ಕೊರೋನಾದಿಂದ ವಿಶ್ವ ಆರ್ಥಿಕತೆ ಘೋರ ಕುಸಿತ

By Kannadaprabha NewsFirst Published Oct 16, 2020, 10:27 AM IST
Highlights

ವಿಶ್ವದ ಆರ್ಥಿಕತೆ ಮೇಲೆ ಕೊರೋನಾ ಮಹಾಮಾರಿ ತೀವ್ರ ಹೊಡೆತ ಕೊಟ್ಟಿದೆ. 

 ವಾಷಿಂಗ್ಟನ್‌ (ಅ.16):  ಕೊರೋನಾ ವೈರಸ್‌ನಿಂದಾಗಿ ವಿಶ್ವದ ಆರ್ಥಿಕತೆ 1930ರ ಮಹಾಕುಸಿತದ ಬಳಿಕ ಗಂಭೀರ ಹಿಂಜರಿತವೊಂದನ್ನು ಅನುಭವಿಸುವಂತಾಗಿದೆ ಎಂದು ವಿಶ್ವ ಬ್ಯಾಂಕ್‌ ಅಧ್ಯಕ್ಷ ಡೇವಿಡ್‌ ಮಾಲ್‌ಪಾಸ್‌ ತಿಳಿಸಿದ್ದಾರೆ. ಅಲ್ಲದೆ ಅಭಿವೃದ್ಧಿಶೀಲ ರಾಷ್ಟ್ರಗಳು ಹಾಗೂ ಬಡ ದೇಶಗಳಿಗೆ ಕೊರೋನಾ ಪಿಡುಗು ಎಂಬುದು ವಿನಾಶಕಾರಿ ವಿಪತ್ತಿನಂತಾಗಿದೆ ಎಂದು ಬಣ್ಣಿಸಿದ್ದಾರೆ. ಆರ್ಥಿಕ ಕುಸಿತದಿಂದಾಗಿ ಹಲವು ದೇಶಗಳು ಸಾಲದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದೂ ಎಚ್ಚರಿಸಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವ ಬ್ಯಾಂಕಿನ ವಾರ್ಷಿಕ ಸಭೆಗಳಿಗೆ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಭಿವೃದ್ಧಿಶೀಲ ದೇಶಗಳಲ್ಲಿ ಕೊರೋನಾ ಎಂಬುದು ಕಡುಬಡವರ ಪಟ್ಟಿಗೆ ಮತ್ತಷ್ಟುಜನರನ್ನು ಸೇರ್ಪಡೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಹಾಗೂ ಔಷಧ ಸೌಲಭ್ಯ ಹೊಂದಿದ್ದ ದೇಶಗಳಿಗೆ ಅವನ್ನು ಒದಗಿಸಲು 88 ಸಾವಿರ ಕೋಟಿ ರು. ತುರ್ತು ಆರೋಗ್ಯ ಯೋಜನೆ ಮುಂದುವರಿಸಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

2021ರಲ್ಲಿ ಚೀನಾ ಆರ್ಥಿಕತೆ ಹಿಂದಿಕ್ಕಲಿದೆ ಭಾರತ! ...

ಭಾರತ ಉದ್ದಿಮೆ ಉಳಿಸಲಿ:  ಇದೇ ವೇಳೆ ಮಾತನಾಡಿದ ಐಎಂಎಫ್‌ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ, ಕೊರೋನಾದಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ದಿವಾಳಿಯಾಗದಂತೆ ನೋಡಿಕೊಳ್ಳಲು ಅವುಗಳಿಗೆ ರಕ್ಷಣೆ ಹಾಗೂ ಬೆಂಬಲವನ್ನು ಭಾರತ ನೀಡಬೇಕು. ಅಲ್ಲದೆ ದುರ್ಬಲ ವರ್ಗಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದ್ದಾರೆ.

click me!