆದುಕೊಳ್ಳುತ್ತದೆ. 

ಕಾಟನ್ ಕ್ಯಾಂಡಿ ತಿನ್ನೋದ್ರಿಂದ ಶುಗರ್, ಹೃದಯ ಸಮಸ್ಯೆ ಹೆಚ್ಚುತ್ತೆ!

ಇನ್ಸ್ಟಾಗ್ರಾಮ್ ನಲ್ಲಿ ಈತನ ವಿಡಿಯೋ ವೈರಲ್ ಆಗಿದೆ. 1.7 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ. ಬಳಕೆದಾರರು ಇದು ನಕಲಿ ಟ್ಯಾಟೂ ಎನ್ನುತ್ತಿದ್ದಾರೆ. ಒಂದ್ವೇಳೆ ಆತನ ಟ್ಯಾಟೂವಿನಿಂದಲೇ ಖಾತೆ ಓಪನ್ ಆಗ್ತಿದ್ದರೆ ಅದ್ರಲ್ಲಿ ಅಪಾಯವಿದೆ ಎಂಬ ಎಚ್ಚರಿಕೆಯನ್ನೂ ಜನರು ನೀಡಿದ್ದಾರೆ. ಇದು ನಿಜವೇ ಆಗಿದ್ದರೆ ಇದು ಮೂರ್ಖ ಅಮೆರಿಕನ್ನರ ಇನ್ನೊಂದು ಟ್ಯಾಟೂ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.   

 
 
 
 
 
 
 
 
 
 
 
 
 
 
 

A post shared by UNILAD (@unilad)

click me!