ರೆಮ್‌ಡೆಸಿವರ್‌, ಎಚ್‌ಸಿಕ್ಯು ಸೇರಿ 4 ಔಷಧ ಕೊರೋನಾಗೆ ನಿಷ್ಪ್ರಯೋಜಕ!

By Kannadaprabha NewsFirst Published Oct 17, 2020, 8:35 AM IST
Highlights

ರೆಮ್‌ಡೆಸಿವರ್‌, ಎಚ್‌್ಸಸಿಕ್ಯು ಸೇರಿ 4 ಔಷಧ ಕೊರೋನಾಗೆ ನಿಷ್ೊ್ರಯೋಜಕ!| ಯಾವುದೇ ಪರಿಣಾಮ ಬೀರುವುದಿಲ್ಲ: ಡಬ್ಲ್ಯುಎಚ್‌ಒ| ಟ್ರಂಪ್‌ ಸೇವಿಸಿದ್ದ ಔಷಧದಿಂದಲೂ ಪ್ರಯೋಜನವಿಲ್ಲ

ಜಿನೆವಾ(ಅ.17): ಕೊರೋನಾ ರೋಗಿಗಳ ಚಿಕಿತ್ಸೆಗೆಂದು ವಿವಿಧ ದೇಶಗಳು ಬಳಕೆ ಮಾಡುತ್ತಿರುವ ರೆಮ್‌ಡೆಸಿವಿರ್‌, ಹೈಡ್ರಾಕ್ಸಿಕ್ಲೋರೋಕ್ವಿನ್‌ (ಎಚ್‌ಸಿಕ್ಯು), ಲೋಪಿನವಿರ್‌/ರಿಟೊನವಿರ್‌ ಔಷಧಗಳಿಂದ ಏನೂ ಪ್ರಯೋಜನವಾಗುವುದಿಲ್ಲ. ಗಂಭೀರ ಪ್ರಮಾಣದ ಸೋಂಕು ಇರುವ ವ್ಯಕ್ತಿಗಳಲ್ಲಿ ಈ ಔಷಧಗಳು ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಅಧ್ಯಯನ ವರದಿ ತಿಳಿಸಿದೆ.

ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್‌ ಮಾತ್ರೆ ಕಳಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರಂಭದಲ್ಲಿ ಧಮಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದರು. ಇತ್ತೀಚೆಗೆ ಕೊರೋನಾಗೆ ತುತ್ತಾಗಿದ್ದಾಗ ಟ್ರಂಪ್‌ ಅವರಿಗೆ ರೆಮ್‌ಡೆಸಿವಿರ್‌ ಸೇರಿದಂತೆ ಹಲವು ಔಷಧಗಳ ಸಂಯುಕ್ತ ಚಿಕಿತ್ಸೆ ನೀಡಲಾಗಿತ್ತು. ಇದೀಗ ಆ ಎರಡೂ ಔಷಧಗಳಿಂದ ಯಾವುದೇ ಪರಿಣಾಮವಾಗುವುದಿಲ್ಲ ಎಂದು 6 ತಿಂಗಳ ಕಾಲ ವಿಶ್ವದ ವಿವಿಧೆಡೆ ಅಧ್ಯಯನ ನಡೆಸಿ ಸಿದ್ಧಪಡಿಸಿರುವ ವರದಿಯನ್ನು ಡಬ್ಲ್ಯುಎಚ್‌ಒ ಬಿಡುಗಡೆ ಮಾಡಿದೆ.

"

ಎಚ್‌ಸಿಕ್ಯು, ಲೊಪಿನವಿರ್‌/ರಿಟೊನವಿರ್‌ ಔಷಧಗಳನ್ನು ಕೊರೋನಾ ರೋಗಿಗಳಿಗೆ ನೀಡಿದಾಗ ಅವರಲ್ಲಿ ಚೇತರಿಕೆ ಕಂಡುಬಂದಿಲ್ಲ ಎಂದು ಈ ಹಿಂದೆ ಕೆಲವೊಂದು ಸಂಸ್ಥೆಗಳು ಹೇಳಿದ್ದವು. ಆದರೆ ಈಗ ವಿಶ್ವದ ವಿವಿಧೆಡೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಬಳಸಲಾಗುತ್ತಿರುವ ರೆಮ್‌ಡೆಸಿವಿರ್‌ ವಿಷಯದಲ್ಲೂ ಡಬ್ಲ್ಯುಎಚ್‌ಒ ಅದೇ ಮಾತು ಹೇಳಿರುವುದು ಮಹತ್ವ ಪಡೆದುಕೊಂಡಿದೆ.

ಎಚ್‌ಸಿಕ್ಯು ರೀತಿ ರೆಮ್‌ಡೆಸಿವಿರ್‌ ಕೂಡ ಮಲೇರಿಯಾ ಔಷಧ. ಇದನ್ನು ಮೊದಲು ಕೊರೋನಾ ರೋಗಿಗಳ ಮೇಲೆ ಬಳಸಲು ಅಮೆರಿಕ ಅನುಮತಿ ನೀಡಿತ್ತು. ನಂತರ ಬ್ರಿಟನ್‌, ಐರೋಪ್ಯ ಒಕ್ಕೂಟದಲ್ಲಿ ಬಳಸಲಾಯಿತು. ಸದ್ಯ ಭಾರತದಲ್ಲೂ ಬಳಕೆ ಮಾಡಲಾಗುತ್ತಿದೆ. 5ರಿಂದ 10 ದಿನಗಳ ಕಾಲ ಇಂಜೆಕ್ಷನ್‌ ರೂಪದಲ್ಲಿ ಪಡೆಯುವ ಈ ಚಿಕಿತ್ಸೆಗೆ 1.87 ಲಕ್ಷ ರು. ವೆಚ್ಚವಾಗುತ್ತದೆ. ಈ ಚಿಕಿತ್ಸೆ ಪಡೆದವರಲ್ಲಿ ಮೂತ್ರಕೋಶ ಸಮಸ್ಯೆ ಕಂಡುಬಂದ ಬಗ್ಗೆ ಕೆಲವರು ಹೇಳಿದ್ದು, ಆ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಐರೋಪ್ಯ ಔಷಧ ಸಂಸ್ಥೆ ತಿಳಿಸಿದೆ.

ಕೊರೋನಾಗೆ ಸದ್ಯ ಯಾವುದೇ ಲಸಿಕೆ ಇಲ್ಲದ ಕಾರಣ ಲಭ್ಯ ಇರುವ ಔಷಧವನ್ನೇ ರೋಗಿಗಳ ಮೇಲೆ ಕೆಲವೊಂದು ಪರೀಕ್ಷೆ ಬಳಿಕ ಪ್ರಯೋಗಿಸಲಾಗುತ್ತಿದೆ.

click me!